Auto Helpline: ಆಟೋಗಳಲ್ಲಿ QR ಕೋಡ್, ಸುಲಿಗೆ ಮಾಡೋಕೆ ಸಾಧ್ಯವೇ ಇಲ್ಲ!
ಬೆಂಗಳೂರು ನಗರವೊಂದರಲ್ಲೇ 1.75 ಲಕ್ಷ ಆಟೋರಿಕ್ಷಾಗಳಿವೆ ಅನ್ನುತ್ತೆ ಅಂಕಿ ಅಂಶ. ಈ ಪ್ರಮಾಣದ ಆಟೋರಿಕ್ಷಾಗಳಲ್ಲಿ ನಿಯಮ ಪಾಲನೆ ಮಾಡಿಸುವುದು ಬೆಂಗಳೂರು ಪೊಲೀಸರ ಎದುರಿರುವ ಬೃಹತ್ ಸವಾಲೇ ಸರಿ.
ಆಟೋ ಪ್ರಯಾಣ ದರ ತುಂಬಾ ದುಬಾರಿ ಅನಿಸುತ್ತಿದೆಯಾ? ಆಟೋ ಚಾಲಕರು ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿದ್ದಾರಾ? ಇನ್ಮೇಲೆ ನಿಮ್ಮ ಈ ಸಮಸ್ಯೆ ನಿವಾರಣೆಯಾಗಲಿದೆ. (ಸಾಂದರ್ಭಿಕ ಚಿತ್ರ)
2/ 8
ಹೌದು, ಬೆಂಗಳೂರು ನಗರ ಸಂಚಾರ ಪೊಲೀಸರು ಆಟೋಗಳಲ್ಲಿ ನಡೆಯುವ ಸುಲಿಗೆಯನ್ನು ತಡೆಯಲು ಹೊಸ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ಮೇಲೆ ಆಟೋಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
3/ 8
ಆಟೋಗಳಲ್ಲಿ ಡಿಸ್ಪ್ಲೇ ಕಾರ್ಡ್ ಪ್ರದರ್ಶನ ಕಡ್ಡಾಯ ಎಂಬ ನಿಯಮ ಈಗಾಗಲೇ ಇದೆ. ಆದರೆ ಈ ನಿಯಮವನ್ನು ಸದ್ಯ ಆಟೋ ಚಾಲಕರು ಪಾಲಿಸುತ್ತಿಲ್ಲ. ಹೀಗಾಗಿ ಡಿಸ್ಪ್ಲೇ ಕಾರ್ಡ್ಗಿಂತ ಹೊಸ ವಿಧಾನದ ಮೊರೆ ಹೋಗಿದ್ದಾರೆ ಬೆಂಗಳೂರು ಪೊಲೀಸರು. (ಸಾಂದರ್ಭಿಕ ಚಿತ್ರ)
4/ 8
ಬೆಂಗಳೂರು ನಗರವೊಂದರಲ್ಲೇ 1.75 ಲಕ್ಷ ಆಟೋರಿಕ್ಷಾಗಳಿವೆ ಅನ್ನುತ್ತೆ ಅಂಕಿ ಅಂಶ. ಈ ಪ್ರಮಾಣದ ಆಟೋರಿಕ್ಷಾಗಳಲ್ಲಿ ನಿಯಮ ಪಾಲನೆ ಮಾಡಿಸುವುದು ಬೆಂಗಳೂರು ಪೊಲೀಸರ ಎದುರಿರುವ ಬೃಹತ್ ಸವಾಲೇ ಸರಿ. (ಸಾಂದರ್ಭಿಕ ಚಿತ್ರ)
5/ 8
ಹೀಗಾಗಿ ಆಟೋಗಳ ನೋಂದಣಿ ಸಂಖ್ಯೆ, ಚಾಲಕನ ಹೆಸರು, ಚಾಲನಾ ಪರವಾನಗಿ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಕ್ಯೂಆರ್ ಕೋಡ್ನಲ್ಲಿ ಅಳವಡಿಸಲು ಪೊಲೀಸರು ನಿರ್ಧರಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ಆಟೋ ಪ್ರಯಾಣಿಕರು ಆಟೋದಲ್ಲಿ ಅಳವಡಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅನುಚಿತ ವರ್ತನೆ ತೋರಿದ ಆಟೋ ಚಾಲಕರ ವಿರುದ್ಧ ದೂರು ಸಲ್ಲಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)
7/ 8
ಅಲ್ಲದೇ ಹೆಚ್ಚಿನ ಹಣ ಸುಲಿಗೆಯಂತಹ ಘಟನೆಯ ವಿರುದ್ಧವೂ ಪೊಲೀಸರಿಗೆ ಈ ಕ್ಯೂಆರ್ ಕೋಡ್ ಮೂಲಕ ಸುಲಭವಾಗಿ ದೂರು ಸಲ್ಲಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)
8/ 8
080- 22868550, 080-22868444 ಈ ಸಹಾಯವಾಣಿ ಸಂಖ್ಯೆಗಳ ಮೂಲಕ ಆಟೋ ಚಾಲಕರ ಅನುಚಿತ ವರ್ತನೆ ವಿರುದ್ಧ ದೂರು ಸಲ್ಲಿಸುವ ಅವಕಾಶ ಈಗಲೂ ಇದೆ, ನೆನಪಿಡಿ. (ಸಾಂದರ್ಭಿಕ ಚಿತ್ರ)