ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ನಮ್ಮ ಮೆಟ್ರೋ ಹೊಸ ಮಾರ್ಗದ ಕುರಿತು ಮಹತ್ವದ ಅಪ್ಡೇಟ್ ತಿಳಿಸಿದೆ. (ಸಾಂದರ್ಭಿಕ ಚಿತ್ರ) ವೈಟ್ಫೀಲ್ಡ್ನಿಂದ ಕೆಆರ್ ಪುರ ನಡುವಿನ ಮುಂಬರುವ ಮೆಟ್ರೋ ಮಾರ್ಗವು ಲಕ್ಷಾಂತರ ಪ್ರಯಾಣಿಕರ ಪಾಲಿಗೆ ವರದಾನವಾಗಲಿದೆ. (ಸಾಂದರ್ಭಿಕ ಚಿತ್ರ) ಈ ಮಾರ್ಗದ ಮೆಟ್ರೋ ಮಾರ್ಚ್ ತಿಂಗಳಲ್ಲಿ ಆರಂಭವಾಗಲಿದೆ ಎಂದು ಹೇಳಲಾಗಿದೆ. ವೈಟ್ಫೀಲ್ಡ್ನಿಂದ ಕೆಆರ್ ಪುರ ನಡುವೆ ಒಟ್ಟು 12 ನಿಲ್ದಾಣಗಳು ಇರಲಿವೆ. (ಸಾಂದರ್ಭಿಕ ಚಿತ್ರ) ಸದ್ಯದ ಮಾಹಿತಿಗಳ ಪ್ರಕಾರ ಈ ಮಾರ್ಗದ ಸೇವೆ ಆರಂಭವಾದ ನಂತರ ವೈಟ್ಫೀಲ್ಡ್ನಿಂದ ಹೊರಟು ಕೇವಲ 24 ನಿಮಿಷಗಳಲ್ಲಿ ನೀವು ಕೆಆರ್ ಪುರ ತಲುಪಬಹುದಾಗಿದೆ. (ಸಾಂದರ್ಭಿಕ ಚಿತ್ರ) ಈ ಮಾರ್ಗದಲ್ಲಿ ಪ್ರಾಯೋಗಿಕ ಚಾಲನೆ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದ್ದು, ನಂತರ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ. (ಸಾಂದರ್ಭಿಕ ಚಿತ್ರ) ಕಳೆದ ವರ್ಷ ಅಕ್ಟೋಬರ್ನಲ್ಲಿ ವೈಟ್ಫೀಲ್ಡ್ ಮತ್ತು ಕೆಆರ್ ಪುರ ನಡುವೆ ಒಂದು ರೈಲಿನಲ್ಲಿ ಪ್ರಾಯೋಗಿಕ ಓಡಾಟ ನಡೆಸಲಾಗಿತ್ತು. (ಸಾಂದರ್ಭಿಕ ಚಿತ್ರ) ಒಟ್ಟಾರೆ ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಒಂದೊಳ್ಳೆ ಸುದ್ದಿಯೊಂದು ಹೊರಬಿದ್ದಿರೋದಂತೂ ಸತ್ಯ. (ಸಾಂದರ್ಭಿಕ ಚಿತ್ರ)