Bengaluru History: ಕರಗ ನಡೆಸುವ ತಿಗಳರ ಇತಿಹಾಸ! ಇವರು ಬೆಂಗಳೂರಿಗೆ ಬಂದಿದ್ದೇಗೆ?

ಅಂದಾಜು 5 ಶತಮಾನಗಳಿಂದ ತಿಗಳರು ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಕರಗ ಉತ್ಸವವನ್ನು ಆಚರಿಸುತ್ತಿದ್ದಾರೆ. ಹಾಗಾದರೆ ಈ ತಿಗಳರು ಯಾರು? ಅವರು ಬೆಂಗಳೂರಿಗೆ ಬಂದಿದ್ದೇಗೆ? ಇಲ್ಲಿದೆ ನೋಡಿ.

First published:

  • 17

    Bengaluru History: ಕರಗ ನಡೆಸುವ ತಿಗಳರ ಇತಿಹಾಸ! ಇವರು ಬೆಂಗಳೂರಿಗೆ ಬಂದಿದ್ದೇಗೆ?

    ಇತ್ತೀಚಿಗಷ್ಟೇ ಬೆಂಗಳೂರಿನ ಕರಗ ಅದ್ದೂರಿಯಾಗಿ ಮುಕ್ತಾಯಗೊಂಡಿದೆ. ಈ ಕರಗವನ್ನು ತಿಗಳರು ಅಥವಾ ತಿಗುಳರು ತಲೆ ತಲಾಂತರದಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಹಾಗಾದರೆ ಈ ತಿಗಳರು ಅಂದರೆ ಯಾರು? ಇಲ್ಲಿದೆ ನೋಡಿ ಈ ಕುತೂಹಲಕರ ಪ್ರಶ್ನೆಗೆ ಉತ್ತರ.

    MORE
    GALLERIES

  • 27

    Bengaluru History: ಕರಗ ನಡೆಸುವ ತಿಗಳರ ಇತಿಹಾಸ! ಇವರು ಬೆಂಗಳೂರಿಗೆ ಬಂದಿದ್ದೇಗೆ?

    ತಿಗಳ ಅಥವಾ ತಿಗುಳ ಎಂದರೆ ಕನ್ನಡದಲ್ಲಿ ತಮಿಳು ಎಂದರ್ಥ. ಇವರು ಮೂಲತಃ ತಮಿಳುನಾಡಿನಿಂದ ಕರ್ನಾಟಕಕ್ಕೆ ವಲಸೆ ಬಂದವರು. ತಮ್ಮನ್ನು ತಾವು ವಹ್ನಿಕುಲ ಕ್ಷತ್ರಿಯರು ಎಂದು ಕರೆದುಕೊಳ್ಳುವ ಇವರು ತಮಿಳು ಮತ್ತು ಕನ್ನಡ ಮಿಶ್ರಿತ ತಿಗುಳ ಅಥವಾ ತಿಗಳಾರಿ ಭಾಷೆ ಮಾತನಾಡುತ್ತಾರೆ.

    MORE
    GALLERIES

  • 37

    Bengaluru History: ಕರಗ ನಡೆಸುವ ತಿಗಳರ ಇತಿಹಾಸ! ಇವರು ಬೆಂಗಳೂರಿಗೆ ಬಂದಿದ್ದೇಗೆ?

    ತಿಗಳರು ತಮಿಳುನಾಡಿನ ಮೂಲದವರಲ್ಲ, ಕರ್ನಾಟಕ ಮೂಲದವರೇ ಎಂದು ಸಹ ವಾದಗಳಿವೆ. ತಿಗಳರು ಕನ್ನಡ ನೆಲದ ಗಂಗರ ವಂಶದವರು. ಮಹಾಭಾರತದ ಭೀಷ್ಮನ ವಂಶಜರೇ ಈ ತಿಗಳರು ಎಂದು ಸಹ ಹೇಳಲಾಗುತ್ತೆ. ಜೊತೆಗೆ ಚೋಳರ ಸೈನ್ಯದಲ್ಲಿದ್ದ ಕ್ಷತ್ರಿಯೇ ಈ ತಿಗಳರು ಎಂದು ಸಹ ಚರ್ಚೆಗಳಿವೆ.

