ಬೆಂಗಳೂರಿನ ನಾಗರಿಕರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮುಖ ಘೋಷಣೆ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
2/ 8
2024ರೊಳಗೆ ನಮ್ಮ ಮೆಟ್ರೊ 2ನೇ ಹಂತ ಪೂರ್ಣಗೊಳ್ಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)
3/ 8
ಅಷ್ಟೇ ಅಲ್ಲ, ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಯ ಕುರಿತು ಸಹ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದ್ದು ₹26,000 ಕೋಟಿ ವೆಚ್ಚದ 3ನೇ ಹಂತದ ಕಾಮಗಾರಿಗೆ ಅನುಮೋದನೆ ಸಿಕ್ಕ ನಂತರ ಬೇಗ ಕಾಮಗಾರಿ ನಡೆಸಲು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
4/ 8
ಬೆಂಗಳೂರಿನ ನಮ್ಮ ಮೆಟ್ರೋ 2ನೇ ಹಂತದ ಯೋಜನೆಯು 73,921 ಕಿಲೋ ಮೀಟರ್ ದೂರದ ಮಾರ್ಗವನ್ನು ಒಳಗೊಂಡಿದೆ. (ಸಾಂದರ್ಭಿಕ ಚಿತ್ರ)
5/ 8
ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಯ ಮೈಸೂರು ರಸ್ತೆ-ಪಟ್ಟಣಗೆರೆ, ಪರ್ಪಲ್ ಲೈನ್ನ ರೀಚ್-2ಎ ಮಾರ್ಗವು 2025ರ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭವಾಗಿದೆ. (ಸಾಂದರ್ಭಿಕ ಚಿತ್ರ)
6/ 8
ನಮ್ಮ ಮೆಟ್ರೋ 2ನೇ ಹಂತದಲ್ಲಿ ಲೈನ್ 3ರ ಮಾರ್ಗವು ಹಳದಿ ಬಣ್ಣದಲ್ಲಿ ಇರಲಿದೆ. ಆರ್ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ಈ ಮೆಟ್ರೋ ರೈಲು ಸಂಚರಿಸಲಿದೆ. (ಸಾಂದರ್ಭಿಕ ಚಿತ್ರ)
7/ 8
ಲೈನ್ 4 ಮಾರ್ಗವು ಗುಲಾಬಿ ಬಣ್ಣದಲ್ಲಿರಲಿದೆ. ಕಾಳೇನ ಅಗ್ರಹಾರದಿಂದ (ಹಿಂದಿನ ಗೊಟ್ಟಿಗೆರೆ) ನಾಗವಾರ ಮಾರ್ಗವಾಗಿ ಈ ಮೆಟ್ರೋ ರೈಲು ಸೇವೆ ಒದಗಿಸಲಿದೆ. (ಸಾಂದರ್ಭಿಕ ಚಿತ್ರ)
8/ 8
ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಯ ನೇರಳೆ ಲೈನ್ ಮೈಸೂರು ರಸ್ತೆ-ಚಲ್ಲಘಟ್ಟದ ನಡುವೆ ಸಂಪರ್ಕ ಕಲ್ಪಿಸಲಿದೆ. ನಮ್ಮ ಮೆಟ್ರೋ 2ನೇ ಹಂತದ ನೇರಳೆ ಲೈನ್ ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ನಡುವೆ ಸಂಚಾರ ಮಾಡಲಿದ್ದು ಈ ಮಾರ್ಗದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ. (ಸಾಂದರ್ಭಿಕ ಚಿತ್ರ)