Bengaluru Jail Restaurant: ಬೆಂಗಳೂರಲ್ಲಿ ಜೈಲೊಳಗೆ ಕುಳಿತು ಏನ್ ಬೇಕೋ ತಿನ್ನಿ!

ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ ಬೆಂಗಳೂರಿನ ಜೈಲ್ ರೆಸ್ಟೋರೆಂಟ್.

First published:

  • 18

    Bengaluru Jail Restaurant: ಬೆಂಗಳೂರಲ್ಲಿ ಜೈಲೊಳಗೆ ಕುಳಿತು ಏನ್ ಬೇಕೋ ತಿನ್ನಿ!

    ಬೆಂಗಳೂರು ಭಾರತದ "ಸಿಲಿಕಾನ್ ವ್ಯಾಲಿ" ಎಂದೇ ಫೇಮಸ್. ಇತ್ತೀಚಿಗಂತೂ ಸ್ಟಾರ್ಟ್ಅಪ್​ಗಳ ಸಂಖ್ಯೆ ಹೆಚ್ಚಾಗಿ ಇನ್ನಷ್ಟು ವ್ಯಾವಹಾರಿಕ ಊರಾಗಿ ಬೆಳೆಯುತ್ತಿದೆ.

    MORE
    GALLERIES

  • 28

    Bengaluru Jail Restaurant: ಬೆಂಗಳೂರಲ್ಲಿ ಜೈಲೊಳಗೆ ಕುಳಿತು ಏನ್ ಬೇಕೋ ತಿನ್ನಿ!

    ನಮ್ಮ ರಾಜಧಾನಿ ನಗರ. ಹೀಗಾಗಿ ಬೆಂಗಳೂರಿನಲ್ಲಿ ಯಾವ ರಾಜ್ಯ ಅಥವಾ ದೇಶದವರೂ ಇಲ್ಲ ಎಂದಿಲ್ಲ. ಎಲ್ಲೆಡೆಯಿಂದ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಳ್ಳುವವರ ಸಂಖ್ಯೆ ತೀರಾ ದೊಡ್ಡದಿದೆ.

    MORE
    GALLERIES

  • 38

    Bengaluru Jail Restaurant: ಬೆಂಗಳೂರಲ್ಲಿ ಜೈಲೊಳಗೆ ಕುಳಿತು ಏನ್ ಬೇಕೋ ತಿನ್ನಿ!

    ಇದೇ ರೀತಿ ನಮ್ಮ ಬೆಂಗಳೂರಿನಲ್ಲಿ ಇರುವ ಹೋಟೆಲ್​ಗಳ ಸಂಖ್ಯೆಯೂ ಕಡಿಮೆಯಿಲ್ಲ. ಒಂದೊಂದು ಹೋಟೆಲ್​ಗಳೂ ಒಂದೊಂದು ವಿಶೇಷತೆಯಿಂದ ಗ್ರಾಹಕರನ್ನು ಸೆಳೆಯುತ್ತವೆ. ಇದೇ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ ಬೆಂಗಳೂರಿನ ಜೈಲ್ ರೆಸ್ಟೋರೆಂಟ್.

    MORE
    GALLERIES

  • 48

    Bengaluru Jail Restaurant: ಬೆಂಗಳೂರಲ್ಲಿ ಜೈಲೊಳಗೆ ಕುಳಿತು ಏನ್ ಬೇಕೋ ತಿನ್ನಿ!

    ಹರ್ಷ್ ಗೋಯೆಂಕಾ ಅವರು ಜೈಲ್ ರೆಸ್ಟೋರೆಂಟ್ ಕುರಿತ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದೆ ತಡ, ಟ್ವಿಟರ್ ಬಳಕೆದಾರರು ಈ ಜೈಲ್ ರೆಸ್ಟೋರೆಂಟ್ ವಿಡಿಯೋ ವೈರಲ್ ಆಯಿತು.

    MORE
    GALLERIES

  • 58

    Bengaluru Jail Restaurant: ಬೆಂಗಳೂರಲ್ಲಿ ಜೈಲೊಳಗೆ ಕುಳಿತು ಏನ್ ಬೇಕೋ ತಿನ್ನಿ!

