PSI ಬಳಿಕ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲೂ ಅಕ್ರಮ; ಎಫ್ಐಆರ್ ದಾಖಲು
ರಾಜ್ಯದಲ್ಲಿ ಪಿಎಸ್ಐ ಪ್ರಶ್ನಾಪತ್ರಿಕೆ ಅಕ್ರಮ (PSI Recruitment Scam) ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ದೂರಿನ ಮೇರೆಗೆ ಮಲ್ಲೇಶ್ವರಂ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲು ಆಗಿದೆ.
ರಾಜ್ಯದಲ್ಲಿ ಪಿಎಸ್ಐ ಪ್ರಶ್ನಾಪತ್ರಿಕೆ ಅಕ್ರಮ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ದೂರಿನ ಮೇರೆಗೆ ಮಲ್ಲೇಶ್ವರಂ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲು ಆಗಿದೆ.
2/ 9
ಕಳೆದ ತಿಂಗಳು ಅಂದರೆ ಮಾರ್ಚ್.14ರಂದು ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಭೂಗೋಳ ಪತ್ರಿಕೆಯ 18 ಪ್ರಶ್ನೆಗಳು ಮೊಬೈಲ್ನಲ್ಲಿ ಹರಿದಾಡಿದೆ. ಪರೀಕ್ಷೆಗೂ ಮುನ್ನ ಯುವತಿಯೊಬ್ಬರು ತಮ್ಮ ವಾಟ್ಸ್ಆಪ್ನಲ್ಲಿ ರವಾನೆ ಮಾಡಿದ್ದಾರೆ.
3/ 9
ರವಾನೆಯಾದ ಪ್ರಶ್ನೆಗಳು ಯಥಾವತ್ತಾಗಿ ಪ್ರಶ್ನೆ ಪತ್ರಿಕೆಯಲ್ಲಿ ಬಂದಿದೆ. ಈ ಹಿನ್ನಲೆ ಈ ಪ್ರಕರಣದಲ್ಲಿ ಕೇಳಿ ಬಂದಿರುವ ಓರ್ವ ಯುವತಿ, ಇತರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೆಇಎ ಅಧಿಕಾರಿ ರಶ್ಮಿ ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ
4/ 9
ಐಟಿ ಆಕ್ಟ್ 66, ಐಪಿಸಿ 120ಬಿ, 418, 420 ಅಡಿಯಲ್ಲಿ ದೂರು ಮಾಡಲಾಗಿದೆ. ಈ ಅಕ್ರಮ ಕೇಳಿ ಬಂದ ಹಿನ್ನಲೆ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಉತ್ತರ ವಿಭಾಗ ಡಿಸಿಪಿ ವಿನಾಯಕ ಪಾಟೀಲ್ ಭೇಟಿ ನೀಡಿದ್ದು, ಪ್ರಕರಣದ ಬಗ್ಗೆ ಇನ್ಸ್ಪೆಕ್ಟರ್ ಬಳಿ ಮಾಹಿತಿ ಪಡೆದಿದ್ದಾರೆ.
5/ 9
ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಸಂಬಂಧ ಕೆಲ ಅಭ್ಯರ್ಥಿಗಳು ಸಾಕ್ಷಿ ಸಂಬಂಧ ಕೆಇಎಗೂ ಆಕ್ಷೇಪಣೆ ಸಲ್ಲಿಸಿದ್ದರು.
6/ 9
ಸಹಾಯಕ ಪ್ರಧ್ಯಾಪಕರ ಹುದ್ದೆಗೆ 40 ಲಕ್ಷ ಡೀಲ್ ನಡೆದಿರುವ ಆರೋಪವನ್ನು ಮಾಡಲಾಗಿತ್ತು. ಆದರೆ, ಈ ಸಂಬಂಧ ಕೆಲ ಬೇಸತ್ತ ಅಭ್ಯರ್ಥಿಗಳು ನ್ಯಾಯ ಒದಗಿಸುವಂತೆ ಸಿಎಂಗೆ ಪತ್ರ ಬರೆದಿದ್ದಾರೆ.
7/ 9
ಇನ್ನು ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನಲೆ ತಕ್ಷಣ ಫಲಿತಾಂಶ ತಡೆಹಿಡಿದು, ಮರು ಪರೀಕ್ಷೆ ಮಾಡಿ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಈ ಅಕ್ರಮ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು.
8/ 9
ಪ್ರಶ್ನೆ ಪತ್ರಿಕೆ ಗೊಂದಲ, ವೆಬ್ಸೈಟ್ನಿಂದ ಪ್ರಶ್ನೆ ಪತ್ರಿಕೆಯನ್ನು ಕದ್ದಿರುವುದು, ಎಲ್ಲವನ್ನೂ ಕೆಇಎಗೆ ಆಕ್ಷೇಪಣೆ ಮೂಲಕ ಸಲ್ಲಿಸಿದ್ದೇವೆ. ಈವರೆಗೆ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಕೂಡ ದೂರು ನೀಡಿದ್ದಾರೆ
9/ 9
ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಸಂಬಂಧ ದಿನಾಂಕ ಮಾರ್ಚ್ 12 ರಿಂದ ಮಾರ್ಚ್ 16ರವರೆಗೆ ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತು.