Bengaluru: ಅಮ್ಮ-ಮಗನನ್ನ ಒಂದು ಮಾಡಿದ ಆಧಾರ್​ ಕಾರ್ಡ್: ಆರು ವರ್ಷದ ಬಳಿಕ ಸಿಕ್ಕ ಪುತ್ರ

ಮಹಾರಾಷ್ಟ್ರದ ನಾಗ್ಪುರ ತಾಯಿ-ಮಗನ ಮಿಲನಕ್ಕೆ ಸಾಕ್ಷಿಯಾಗಿದೆ. ಆರು ವರ್ಷದ ಹಿಂದೆ ಸಂತೆಯಲ್ಲಿ ಕಳೆದುಕೊಂಡ ಮಗನನ್ನು ಕಂಡು ತಾಯಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಬೆಂಗಳೂರಿನ ಯಲಹಂಕ ನಿವಾಸಿ ಪಾರ್ವತಮ್ಮ ಅವರಿಗೆ ಆರು ವರ್ಷಗಳ ಬಳಿಕ ಸಿಕ್ಕಿದ್ದಾನೆ. ಮಗನನನ್ನು ನೋಡಿದಾಗ ತಾಯಿಗಾದ ಸಂತೋಷವನ್ನ ವರ್ಣಿಸಲು ಪದಗಳೇ ಸಿಗದಂತಾಗಿತ್ತು.

First published:

 • 19

  Bengaluru: ಅಮ್ಮ-ಮಗನನ್ನ ಒಂದು ಮಾಡಿದ ಆಧಾರ್​ ಕಾರ್ಡ್: ಆರು ವರ್ಷದ ಬಳಿಕ ಸಿಕ್ಕ ಪುತ್ರ

  2016 ರ ಮಾರ್ಚ್‌ ನಲ್ಲಿ ಯಲಹಂಕದ ರೈತ ಸಂತೆಯಲ್ಲಿ ತರಕಾರಿ ಮಾರಾಟದ ವೇಳೆ ಪಾರ್ವತಮ್ಮ ಮಗನನ್ನು ಕಳೆದುಕೊಂಡಿದ್ದರು. ಪಾರ್ವತಮ್ಮ ಯಲಹಂಕ ಸಮೀಪದ ಸಿಂಗನಾಯಕನಹಳ್ಳಿಯ ತರಕಾರಿ ವ್ಯಾಪಾರಿ ಮಾಡಿಕೊಂಡಿದ್ದಾರೆ.

  MORE
  GALLERIES

 • 29

  Bengaluru: ಅಮ್ಮ-ಮಗನನ್ನ ಒಂದು ಮಾಡಿದ ಆಧಾರ್​ ಕಾರ್ಡ್: ಆರು ವರ್ಷದ ಬಳಿಕ ಸಿಕ್ಕ ಪುತ್ರ

  ಮಗ ಭರತ್ ಗಾಗಿ ಎಲ್ಲೆಡೆ ಹುಡುಕಾಡಿ ಕೊನೆಗೆ ದೂರು ಕೊಟ್ಟು ಪಾರ್ವತಮ್ಮ ಸುಮ್ಮನಾಗಿದ್ದರು. ಈಗ ಮಗ ಭರತ್ ನನ್ನ ತಾಯಿ ಪಾರ್ವತಮ್ಮ ಮಡಿಲು ಸೇರುವಂತೆ ಆಧಾರ್ ಕಾರ್ಡ್ ಮಾಡಿದೆ.

  MORE
  GALLERIES

 • 39

  Bengaluru: ಅಮ್ಮ-ಮಗನನ್ನ ಒಂದು ಮಾಡಿದ ಆಧಾರ್​ ಕಾರ್ಡ್: ಆರು ವರ್ಷದ ಬಳಿಕ ಸಿಕ್ಕ ಪುತ್ರ

  ಯಲಹಂಕದಿಂದ ತಪ್ಪಿಸಿಕೊಂಡಿದ್ದ ಭರತ್ ಮಹಾರಾಷ್ಟ್ರದ ನಾಗ್ಪುರ ರೈಲ್ವೇ ನಿಲ್ದಾಣ ಸೇರಿದ್ದನು. ಅಲ್ಲಿನ ಅಧಿಕಾರಿಗಳು ಭರತ್ ನನ್ನು ರಕ್ಷಿಸಿ ಸ್ಥಳೀಯ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು.

  MORE
  GALLERIES

 • 49

  Bengaluru: ಅಮ್ಮ-ಮಗನನ್ನ ಒಂದು ಮಾಡಿದ ಆಧಾರ್​ ಕಾರ್ಡ್: ಆರು ವರ್ಷದ ಬಳಿಕ ಸಿಕ್ಕ ಪುತ್ರ

  ಕಳೆದ 6 ವರ್ಷಗಳಿಂದ ಆಶ್ರಯ ಪಡೆದಿದ್ದ ಭರತ್‌ಗೆ ಆಧಾರ್ ಕಾರ್ಡ್ ಮಾಡಿಸಲು ಪುನರ್ ವಸತಿ ಕೇಂದ್ರದ ಅಧಿಕಾರಿಗಳು ನಿರ್ಧರಿಸಿದ್ದರು. 2022ರ ಜನವರಿಯಲ್ಲಿ ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ಭರತ್ ‌ನನ್ನು  ಕರೆದುಕೊಂಡು ಹೋಗಲಾಗಿತ್ತು. ಅಂದು ಭರತ್ ನ ಬೆರಳು ಮುದ್ರೆ ಪಡೆದ ಆಧಾರ್ ಕಾರ್ಡ್ ಸೇವಾ ಸಿಬ್ಬಂದಿ, ಮತ್ತೆ ಆತನನ್ನು ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು.

  MORE
  GALLERIES

 • 59

  Bengaluru: ಅಮ್ಮ-ಮಗನನ್ನ ಒಂದು ಮಾಡಿದ ಆಧಾರ್​ ಕಾರ್ಡ್: ಆರು ವರ್ಷದ ಬಳಿಕ ಸಿಕ್ಕ ಪುತ್ರ

  ಆದ್ರೆ ಕೆಲವೇ ದಿನಗಳಲ್ಲಿ ಭರತ್ ಎಂಬಾತನ ಆಧಾರ್ ಕಾರ್ಡ್​ ತಿರಸ್ಕೃತವಾಗಿದೆ ಎಂದು ಅಧಿಕಾರಿಗಳು ಪುನವರ್ಸತಿ ಕೇಂದ್ರಕ್ಕೆ ತಿಳಿಸಿದ್ದಾರೆ.

  MORE
  GALLERIES

 • 69

  Bengaluru: ಅಮ್ಮ-ಮಗನನ್ನ ಒಂದು ಮಾಡಿದ ಆಧಾರ್​ ಕಾರ್ಡ್: ಆರು ವರ್ಷದ ಬಳಿಕ ಸಿಕ್ಕ ಪುತ್ರ

  ಈಗಾಗಲೇ ಬೆಂಗಳೂರಿನಲ್ಲಿ ಬಿ.ಭರತ್ ಕುಮಾರ್ ಹೆಸರಿನಲ್ಲಿ ಆತನ ಕಾರ್ಡ್ ಚಾಲ್ತಿಯಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಿಳಿದ ಕೂಡಲೇ ಭರತ್ ಪೋಷಕರ ವಿಳಾಸ ಪತ್ತೆಗೆ ನೆರವಾಗುವಂತೆ ಪುನವರ್ಸತಿ ಕೇಂದ್ರದ ಅಧಿಕಾರಿ ಮಹೇಶ್ ವಿನಂತಿಸಿಕೊಂಡಿದ್ದಾರೆ.

  MORE
  GALLERIES

 • 79

  Bengaluru: ಅಮ್ಮ-ಮಗನನ್ನ ಒಂದು ಮಾಡಿದ ಆಧಾರ್​ ಕಾರ್ಡ್: ಆರು ವರ್ಷದ ಬಳಿಕ ಸಿಕ್ಕ ಪುತ್ರ

  ಭರತ್ ಆಧಾರ್ ಕಾರ್ಡ್ ಗೆ ತಾಯಿ ಪಾರ್ವತಮ್ಮ ಅವರ ಮೊಬೈಲ್ ನಂಬರ್ ಲಿಂಕ್ ಮಾಡಿದ್ದರಿಂದ ವಿಳಾಸ ಪತ್ತೆ ಮಾಡಲು ಅಧಿಕಾರಿಗಳಿಗೆ ಸಹಾಯವಾಗಿದೆ.

  MORE
  GALLERIES

 • 89

  Bengaluru: ಅಮ್ಮ-ಮಗನನ್ನ ಒಂದು ಮಾಡಿದ ಆಧಾರ್​ ಕಾರ್ಡ್: ಆರು ವರ್ಷದ ಬಳಿಕ ಸಿಕ್ಕ ಪುತ್ರ

  ಭರತ್ ವಿಳಾಸ ಪತ್ತೆಯಾಗಿರುವ ವಿಷಯವನ್ನು ಮಹೇಶ್,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ನಾಗ್ಪುರ ಪುನರ್ವಸತಿ ಕೇಂದ್ರ ಅಧಿಕಾರಿಗಳು ಯಲಹಂಕ ಪೊಲೀಸರನ್ನು ಸಂಪರ್ಕಿಸಿ ಭರತ್ ಬಗ್ಗೆ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 99

  Bengaluru: ಅಮ್ಮ-ಮಗನನ್ನ ಒಂದು ಮಾಡಿದ ಆಧಾರ್​ ಕಾರ್ಡ್: ಆರು ವರ್ಷದ ಬಳಿಕ ಸಿಕ್ಕ ಪುತ್ರ

  ಯಲಹಂಕ ಪೊಲೀಸರು ಭರತ್ ಆಧಾರ್ ಕಾರ್ಡ್​ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಮತ್ತು ವಿಳಾಸ ಹಿಡಿದು ತಾಯಿ ಪಾರ್ವತಮ್ಮ ಸಿಕ್ಕಿದ್ದಾರೆ. ಪಾರ್ವತಮ್ಮ ಅವರಿಗೆ  ವಿಷಯ ತಿಳಿಸಿದ್ದಾರೆ. ನಂತರ ಪಾರ್ವತಮ್ಮ ಅವರನ್ನು ಇನ್ ಸ್ಪೆಕ್ಟರ್  ಪೊಲೀಸರೊಂದಿಗೆ ನಾಗ್ಪುರಕ್ಕೆ ಕಳುಹಿಸುವ ಮೂಲಕ ತಾಯಿ-ಮಗನನ್ನು ಒಂದು ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES