ಬೆಂಗಳೂರಿನ ನಿವಾಸಿಗಳೇ, ನಿಮಗೆ ಆಕಾಶ ವೀಕ್ಷಣೆಯಲ್ಲಿ ಆಸಕ್ತಿ ಇದೆಯೇ? ಆಕಾಶದ ಹಲವು ವಿಸ್ಮಯಗಳನ್ನು ಕಣ್ತುಂಬಿಸಿಕೊಳ್ಳಲು ಇಲ್ಲೊಂದು ಅವಕಾಶವಿದೆ. (ಸಾಂದರ್ಭಿಕ ಚಿತ್ರ)
2/ 7
ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯ ಖಗೋಳ ವೀಕ್ಷಣೆಗೆ ಕಮ್ಮಟವೊಂದನ್ನು ಆಯೋಜಿಸಿದೆ. ಈ ಕಮ್ಮಟದಲ್ಲಿ ಭಾಗವಹಿಸಿ ನೀವು ಖಗೋಳ ವಿಸ್ಮಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)
3/ 7
ಈ ಕಾರ್ಯಾಗಾರವು 3 ದಿನಗಳ ಕಾಲ ನಡೆಯಲಿದೆ. ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಚರ್ಚೆಯೂ ಇಲ್ಲಿ ನಡೆಯಲಿದೆ. ನೀವು ಈ ಚರ್ಚೆಯಲ್ಲಿ ಭಾಗವಹಿಸಿ ಕುತೂಹಲಕರ ಅಂಶಗಳನ್ನು ಅರಿತುಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)
4/ 7
13 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಖಗೋಳಶಾಸ್ತ್ರ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಈ ಖಗೋಳ ಕಮ್ಮಟವು ಜನವರಿ 27, 28 ಮತ್ತು 29ರಂದು ನಡೆಯಲಿದೆ. ಸಂಜೆ 4 ಗಂಟೆಯಿಂದ 7 ಗಂಟೆಯವರೆಗೂ ಈ ಕಾರ್ಯಾಗಾರ ನಡೆಯಲಿದೆ. (ಸಾಂದರ್ಭಿಕ ಚಿತ್ರ)
6/ 7
ಬೆಂಗಳೂರಿನ ಶ್ರೀ ಚೌಡಯ್ಯ ರಸ್ತೆ, ಹೈ ಗ್ರೌಂಡ್ಸ್ ಬಳಿಯಿರುವ ಜವಾಹರ್ ಲಾಲ್ ನೆಹರು ತಾರಾಲಯದಲ್ಲೇ ಈ ಖಗೋಳಶಾಸ್ತ್ರ ಕಮ್ಮಟವನ್ನು ಆಯೋಜನೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಕೇವಲ 40 ಆಸಕ್ತರಿಗೆ ಮಾತ್ರ ಈ ಖಗೋಳಶಾಸ್ತ್ರ ಕಮ್ಮಟದಲ್ಲಿ ಭಾಗವಹಿಸಲು ಅವಕಾಶವಿದೆ. ನೋಂದಣಿ ಶುಲ್ಕ ರೂ. 500.ಹೆಚ್ಚಿನ ಮಾಹಿತಿಗಾಗಿ eudcation@taralaya.org ವಿಳಾಸವನ್ನು ಸಂಪರ್ಕಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)