ಬೆಂಗಳೂರು ದಿನೇ ದಿನೇ ವಿಶೇಷ ಆವಿಷ್ಕಾರಗಳ ಜೊತೆಯಲ್ಲಿ, ವಿಶೇಷ ಯೋಜನೆಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ. ಅಲ್ಲದೇ ಈ ಬಾರಿ ದೇಶದಲ್ಲೆ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ಜಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)
2/ 8
ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಮಾಡುವ ವಿಶೇಷ ಚೇತನ ಪ್ರಯಾಣಿಕರಿಗೆ ವಿಶೇಷ ಚೇತನರಿಗೆ ಪ್ರತ್ಯೇಕ ಸಿಬ್ಬಂದಿ ಮತ್ತು ಸಾಲಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. (ಸಾಂದರ್ಭಿಕ ಚಿತ್ರ)
3/ 8
[caption id="attachment_674271" align="alignnone" width="1600"] ವಿಶೇಷವಾದ ಸನ್ ಪ್ಲವರ್ ಟ್ಯಾಗ್ ಮೂಲಕ ವಿಶೇಷ ಚೇತನರು ನೇರವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. (ಸಾಂದರ್ಭಿಕ ಚಿತ್ರ)
[/caption]
4/ 8
ವಿಶೇಷ ಚೇತನರು ನಿಗದಿ ಮಾಡಲಾದ ಟ್ಯಾಗ್ ಹಾಕಿಕೊಳ್ಳುತ್ತಿದ್ದಂತೆ ಟರ್ಮಿನಲ್ನಿಂದ ವಿಮಾನ ಹತ್ತುವವರೆಗೂ ಸಿಬ್ಬಂದಿ ಏನು ಬೇಕೋ ಆ ಎಲ್ಲಾ ಸಹಾಯವನ್ನು ಮಾಡಲಿದ್ದಾರೆ. (ಸಾಂದರ್ಭಿಕ ಚಿತ್ರ)
5/ 8
ಸನ್ ಪ್ಲವರ್ ಲ್ಯಾನಿಯಾರ್ಡ್ ಸಂಸ್ಥೆ ಮೂಲಕ ವಿಶೇಷ ಸೌಲಭ್ಯ ಜಾರಿಗೊಳಿಸಲಾಗಿದೆ. ಇನ್ಮುಂದೆ ವಿಶೇಷ ಚೇತನರು ವಿಮಾನ ನಿಲ್ದಾಣಕ್ಕೆ ಬಂದ್ರೆ ನೇರವಾಗಿ ವಿಮಾನ ನಿಲ್ದಾಣದ ಸಿಬ್ಬಂದಿಗಳೇ ಸಹಕಾರಿಯಾಗಲಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ಜೊತೆಗೆ ವಿಶೇಷ ಚೇತನರಿಗೆ ಅವರದ್ದೇ ಕೈಸನ್ನೆ ಭಾಷೆಯಲ್ಲೇ ಸಿಬ್ಬಂದಿ ಸಹಾಯ ಮಾಡಲಿದ್ದಾರೆ. (ಸಾಂದರ್ಭಿಕ ಚಿತ್ರ)
7/ 8
ವಿಮಾನದಲ್ಲಿ ಒಂಟಿಯಾಗಿ ಪ್ರಯಾಣ ಮಾಡಲು ಹಿಂಜರಿಯುತ್ತಿದ್ದ ವಿಶೇಷ ಚೇತನರು ಇನ್ನು ಮುಂದೆ ಯಾವುದೇ ಅಳುಕಿಲ್ಲದೆ, ಭಯವಿಲ್ಲದೆ ಒಬ್ಬರೇ ಪ್ರಯಾಣ ಮಾಡಬಹುದಾಗಿದೆ. (ಸಾಂದರ್ಭಿಕ ಚಿತ್ರ)
8/ 8
ವಿಶೇಷಚೇತನರಿಗೆ ಅನುಕೂಲ ಆಗಲಿ ಎಂದೇ 15 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಇದರ ಜೊತೆಗೆ ವಿಮಾನ ನಿಲ್ದಾಣದ ಸಿಬ್ಬಂದಿ ಕೂಡ ವಿಶೇಷ ಚೇತನರಿಗೆ ಸಹಾಯ ಮಾಡಲಿದ್ದಾರೆ. ವಿಶೇಷ ಚೇತನರಿಗೆ ಯಾವುದೇ ರೀತಿಯ ಸಮಯ ವ್ಯಯ ಆಗದಂತೆ ಕೇವಲ 10 ನಿಮಿಷದಲ್ಲಿಯೇ ವಿಮಾನ ನಿಲ್ದಾಣದ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಲಾಗಿದೆ. (ಸಾಂದರ್ಭಿಕ ಚಿತ್ರ)