BDA Broker ಮನೆಗಳ ಮೇಲೆ ACB Raid: ಒಬ್ಬರಿಗಿಂತ ಒಬ್ಬರು ರಿಚ್; ಐಷಾರಮಿ ಮನೆಗಳ ಫೋಟೋ ನೋಡಿ

ಇಂದು ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಒಂಬತ್ತು ಜನ ಬಿಡಿಎ ಬ್ರೋಕರ್ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ. ಒಟ್ಟು ನೂರು ಜನ ಸಿಬ್ಬಂದಿ ಬೆಳ್ಳಂ ಬೆಳಗ್ಗೆ ಮನೆಗೆ ಎಂಟ್ರಿ ಕೊಟ್ಟಿದ್ದು, ಶೋಧ ಕಾರ್ಯ ಆರಂಭಿಸಿದ್ದಾರೆ. ದಾಳಿಗೊಳಗಾದ ಬ್ರೋಕರ್ ಗಳು ಬಿಡಿಎ ಅಧಿಕಾರಿಗಳ ಜೊತೆ ಸೇರಿ ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪಗಳು ಕೇಳಿ ಬಂದಿದೆ. ಈ ಹಿನ್ನೆಲೆ ಎಸಿಬಿ ದಾಳಿ ನಡೆಸಿದೆ.

First published:

  • 18

    BDA Broker ಮನೆಗಳ ಮೇಲೆ ACB Raid: ಒಬ್ಬರಿಗಿಂತ ಒಬ್ಬರು ರಿಚ್; ಐಷಾರಮಿ ಮನೆಗಳ ಫೋಟೋ ನೋಡಿ

    ದಾಳಿಗೊಳಗಾದ ಬಿಡಿಎ ಬ್ರೋಕರ್ ಗಳು : 1.ರಘು ಬಿ ಎನ್ , ಚಾಮರಾಜಪೇಟೆ, 2.ಮೋಹನ್, ಮನೋರಾಯನ ಪಾಳ್ಯ, ಆರ್ ಟಿ ನಗರ, 3.ಮನೋಜ್, ದೊಮ್ಮಲೂರು, 4.ಮುನಿರತ್ನ@ರತ್ನವೇಲು, ಕೆಂಗುಟೆ, ಮಲ್ಲತ್ ಹಳ್ಳಿ, 5. ತೇಜು@ತೇಜಸ್ವಿ, ಆರ್ ಆರ್ ನಗರ, 6.ಅಶ್ವಥ್ @ಮುದ್ದಿನಪಾಳ್ಯ ಅಶ್ವಥ್, ಕೆಜಿ ಸರ್ಕಲ್ , ಮುದ್ದಿನಪಾಳ್ಯ, 7.ರಾಮ, ಚಾಮುಂಡೇಶ್ವರಿನಗರ, ಬಿಡಿಎ ಲೇಔಟ್ 8. ಚಿಕ್ಕ ಹನುಮಯ್ಯ, ಮುದ್ದಿನಪಾಳ್ಯ ಮತ್ತು 9. ಲಕ್ಷ್ಮಣ್ - ಆಶ್ರಮ, ಚಾಮುಂಡಿ ನಗರ,‌ ಬಿಡಿಎ ಲೇ ಔಟ್.

    MORE
    GALLERIES

  • 28

    BDA Broker ಮನೆಗಳ ಮೇಲೆ ACB Raid: ಒಬ್ಬರಿಗಿಂತ ಒಬ್ಬರು ರಿಚ್; ಐಷಾರಮಿ ಮನೆಗಳ ಫೋಟೋ ನೋಡಿ

    ಮಲ್ಲತ್ ಹಳ್ಳಿಯಲ್ಲಿರುವ ಬ್ರೋಕರ್ ಮನೆ ಸ್ವರ್ಗದಂತಿದೆ. ಮನೆಯಲ್ಲಿಯೇ ಸ್ವಿಮಿಂಗ್ ಫೂಲ್, ಜಿಮ್ ಸೇರಿದಂತೆ ಐಷಾರಾಮಿ  ವಸ್ತುಗಳಿಂದ ಇಡೀ ನಿವಾಸ ಅಲಂಕೃತಗೊಂಡಿದೆ.

    MORE
    GALLERIES

  • 38

    BDA Broker ಮನೆಗಳ ಮೇಲೆ ACB Raid: ಒಬ್ಬರಿಗಿಂತ ಒಬ್ಬರು ರಿಚ್; ಐಷಾರಮಿ ಮನೆಗಳ ಫೋಟೋ ನೋಡಿ

    ಮೂರು ತಿಂಗಳ ಹಿಂದೆ ಬಿಡಿಎ ಕೇಂದ್ರ ಕಚೇರಿ ಮೇಲೆ ಎಸಿಬಿ ದಾಳಿ ಆಗಿತ್ತು. ಈ ವೇಳೆ ನೂರಾರು ಕೋಟಿ ಭ್ರಷ್ಟಾಚಾರ ಆಗಿರೋ ದಾಖಲೆ ಪತ್ತೆಯಾಗಿತ್ತು. ಕಾರ್ನರ್ ಸೈಟ್ ಮಾರಾಟ, ಬಿಡಿಎ ಸೈಟ್ ಒತ್ತುವರಿ ಆಗಿರೋದು ಪತ್ತೆಯಾಗಿತ್ತು. ಬ್ರೋಕರ್ ಗಳ ಮೂಲಕ ಭ್ರಷ್ಟಾಚಾರ ಆಗಿರೋದು ತನಿಖೆ ವೇಳೆ ಬೆಳೆಕಿಗೆ ಬಂದಿತ್ತು.

    MORE
    GALLERIES

  • 48

    BDA Broker ಮನೆಗಳ ಮೇಲೆ ACB Raid: ಒಬ್ಬರಿಗಿಂತ ಒಬ್ಬರು ರಿಚ್; ಐಷಾರಮಿ ಮನೆಗಳ ಫೋಟೋ ನೋಡಿ

    ಈ ವೇಳೆ ಸುಮಾರು 150ಕ್ಕೂ ಹೆಚ್ಚು ಬ್ರೋಕರ್ ಗಳ ಪಟ್ಟಿಯನ್ನು ಎಸಿಬಿ ಮಾಡಿಕೊಂಡಿತ್ತು. ಕೆಲ ಬ್ರೋಕರ್ ಗಳ ಮನೆಗಳ ಈಗಾಗಲೇ ದಾಳಿಯಾಗಿದೆ. ಸುಮಾರು 200ಕ್ಕೂ ಹೆಚ್ಚು ಬ್ರೋಕರ್ ಗಳು ಅವರ ಜೊತೆ ಸಂಪರ್ಕದಲ್ಲಿ ಇರೋರ ವಿಚಾರಣೆ ನಡೆದಿತ್ತು.

    MORE
    GALLERIES

  • 58

    BDA Broker ಮನೆಗಳ ಮೇಲೆ ACB Raid: ಒಬ್ಬರಿಗಿಂತ ಒಬ್ಬರು ರಿಚ್; ಐಷಾರಮಿ ಮನೆಗಳ ಫೋಟೋ ನೋಡಿ

    ವಿಚಾರಣೆ ವೇಳೆ ಮತ್ತಷ್ಟು ದೊಡ್ದ ದೊಡ್ಡ ಬ್ರೋಕರ್ ಗಳ ಹೆಸರು ಹೊರಬಂದಿತ್ತು. ಮುಂದುವರೆದ ಭಾಗವಾಗಿ ಇಂದು 9 ಬಿಡಿಎ ಮಧ್ಯವರ್ತಿಗಳ ಮನೆ ಮೇಲೆ ದಾಳಿ ನಡೆದಿದೆ.

    MORE
    GALLERIES

  • 68

    BDA Broker ಮನೆಗಳ ಮೇಲೆ ACB Raid: ಒಬ್ಬರಿಗಿಂತ ಒಬ್ಬರು ರಿಚ್; ಐಷಾರಮಿ ಮನೆಗಳ ಫೋಟೋ ನೋಡಿ

    ಇನ್ನು ಬ್ರೋಕರ್ ಗಳ ಮನೆ ನೋಡಿ ಎಸಿಬಿ ಅಧಿಕಾರಿಗಳು ಫುಲ್ ಶಾಕ್ ಆಗಿದ್ದಾರೆ. ಯಾವೊಬ್ಬ ಐಷಾರಾಮಿ ಶ್ರೀಮಂತನಿಗೂ ಕಡಿಮೆ ಇಲ್ಲ ಅನ್ನುವಂತಿದೆ ಭವ್ಯ ಭಂಗಲೆಗಳು.

    MORE
    GALLERIES

  • 78

    BDA Broker ಮನೆಗಳ ಮೇಲೆ ACB Raid: ಒಬ್ಬರಿಗಿಂತ ಒಬ್ಬರು ರಿಚ್; ಐಷಾರಮಿ ಮನೆಗಳ ಫೋಟೋ ನೋಡಿ

    ಬಿಡಿಎ ಭ್ರಷ್ಟಾಚಾರದ ಮೂಲವೇ ಮಧ್ಯವರ್ತಿಗಳು ಎಂದು ಹೇಳಲಾಗುತ್ತಿದೆ. ಬಿಡಿಎ ಗೆ ಬರುವ ಪ್ರತಿಯೊಬ್ಬ ಅಧಿಕಾರಿಯನ್ನು ಸಂಪರ್ಕಿಸುತ್ತಿದ್ದ ಮಧ್ಯವರ್ತಿಗಳು, ವಹಿವಾಟು ನಡೆಸುತ್ತಿದ್ದರು.

    MORE
    GALLERIES

  • 88

    BDA Broker ಮನೆಗಳ ಮೇಲೆ ACB Raid: ಒಬ್ಬರಿಗಿಂತ ಒಬ್ಬರು ರಿಚ್; ಐಷಾರಮಿ ಮನೆಗಳ ಫೋಟೋ ನೋಡಿ

    ನಿವೇಶನ ಹಂಚಿಕೆ, ಸರ್ಕಾರಿ ನಿವೇಶನ ಅಭಿವೃದ್ದಿ ಸೇರಿ ಬಿಡಿಎ ನ‌ ಪ್ರತಿಯೊಂದು ಪ್ರಕ್ರಿಯೆಯಲ್ಲೂ ಮಧ್ಯವರ್ತಿಗಳ ಒಡನಾಟ ಪತ್ತೆಯಾಗಿದೆ. ಇದೆ ಹಿನ್ನೆಲೆಯಲ್ಲಿ ಬಿಡಿಎ ಮಧ್ಯವರ್ತಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

    MORE
    GALLERIES