Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

ಒಟ್ಟು 500 ಬಗೆಯ ವಿವಿಧ ಜಾತಿಯ ಹೂವುಗಳಿಂದ ಅರಳಿಲಿದೆ ಹೂವಿನ ಲೋಕ. ಪುನೀತ್ ರಾಜ್​ಕುಮಾರ್ ಜೊತೆಗೆ ವರನಟ ರಾಜ್ ಕುಮಾರ್ ಅವರ ಪುಷ್ಪಪ್ರತಿಮೆಯೂ ಇರಲಿದೆ. ನೀವೇ ನೋಡಿ ಚಂದದ ಫೋಟೊಗಳು..

First published:

  • 112

    Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್ ಬಾಗ್ ನಲ್ಲಿ ಫಲ ಪುಷ್ಪಪ್ರದರ್ಶನ ಮಾಡಲಾಗುತ್ತಿದೆ. ಈ ಬಾರಿ ಅಪ್ಪು ಮತ್ತು ಡಾ.ರಾಜ್​ಕುಮಾರ್ ಥೀಮ್ನಲ್ಲಿ ಫಲಪುಷ್ಪ ಪ್ರದರ್ಶನ ಮಾಡುತ್ತಿರುವುದು ವಿಶೇಷವಾಗಿದೆ.

    MORE
    GALLERIES

  • 212

    Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    ಲಾಲ್ಬಾಗ್ನಲ್ಲಿ ಈಗಾಗಲೇ ಚಿನ್ನ ಲೇಪಿತ ಅಪ್ಪು ಪ್ರತಿಮೆಯನ್ನು ನಿರ್ಮಿಸಲಾಗಿದೆ. ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಜ್ಯೋತಿಯನ್ನ ಬೆಳ್ಳಿ ರಥದ ಮೂಲಕ ಲಾಲ್ ಬಾಗ್ ವರೆಗೂ ಮೆರವಣಿಗೆ ಮಾಡಲಾಗುತ್ತದೆ.

    MORE
    GALLERIES

  • 312

    Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    ಆಗಸ್ಟ್ 15 ರವರೆಗೆ ಈ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು, ಪ್ರವಾಸಿಗರು, ವಿದೇಶಿ ಪ್ರೇಕ್ಷಕರು ಹಾಗೂ ಹೆಚ್ಚಾಗಿ ಶಾಲಾ ಮಕ್ಕಳ ಆಗಮಿಸುವ ನಿರೀಕ್ಷೆಯಿದೆ.

    MORE
    GALLERIES

  • 412

    Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    ಪ್ರತಿ ದಿನ ಬೆಳಗ್ಗೆ 8 ರಿಂದ ಸಂಜೆ 6:30ರ ವರೆಗೆ ಫ್ಲವರ್ ಶೋ ಓಪನ್ ಇರಲಿದೆ. 1 ರಿಂದ 10 ನೇ ತರಗತಿ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ವಯಸ್ಕರಿಗೆ ರಜಾದಿನಗಳಲ್ಲಿ 100, ರೂ., ಸಾಮಾನ್ಯ ದಿನಗಳಲ್ಲಿ 80 ರೂ. ಪ್ರವೇಶದರ ಇರಲಿದೆ.

    MORE
    GALLERIES

  • 512

    Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    ಜ್ಯೋತಿ ಮೆರವಣಿಗೆ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಗದೀಶ್, ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದ ಇತಿಹಾಸದಲ್ಲಿ ಇಂತ ಗೌರವ ಯಾವ ನಟರಿಗೂ ಸಿಕ್ಕಿಲ್ಲ. ಕಳೆದ ವರ್ಷ ಡಾ.ರಾಜ್​ಕುಮಾರ್ ವಿಷಯಾಧಾರಿತ ಪುಷ್ಪ ಪ್ರದರ್ಶನ ಮಾಡಲು ನಿರ್ಧಾರ ಮಾಡಿದ್ದೆವು.

    MORE
    GALLERIES

  • 612

    Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    ಈ ವಿಚಾರವಾಗಿ ಪುನೀತ್ ರಾಜಜ್​ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದ್ದೆವು. ಪುನೀತ್ ಅವರು ಖುಷಿಯಿಂದ ಒಪ್ಪಿ ನಮಗೆ ಸಿಗೋದಾಗಿ ಹೇಳಿದ್ರು. ಆದ್ರೆ ದುರದೃಷ್ಟವಶಾತ್ ಅವರನ್ನು ತುಂಬಾ ಕಡಿಮೆ ಅವಧಿಯಲ್ಲಿ ಕಳೆದುಕೊಂಡೆವು ಎಂದು ಅವರು ತಿಳಿಸಿದ್ದಾರೆ.

    MORE
    GALLERIES

  • 712

    Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    ಜ್ಯೋತಿ ಯಶವಂತಪುರ ಮಾರ್ಗವಾಗಿ ಸದಾಶಿವನಗರದ ಅಣ್ಣಾವ್ರ ನಿವಾಸ ಬಳಿ ಹೋಗುತ್ತೆ. ನಿವಾಸದ ಬಳಿ ರಾಘವೇಂದ್ರ ರಾಜ್ ಕುಮಾರ್ ಜ್ಯೋತಿ ಗೆ ಶುಭ ಕೋರಲಿದ್ದಾರೆ. ಪುನೀತ್ ರಾಜ್​ಕುಮಾರ್ ಮತ್ತು ಅಣ್ಣಾವ್ರ ಪುಷ್ಪ ಪ್ರದರ್ಶನಕ್ಕೆ ಅಣ್ಣಾವ್ರ ಕುಟುಂಬದವರು ಮಾರ್ಗದರ್ಶನ ನೀಡಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಗದೀಶ್ ತಿಳಿಸಿದ್ದಾರೆ.

    MORE
    GALLERIES

  • 812

    Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    ಅಶ್ವಿನಿ ಪುನೀತ್ ರಾಜ್​ಕುಮಾರ್ ಪುನೀತ್ ಅವರ ವಿಶೇಷವಾದ ಫೋಟೊ ನೀಡಿದ್ದಾರೆ. ಗಂಧದಗುಡಿ ಸಿನಿಮಾ ಸಮಯದಲ್ಲಿ ತೆಗೆದಿರುವ ಆ ಪೋಟೊವನ್ನು ಪುಷ್ಪ ಪ್ರದರ್ಶನದಲ್ಲಿ ಉದ್ಘಾಟನೆ ನಡೆಯಲಿದೆ.

    MORE
    GALLERIES

  • 912

    Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    ಒಟ್ಟು 500 ಬಗೆಯ ವಿವಿಧ ಜಾತಿಯ ಹೂವುಗಳಿಂದ ಅರಳಿಲಿದೆ ಹೂವಿನ ಲೋಕ. ಪುನೀತ್ ರಾಜ್​ಕುಮಾರ್ ಜೊತೆಗೆ ವರನಟ ರಾಜ್ ಕುಮಾರ್ ಅವರ ಪುಷ್ಪಪ್ರತಿಮೆಯೂ ಇರಲಿದೆ.

    MORE
    GALLERIES

  • 1012

    Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    ಸುಮಾರು 8 ಲಕ್ಷ ಜನ ಆಗಮಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಲಾಲ್ ಬಾಗ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ ಮಾಡಲಾಗಿದೆ.

    MORE
    GALLERIES

  • 1112

    Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    ಸಂಚಾರ ದಟ್ಟಣೆ ಕಡಿಮೆ ಮಾಡಲು ಸಮೂಹ ಸಾರಿಗೆ ಬಳಸಲು ಟ್ರಾಫಿಕ್ ಪೊಲೀಸರ ಮನವಿ ಮಾಡಿದ್ದಾರೆ. ಬಿಎಂಟಿಸಿ ಬಸ್, ಮೆಟ್ರೋ, ಕ್ಯಾಬ್ ಬಳಸಲು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.

    MORE
    GALLERIES

  • 1212

    Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    ಇಂತಹ ಅದ್ಭುತ ಲಾಲ್​ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ

    MORE
    GALLERIES