    MORE
    GALLERIES

  • 47

    Bengaluru History: ಕರಗ ನಡೆಸುವ ತಿಗಳರ ಇತಿಹಾಸ! ಇವರು ಬೆಂಗಳೂರಿಗೆ ಬಂದಿದ್ದೇಗೆ?

    ಹಾಗಾದರೆ ತಿಗಳರು ಪಕ್ಕದ ತಮಿಳುನಾಡಿನಿಂದ ಕರ್ನಾಟಕಕ್ಕೆ ವಲಸೆ ಬಂದದ್ದು ಹೇಗೆ ಮತ್ತು ಏಕೆ ಎಂಬ ಪ್ರಶ್ನೆ ಹುಟ್ಟುತ್ತದೆ. ಇವರ ವಲಸೆಯ ಹಿಂದಿರುವುದು ಹೈದರಾಲಿಯ ತೋಟ ಮಾಡುವ ಕನಸು!

    MORE
    GALLERIES

  • 57

    Bengaluru History: ಕರಗ ನಡೆಸುವ ತಿಗಳರ ಇತಿಹಾಸ! ಇವರು ಬೆಂಗಳೂರಿಗೆ ಬಂದಿದ್ದೇಗೆ?

    ಹೌದು, ಹೈದರಾಲಿಗೆ ಬೆಂಗಳೂರಿನಲ್ಲಿ ಸುಂದರ ತೋಟ ನಿರ್ಮಿಸುವ ಕನಸಿತ್ತಂತೆ. ಅದೇ ಕಾರಣಕ್ಕೆ ನೆರೆಯ ತಮಿಳುನಾಡಿಗೆ ದಾಳಿ ಮಾಡಿದಾಗ ಅಲ್ಲಿ ತೋಟ ನಿರ್ಮಿಸಿದ್ದ ತಿಗಳ ಸಮುದಾಯದಿಂದ ಆಕರ್ಷಿತನಾದರಂತೆ. ಬೆಂಗಳೂರಿನಲ್ಲಿ ತೋಟ ನಿರ್ಮಿಸಲು ಅದೇ ತಿಗಳರನ್ನು ಕರೆಸಿಕೊಂಡರಂತೆ ಎನ್ನುತ್ತೆ ಇತಿಹಾಸ.

    MORE
    GALLERIES

  • 67

    Bengaluru History: ಕರಗ ನಡೆಸುವ ತಿಗಳರ ಇತಿಹಾಸ! ಇವರು ಬೆಂಗಳೂರಿಗೆ ಬಂದಿದ್ದೇಗೆ?

    ಮಹಾಭಾರತದ ಧರ್ಮರಾಯ ಮತ್ತು ದ್ರೌಪದಿ ತಿಗಳರ ಆರಾಧ್ಯದೈವ. ಅಂದಾಜು 5 ಶತಮಾನಗಳಿಂದ ತಿಗಳರು ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಕರಗ ಉತ್ಸವವನ್ನು ಆಚರಿಸುತ್ತಿದ್ದಾರೆ.

    MORE
    GALLERIES

  • 77

    Bengaluru History: ಕರಗ ನಡೆಸುವ ತಿಗಳರ ಇತಿಹಾಸ! ಇವರು ಬೆಂಗಳೂರಿಗೆ ಬಂದಿದ್ದೇಗೆ?

    ಹೀಗೆ ಹೈದರಾಲಿಗಾಗಿ ತೋಟ ನಿರ್ಮಿಸಲು ಶತಮಾನಗಳ ಹಿಂದೆಯೇ ಕನ್ನಡದ ನೆಲಕ್ಕೆ ಕಾಲಿಟ್ಟು ಬದುಕು ಕಟ್ಟಿಕೊಂಡಿದ್ದಾರೆ ತಿಗಳರು.

    MORE
    GALLERIES