ಬೆಂಗಳೂರು ಮೈಸೂರು ಹೆದ್ದಾರಿಯ ನಿರ್ಮಿಸಿದ್ದು ಯಾರು ಎಂಬ ಕುರಿತು ಚರ್ಚೆ, ಟೀಕೆ ಎಲ್ಲವೂ ನಡೆದಿತ್ತು. ಇತ್ತ ಸಂಸದ ಪ್ರತಾಪ್ ಸಿಂಹ ಬಿಜೆಪಿಗೆ ಈ ಹೆದ್ದಾರಿಯ ಕ್ರೆಡಿಟ್ ನೀಡಿದರೆ ಮಾಜಿ ಪ್ರಧಾನಿ ಕನಸಿನ ಕೂಸು ಈ ಹೆದ್ದಾರಿ ಎಂದು ಜೆಡಿಎಸ್ ಪ್ರತಿಪಾದಿಸಿತ್ತು. ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರೂ ಈ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ಕೊಡುಗೆ ಕುರಿತು ಮಾತನಾಡಿದ್ದರು.