Bengaluru: ತನ್ನ ಕಳುವಾದ ನಾಯಿಯನ್ನು ಹುಡುಕಲು ಡಿಟೆಕ್ಟಿವ್ ಆದ ಬೆಂಗಳೂರಿನ ಯುವತಿ!

ಚೈತ್ರಾ ಅವರ 5 ತಿಂಗಳ ನಾಯಿ ಶೌರ್ಯ ಕಳುವಾಗಿತ್ತು ಬೈಕ್ ಸವಾರ ಚೈತ್ರಾ ಅವರ ನಾಯಿಯನ್ನು ಕದ್ದೊಯ್ದಿದ್ದ. ಬೈಕ್ ನಂಬರ್ ಪ್ಲೇಟ್ ಗುರುತು ಪತ್ತೆಯಾಗಿದ್ದರೂ ಬೈಕ್ ಸವಾರನ ಮುಖದ ಗುರುತು ಪತ್ತೆಯಾಗಿರಲಿಲ್ಲ.

First published:

  • 19

    Bengaluru: ತನ್ನ ಕಳುವಾದ ನಾಯಿಯನ್ನು ಹುಡುಕಲು ಡಿಟೆಕ್ಟಿವ್ ಆದ ಬೆಂಗಳೂರಿನ ಯುವತಿ!

    ನಾಯಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ, ತಾನು ಸಾಕಿದ ಪ್ರೀತಿಯ ನಾಯಿಯನ್ನು ಪತ್ತೆಹಚ್ಚಲು ಬೆಂಗಳೂರಿನ ಯುವತಿಯೋರ್ವಳು ಪತ್ತೆದಾರಿ ಕೆಲಸವನ್ನೇ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Bengaluru: ತನ್ನ ಕಳುವಾದ ನಾಯಿಯನ್ನು ಹುಡುಕಲು ಡಿಟೆಕ್ಟಿವ್ ಆದ ಬೆಂಗಳೂರಿನ ಯುವತಿ!

    ಬೆಂಗಳೂರಿನ ರಾಜಾಜಿನಗರದ 20 ವರ್ಷದ ಯುವತಿ ಚೈತ್ರಾ ಎಂಬುವವರೇ ತಮ್ಮ ನಾಯಿಗಾಗಿ ಸಾಹಸ ಮಾಡಿದವರು. ಚೈತ್ರಾ ಸಾಕಿದ್ದ ಹಸ್ಕಿ ತಳಿಯ ನಾಯಿಯನ್ನು ಯಾರೋ ಕದ್ದೊಯ್ದಿದ್ದರು. ತಮ್ಮ ಕಳುವಾದ ನಾಯಿಯನ್ನು ಪತ್ತೆಹಚ್ಚಲು ಚೈತ್ರಾ ದೊಡ್ಡ ಸಾಹಸವನ್ನೇ ಮಾಡಬೇಕಾಯ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Bengaluru: ತನ್ನ ಕಳುವಾದ ನಾಯಿಯನ್ನು ಹುಡುಕಲು ಡಿಟೆಕ್ಟಿವ್ ಆದ ಬೆಂಗಳೂರಿನ ಯುವತಿ!

    ಚೈತ್ರಾ ಅವರ 5 ತಿಂಗಳ ನಾಯಿ ಶೌರ್ಯ ಕಳುವಾಗಿತ್ತು ಬೈಕ್ ಸವಾರ ಚೈತ್ರಾ ಅವರ ನಾಯಿಯನ್ನು ಕದ್ದೊಯ್ದಿದ್ದ. ಬೈಕ್ ನಂಬರ್ ಪ್ಲೇಟ್ ಗುರುತು ಪತ್ತೆಯಾಗಿದ್ದರೂ ಬೈಕ್ ಸವಾರನ ಮುಖದ ಗುರುತು ಪತ್ತೆಯಾಗಿರಲಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Bengaluru: ತನ್ನ ಕಳುವಾದ ನಾಯಿಯನ್ನು ಹುಡುಕಲು ಡಿಟೆಕ್ಟಿವ್ ಆದ ಬೆಂಗಳೂರಿನ ಯುವತಿ!

    ತಮ್ಮ ನಾಯಿಯ ಬೆನ್ನುಬಿದ್ದ ಚೈತ್ರಾ ಪ್ರಾಣಿಪ್ರಿಯರು ಮತ್ತು ಸಾಕುಪ್ರಾಣಿ ಅಂಗಡಿಗಳ ವಿವಿಧ ವಾಟ್ಸಾಪ್ ಗ್ರೂಪ್​ಗಳನ್ನು ಸಂಪರ್ಕಿಸಿದರು. ಹೀಗೆ ಹುಡುಕಾಟಕ್ಕೆ ಇಳಿದಾಗ ವಾಟ್ಸಪ್ ಗ್ರೂಪ್ ಒಂದರಿಂದ ಚೈತ್ರಾಗೆ ತಮ್ಮ ನಾಯಿಯ ಮಾಹಿತಿ ಸಿಕ್ಕಿತು. ಅಲ್ಲದೇ ಆ ವ್ಯಕ್ತಿಯ ಸಂಪರ್ಕ ಮಾಹಿತಿಯೂ ಸಿಕ್ಕಿತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Bengaluru: ತನ್ನ ಕಳುವಾದ ನಾಯಿಯನ್ನು ಹುಡುಕಲು ಡಿಟೆಕ್ಟಿವ್ ಆದ ಬೆಂಗಳೂರಿನ ಯುವತಿ!

