ಲಾಲ್ಬಾಗ್ ಫ್ಲವರ್ ಶೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದಾರೆ. "ಈ ಫ್ಲವರ್ ಶೋನಿಂದ ಸಸ್ಯ ಸಂಪತ್ತು ಪ್ರದರ್ಶನ ಆಗ್ತಿದೆ. ರಾಜ್ಯಾದ್ಯಂತ ಹಸಿರು ಪರಿಸರ ವಿಸ್ತರಣೆ ಆಗಬೇಕಿದೆ. ರಾಜ್ಯದಲ್ಲಿ ಹಸಿರೀಕರಣ ವಿಸ್ತರಣೆಗೆ ಬಜೆಟ್ ನಲ್ಲಿ 100 ಕೋಟಿ ಮೀಸಲಿಡುತ್ತೇವೆ. ಗುಡ್ಡಗಾಡು ಪ್ರದೇಶದಲ್ಲಿ ಹಸಿರು ಸಮೃದ್ದಿಯಾಗಬೇಕು ಎಂದು ಅವರು ಕರೆ ನೀಡಿದ್ದಾರೆ.