ಬೆಂಗಳೂರಿಗರೇ ಎಚ್ಚರ.. ಬೀದಿ ನಾಯಿಗಳ ಮೇಲೆ ಕಲ್ಲು ಎಸಿದ್ದೀರಿ ಜೋಕೆ..!
ಬೆಂಗಳೂರು: ಶ್ವಾನಗಳು (Dogs) ಮಾನವರಿಗೆ ಅತ್ಯಂತ ಆತ್ಮೀಯವಾಗಿರುವ ಪ್ರಾಣಿ. ಎಷ್ಟೋ ಮನೆಗಳಲ್ಲಿ ಸಾಕು ನಾಯಿಗಳನ್ನು ಅವರ ಕುಟುಂಬದ ಸದಸ್ಯರಂತೆ ಟ್ರೀಟ್ ಮಾಡುತ್ತಾರೆ. ನಾಯಿಗಳನ್ನೇ ಮಕ್ಕಳಂತೆ ಸಾಕುವವರೂ ನಮ್ಮ ಮಧ್ಯೆ ಇದ್ದಾರೆ. ಆದರೆ ಬೀದಿನಾಯಿಗಳ ಮೇಲೆ ಈ ರೀತಿಯ ಅಕ್ಕರೆ ಅಪರೂಪ. ಹಾಗಂತ ಬೀದಿ ನಾಯಿಗಳ ಮೇಲೆ ತಮಾಷೆಗೆ ಕಲ್ಲು ಎಸೆದರೂ ಸಂಕಷ್ಟ ಎದುರಿಸಬೇಕಾಗುತ್ತೆ.
ಹೌದು ಬೆಂಗಳೂರಿನಲ್ಲಿ ಬೀದಿ ನಾಯಿಗಳ ಮೇಲೆ ಕಲ್ಲು ಎಸೆದ ಆರೋಪಡಿ ವ್ಯಕ್ತಿಯೊಬ್ಬರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಅಶೋಕನಗರದಲ್ಲಿ 58 ವರ್ಷದ ವೈದ್ಯರೊಬ್ಬರು ಮೇಲೆ ಪಕ್ಕದ ಮನೆಯ ಭದ್ರತಾ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)
2/ 4
ನಮ್ಮ ಮನೆಯ ಎದುರು ಬಂದಿದ್ದ ನಾಯಿಗಳ ಮೇಲೆ ಸೆಕ್ಯೂರಿಟಿ ಗಾರ್ಡ್ ಕಲ್ಲು ಎಸೆದಿದ್ದಾನೆ. ಇದರಿಂದ ಎರಡು ನಾಯಿಗಳು ಗಾಯಗೊಂಡಿವೆ. ಸೆಕ್ಯೂರಿಟಿ ಗಾರ್ಡ್ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವೈದ್ಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. (ಸಾಂದರ್ಭಿಕ ಚಿತ್ರ)
3/ 4
ವೈದ್ಯರು ಬೀದಿನಾಯಿಗಳಿಗೆ ಆಹಾರವನ್ನು ನೀಡಲು ಅಭ್ಯಾಸ ಇಟ್ಟುಕೊಂಡಿದ್ದಾರೆ. ಇದಕ್ಕೆ ಒಗ್ಗಿಕೊಂಡಿರುವ ನಾಯಿಗಳು ನಿತ್ಯ ಇವರ ಮನೆಯ ಬರುತ್ತವೆ. ಇದಕ್ಕೆ ನೆರೆ ಮನೆಯವರು ಆಕ್ಷೇಪ ವ್ಯಕ್ತಪಡಿಸಿ, ವೈದ್ಯರೊಂದಿಗೆ ವಾಗ್ದಾದ ನಡೆಸಿದ್ದಾರೆ. (ಸಾಂದರ್ಭಿಕ ಚಿತ್ರ)
4/ 4
ಸೆಕ್ಯೂರಿಟಿ ಗಾರ್ಡ್ ಕಲ್ಲಿನಿಂದ ಅಮಾನುಷವಾಗಿ ನಾಯಿ ಮೇಲೆ ದಾಳಿ ನಡೆಸಿದ್ದಾನೆ ಎಂದು ದೂರು ನೀಡಲಾಗಿದೆ. ಪೊಲೀಸರು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.