    ಹರ್ಷ ಗೋಯಂಕಾ ಅವರು ಟ್ವೀಟ್ ಮಾಡಿದ ವಿಡಿಯೋದಲ್ಲಿ ಬೆಂಗಳೂರಿನ ಎಚ್ಎಸ್ಆರ್ ಲೇಔಟ್​ನಲ್ಲಿ ಇರುವ ಜೈಲ್ ರೆಸ್ಟೋರೆಂಟ್ ಬಗ್ಗೆ ಕುತೂಹಲಕರ ಮಾಹಿತಿ ಇದೆ. "ಸೆಂಟ್ರಲ್ ಜೈಲ್" ಎಂಬ ಎಂಬ ಪದ ರೆಸ್ಟೋರೆಂಟ್ ಪ್ರವೇಶಿಸುವ ಬಾಗಿಲಿನ ಮೇಲೆ ಕೆತ್ತಲಾಗಿದೆ.

    MORE
    GALLERIES

  • 68

    Bengaluru Jail Restaurant: ಬೆಂಗಳೂರಲ್ಲಿ ಜೈಲೊಳಗೆ ಕುಳಿತು ಏನ್ ಬೇಕೋ ತಿನ್ನಿ!

    ಈ ಜೈಲ್ ರೆಸ್ಟೋರೆಂಟ್​ನಲ್ಲಿ ಗ್ರಾಹಕರು ಕಬ್ಬಿಣದ ಸರಳುಗಳ ಹಿಂದೆ ಕುಳಿತು ಊಟ ಮಾಡುತ್ತಾರೆ. ಪ್ರತಿ ಟೇಬಲ್ ಅನ್ನು ವಿಶೇಷವಾಗಿ ರಚಿಸಲಾದ ಜೈಲಿನ ಒಳಗೆ ಇರಿಸಲಾಗಿದೆ.

    MORE
    GALLERIES

  • 78

    Bengaluru Jail Restaurant: ಬೆಂಗಳೂರಲ್ಲಿ ಜೈಲೊಳಗೆ ಕುಳಿತು ಏನ್ ಬೇಕೋ ತಿನ್ನಿ!

    ಈ ರೆಸ್ಟೋರೆಂಟ್​ನಲ್ಲಿ ಸಪ್ಲೈಯರ್​ಗಳು ಪೋಲೀಸ್ ಮತ್ತು ಕೈದಿಗಳ ವೇಷದಲ್ಲಿ ಆಹಾರವನ್ನು ಬಡಿಸುವುದನ್ನು ಸಹ ಕಾಣಬಹುದು.

    MORE
    GALLERIES

  • 88

    Bengaluru Jail Restaurant: ಬೆಂಗಳೂರಲ್ಲಿ ಜೈಲೊಳಗೆ ಕುಳಿತು ಏನ್ ಬೇಕೋ ತಿನ್ನಿ!

    ಈ ಜೈಲ್ ರೆಸ್ಟೋರೆಂಟ್ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. ಈಗಾಗಲೇ 52 ಸಾವಿರಕ್ಕೂ ಹೆಚ್ಚು ಜನರು ಪೋಸ್ಟ್ ಅನ್ನು ವೀಕ್ಷಿಸಿದ್ದಾರೆ. ಈ ಸೆಂಟ್ರಲ್ ಜೈಲ್ ರೆಸ್ಟೋರೆಂಟ್, ಬೆಂಗಳೂರಿನ 27ನೇ ಮುಖ್ಯರಸ್ತೆ, ಎಚ್ಎಸ್ಆರ್ ಲೇಔಟ್​ನಲ್ಲಿದೆ.  ನೀವೂ ಬೆಂಗಳೂರಿನಲ್ಲಿ ಈ ಜೈಲ್ ರೆಸ್ಟೋರೆಂಟ್​ಗೆ ಒಮ್ಮೆ ಹೋಗಿ ಬರಬಹುದು ನೋಡಿ.

    MORE
    GALLERIES