ಹೊಸ ವರ್ಷದ ಸಂಭ್ರಮದಲ್ಲಿ ನಮ್ಮ ಮೆಟ್ರೋಗೆ ಭರ್ಜರಿ ಆದಾಯ ಹರಿದುಬಂದಿದೆ. ಒಂದೇ ದಿನ ನಮ್ಮ ಮೆಟ್ರೊಗೆ ₹1.7 ಕೋಟಿಗೂ ಹೆಚ್ಚಿನ ಆದಾಯ ನಮ್ಮ ಮೆಟ್ರೋಗೆ ದೊರೆತಿದೆ. (ಸಾಂದರ್ಭಿಕ ಚಿತ್ರ) ಡಿಸೆಂಬರ್ 31 ಹಾಗೂ ಜನವರಿ 1ರ ಮಧ್ಯರಾತ್ರಿ 2 ಗಂಟೆಯವರೆಗೂ ₹1.7ಕೋಟಿ ಆದಾಯ ಮೆಟ್ರೋ ಪಾಲಾಗಿದೆ. (ಸಾಂದರ್ಭಿಕ ಚಿತ್ರ) ಹೊಸ ವರ್ಷದ ದಿನ ಒಂದೇ ದಿನದಲ್ಲಿ 6,29,903 ಮಂದಿ ನಮ್ಮ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. (ಸಾಂದರ್ಭಿಕ ಚಿತ್ರ) ಸಾರ್ವಜನಿಕರ ಅನುಕೂಲಕ್ಕೆ ಬೆಳಗಿನ ಜಾವ 2 ಗಂಟೆಯವರೆಗೂ ನಮ್ಮ ಮೆಟ್ರೋ ವ್ಯವಸ್ಥೆ ಏರ್ಪಡಿಸಿದ್ದು ಸಾವಿರಾರು ಜನರಿಗೆ ಅನುಕೂಲ ಕಲ್ಪಿಸಿತ್ತು. (ಸಾಂದರ್ಭಿಕ ಚಿತ್ರ) ನಮ್ಮ ಮೆಟ್ರೋಗೆ ಪ್ರತಿದಿನ ಹೆಚ್ಚು ಕಮ್ಮಿ 1.2 ಕೋಟಿಗೂ ಹೆಚ್ಚು ಆದಾಯ ಬರುತ್ತೆ. (ಸಾಂದರ್ಭಿಕ ಚಿತ್ರ) ಈ ಪೈಕಿ ಮೆಟ್ರೋದಲ್ಲಿ 1 ಕೋಟಿಗೂ ಅಧಿಕ ಹಣ ದಿನ ಖರ್ಚಾಗುತ್ತಿದೆ. ದಿನಂಪ್ರತಿ 20 ಲಕ್ಷ ರೂ ಅಧಿಕ ಹಣ ನಮ್ಮ ಮೆಟ್ರೋಗೆ ಲಾಭವಾಗುತ್ತಿದೆ. (ಸಾಂದರ್ಭಿಕ ಚಿತ್ರ) ಪ್ರತಿನಿತ್ಯ ಸರಾಸರಿ 5 ಲಕ್ಷ ಜನರಿಂದ ಮೆಟ್ರೋ ಬಳಕೆಯಾಗುತ್ತಿದೆ. ತಿಂಗಳಿಗೆ 30 ಕೋಟಿ ರೂ. ಆದಾಯ ಬರುತ್ತಿದ್ದು, 5 ಕೋಟಿ ಲಾಭವಾಗುತ್ತಿದೆ. (ಸಾಂದರ್ಭಿಕ ಚಿತ್ರ) ಹೊಸ ವರ್ಷದ ಮೊದಲ ದಿನ ಸಾಮಾನ್ಯ ಆದಾಯಕ್ಕಿಂದ ₹50 ಲಕ್ಷಕ್ಕೂ ಹೆಚ್ಚಿನ ಆದಾಯ ಹರಿದುಬಂದಿದೆ. (ಸಾಂದರ್ಭಿಕ ಚಿತ್ರ)