    ಚೈತ್ರಾ ಅವರ ನಾಯಿಯನ್ನು ಕದ್ದೊಯ್ದ ವ್ಯಕ್ತಿ ನಾಯಿಯನ್ನು ಮಾರಾಟಕ್ಕೆ ಇಟ್ಟಿದ್ದ ವಿಷಯ ವಾಟ್ಸಪ್ ಗ್ರೂಪ್ ಮೂಲಕ ತಿಳಿದುಕೊಂಡ ಚೈತ್ರಾ ಸಿಸಿಟಿವಿ ದೃಶ್ಯಗಳ ಮೊರೆ ಹೋದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Bengaluru: ತನ್ನ ಕಳುವಾದ ನಾಯಿಯನ್ನು ಹುಡುಕಲು ಡಿಟೆಕ್ಟಿವ್ ಆದ ಬೆಂಗಳೂರಿನ ಯುವತಿ!

    ನಾಯಿ ಕಾಣೆಯಾದ ಪ್ರದೇಶಗಳ ಸುತ್ತಮುತ್ತಲ ಮನೆಗಳಲ್ಲಿ ಅಳವಡಿಸಿದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ನಾಯಿಯನ್ನು ಕದ್ದಾತ ಹೇಮಂತ್ ಎಂಬ ವ್ಯಕ್ತಿ ಎಂದು ಚೈತ್ರಾ ತಿಳಿದುಕೊಂಡರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Bengaluru: ತನ್ನ ಕಳುವಾದ ನಾಯಿಯನ್ನು ಹುಡುಕಲು ಡಿಟೆಕ್ಟಿವ್ ಆದ ಬೆಂಗಳೂರಿನ ಯುವತಿ!

    ಈ ವಿಷಯ ತಿಳಿದಿ ಚೈತ್ರಾ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಪರಿಶೀಲನೆ ನಡೆಸಿದಾಗ ಹೇಮಂತ್ ಎಂಬ ವ್ಯಕ್ತಿಯ ಜೊತೆ ಪಿಯುಸಿ ವಿದ್ಯಾರ್ಥಿಯೊಬ್ಬ ಸೇರಿಕೊಂಡು ನಾಯಿಯನ್ನು ಕದ್ದೊಯ್ದಿದ್ದು ಎಂಬುದು ಬಹಿರಂಗವಾಯಿತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Bengaluru: ತನ್ನ ಕಳುವಾದ ನಾಯಿಯನ್ನು ಹುಡುಕಲು ಡಿಟೆಕ್ಟಿವ್ ಆದ ಬೆಂಗಳೂರಿನ ಯುವತಿ!

    [caption id="attachment_968967" align="alignnone" width="525"] ಹಸ್ಕಿ ನಾಯಿಗಳನ್ನು ಖರೀದಿಸಲು ಆಸಕ್ತಿ ಹೊಂದಿರುವವರಿಗಾಗಿ ಹೇಮಂತ್ ತನ್ನ ಕಾಂಟಾಕ್ಟ್ ನಂಬರ್​ನ್ನು ವಾಟ್ಸಪ್​ ಗ್ರೂಪ್​ಗಳಲ್ಲಿ ಹಂಚಿಕೊಂಡಿದ್ದ. ಖರೀದಿದಾರನ ಸೋಗಿನಲ್ಲಿ ಚೈತ್ರಾ ತಮ್ಮ ಸ್ನೇಹಿತರೊಂದಿಗೆ ಹೇಮಂತ್ ಮನೆಗೆ ಹೋದಾಗ ಅದು ಈಗಾಗಲೇ 3 ಸಾವಿರ ರೂ.ಗೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ. (ಸಾಂದರ್ಭಿಕ ಚಿತ್ರ)

    [/caption]

    MORE
    GALLERIES

  • 99

    Bengaluru: ತನ್ನ ಕಳುವಾದ ನಾಯಿಯನ್ನು ಹುಡುಕಲು ಡಿಟೆಕ್ಟಿವ್ ಆದ ಬೆಂಗಳೂರಿನ ಯುವತಿ!

    ಈ ವೇಳೆ ಚೈತ್ರಾಗೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮಗ ತಮ್ಮ ನಾಯಿಯನ್ನು ಹೇಮಂತ್ ಬಳಿ ಖರೀದಿ ಮಾಡಿದ್ದು ತಿಳಿದುಬಂದಿದೆ. ನಾಯಿಯನ್ನು ಖರೀದಿ ಮಾಡಿದವರ ಬಳಿ ವಿಷಯ ತಿಳಿಸಿ ಮತ್ತೆ ತಮ್ಮ ಪ್ರೀತಿಯ ಶೌರ್ಯ ಹಸ್ಕಿ ನಾಯಿಯನ್ನು ಮರಳಿ ಪಡೆಯಲು ಚೈತ್ರಾ ಯಶಸ್ವಿಯಾಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES