White Tiger In Bannerghatta: ಚೆನ್ನೈನಿಂದ ಬನ್ನೇರುಘಟ್ಟಕ್ಕೆ ಬಂತು ಬಿಳಿ ಹುಲಿ!
ಪ್ರಾಣಿ ವಿನಿಮಯ ಯೋಜನೆಯಡಿ ಬೆಂಗಳೂರು ಸಮೀಪದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಆಗಮಿಸಿದ್ದಾರೆ.
- News18 Kannada
- |
- | Bangalore [Bangalore], India
1/ 8
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಯ ಆಗಮನವಾಗಿದೆ. ಇದು ಪ್ರಾಣಿ ಪ್ರಿಯರ ಖುಷಿಗೆ ಕಾರಣವಾಗಿದೆ.
2/ 8
ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬಿಳಿ ಬಣ್ಣದ ರಾಯಲ್ ಬಂಗಾಳ ಹುಲಿಯ ಆಗಮನವಾಗಿದೆ.
3/ 8
ಪ್ರಾಣಿ ವಿನಿಮಯ ಯೋಜನೆಯಡಿ ಬೆಂಗಳೂರು ಸಮೀಪದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಆಗಮಿಸಿದ್ದಾರೆ.
4/ 8
ತಮಿಳುನಾಡಿನ ಚೆನ್ನೈನ ಅರಿಗ್ನಾರ್ ಅಣ್ಣಾ ಝೂಲಾಜಿಕಲ್ ಪಾರ್ಕ್ನಿಂದ ಬನ್ನೇರುಘಟ್ಟಕ್ಕೆ ಬಿಳಿ ಬಣ್ಣದ ರಾಯಲ್ ಬಂಗಾಳ ಹುಲಿಯನ್ನು ಕರೆತರಲಾಗಿದೆ.
5/ 8
ತಮಿಳುನಾಡಿನ ಚೆನ್ನೈನ ಅರಿಗ್ನಾರ್ ಅಣ್ಣಾ ಝೂಲಾಜಿಕಲ್ ಪಾರ್ಕ್ಗೆ ಬಿಳಿ ಹುಲಿಗೆ ಬದಲಿಯಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಸಿಂಹವನ್ನು ರವಾನೆ ಮಾಡಲಾಗಿದೆ.
6/ 8
2020 ರಲ್ಲಿ ಸನಾ ಮತ್ತು ಶಂಕರ್ ಸಿಂಹಗಳಿಗೆ ಜನಿಸಿದ ಶೇರ್-ಯಾರ್ ಹೆಸರಿನ ಗಂಡು ಸಿಂಹವನ್ನು ಅರಿನ್ನಾಗರ್ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ.
7/ 8
ಸಿಂಹದ ಬದಲಿಗೆ ಭೀಷ್ಮಾ ಮತ್ತು ಮೀನಾಗೆ ಜನಿಸಿರುವ ಸುಮಾರು 3 ವರ್ಷ ವಯಸ್ಸಿನ ಈ ಬಿಳಿ ಹುಲಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಗಿದೆ.
8/ 8
ವಾತಾವರಣಕ್ಕೆ ಹೊಂದಿಕೊಳ್ಳಲು ಹುಲಿಗೆ ಕ್ವಾರಂಟೈನ್ ಮಾಡಲಾಗಿದ್ದು ಕೆಲ ದಿನಗಳ ಬಳಿಕ ಪ್ರವಾಸಿಗರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ.
First published: