39 ವರ್ಷದ ಪದ್ಮಿನಿ ಮೃತ ದುರ್ದೈವಿ. SBI ಬ್ಯಾಂಕ್ ಉದ್ಯೋಗಿಯಾಗಿದ್ದ ಇವರು, ಸೇಂಟ್ ಮಾರ್ಕ್ಸ್ ರಸ್ತೆಯಿಂದ ಆರ್.ಆರ್ ನಗರಕ್ಕೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
2/ 7
ಕಳೆದ ಒಂದು ತಿಂಗಳ ಅವಧಿಯಲ್ಲಿ ಕಸದ ಲಾರಿಗೆ ಇದು ಮೂರನೇ ಬಲಿಯಾಗಿದೆ. ಹೆಬ್ಬಾಳ ಹಾಗೂ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ಕಸದ ಲಾರಿ ಹರಿದು ಓರ್ವ ಶಾಲಾ ಬಾಲಕಿ ಹಾಗೂ ವ್ಯಕ್ತಿಯೊಬ್ಬರು ಇದೇ ತಿಂಗಳಿನಲ್ಲಿ ಸಾವಿಗೀಡಾಗಿದ್ದರು.
3/ 7
ಲಾರಿ ಚಾಲಕನ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿದ್ದು, ಅಪಘಾತವಾಗುತ್ತಿದ್ದಂತೆ ಲಾರಿ ಚಾಲಕ ಎಸ್ಕೇಪ್ ಆಗಿದ್ದಾನೆ. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4/ 7
ಪದ್ಕಿನಿ ಗಂಡ ನಾಲ್ಕು ವರುಷದ ಹಿಂದೆ ಸಾವನ್ನಪ್ಪಿದ್ರು. ಇವರಿಗೆ ಐದು ವರ್ಷದ ಮಗುವಿದೆ. ಇದೀಗ ಈ ಮಗು ತಾಯಿ ತಂದೆ ಇಬ್ಬರನ್ನು ಕಳೆದುಕೊಂಡು ಅನಾಥವಾಗಿದೆ.
5/ 7
39 ವರುಷದ ಮೃತ ದುರ್ದೈವಿ ಪದ್ಮಿನಿ ದೆಹಲಿ ಮೂಲದವರಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಮೃತ ಪದ್ಮಿನಿ ಕುಟುಂಬದ ಸದಸ್ಯರು, ಬ್ಯಾಂಕ್ ಸಿಬ್ಬಂದಿ ಆಗಮಿಸಿದ್ದಾರೆ.
6/ 7
ಬೆಂಗಳೂರಿನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರಸ್ತೆಯಲ್ಲಿ ಲಾರಿಗಳ ಸ್ಪೀಡ್ಗೆ ಬ್ರೇಕ್ ಬೀಳಬೇಕಿದೆ ಇಲ್ಲವಾದ್ರೆ ಇನ್ನಷ್ಟು ಸಾವು-ನೋವು ಹೆಚ್ಚಾಗಲಿದೆ.
7/ 7
ಮೃತ ಪದ್ಮಿನಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹವನ್ನು ಇಡಲಾಗಿದೆ.
First published:
17
Bengaluru: ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಮಹಿಳೆ ಬಲಿ; ತಂದೆ, ತಾಯಿ ಇಬ್ಬರೂ ಇಲ್ಲದೇ ಅನಾಥವಾಯ್ತು ಮಗು