ದಿನೇ ದಿನೇ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಕಾಮುಕರು ಎಗರಿ ಬೀಳುತ್ತಿದ್ದಾರೆ. ಒಂದೊಲ್ಲ ಒಂದು ಸುದ್ದಿ ಹೊರ ಬೀಳುತ್ತಲೇ ಇರುತ್ತದೆ. ಇದೆಕ್ಕೆಲ್ಲಾ ಕೊನೆಯೇ ಇಲ್ವಾ? ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಬಹುದು.
2/ 8
ಬೆಂಗಳೂರಿನಲ್ಲಿ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ ದುಡ್ಡು ಮಾಡ್ತಿದ್ದವನ ಬಂಧಿಸಲಾಗಿದೆ. ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಈ ಆರೋಪಿಯನ್ನು ಬಂಧಿಸಿದ್ದಾರೆ.
3/ 8
ಸಮರ್ ಪರಮಣಿಕ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಯುವತಿಯೊರ್ವಳಿಗೆ ಬ್ಲಾಕ್ ಮೇಲ್ ಮಾಡಿ ಡ್ಯಾನ್ಸ್ ಬಾರ್ ನಲ್ಲಿ ಕುಣಿಸಿ ದುಡ್ಡು ಮಾಡ್ತಿದ್ದ. ಈ ಬಗ್ಗೆ ಯುವತಿ ಪೊಲೋಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
4/ 8
ಬ್ಯೂಟಿ ಪಾರ್ಲರ್ ವೊಂದರಲ್ಲಿ ವೆಸ್ಟ್ ಬೆಂಗಾಲ್ ಮೂಲದ ಯುವತಿ ಕೆಲಸ ಮಾಡ್ತಿದ್ದಳು. ಪಾರ್ಲರ್ ಗೆ ಕಸ್ಟಮರ್ ಆಗಿ ಹೋಗಿದ್ದ ಸಮರ್ ಆ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ.
5/ 8
ನಂತರ ಯುವತಿಗೆ ಮೀಟ್ ಮಾಡೋ ನೆಪದಲ್ಲಿ ಕರೆದು ಲೈಂಗಿಕ ಸಂಪರ್ಕ ಕೂಡ ನಡೆಸಿದ್ದ. ಜ್ಯೂಸ್ ನಲ್ಲಿ ಮತ್ತಿನ ಮಾತ್ರೆ ಕೊಟ್ಟು ಲೈಂಗಿಕ ಸಂಪರ್ಕ ನಡೆಸಿ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿ.
6/ 8
ನಂತರ ಯುವತಿಯ ಮೊಬೈಲ್ಗೆ ವಿಡಿಯೋ ಕಳಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ಡ್ಯಾನ್ಸ್ ಬಾರ್ ನಲ್ಲಿ ಕುಣಿಬೇಕು, ಇಲ್ಲವಾದರೆ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಕೂಡ ಹಾಕಿದ್ದ.
7/ 8
ಹೀಗೆ ಯುವತಿಯನ್ನ ಬ್ಲಾಕ್ ಮೇಲ್ ಮಾಡಿ ಕುಣಿಸಿ ಹಣ ಸಂಪಾದನೆ ಮಾಡುತ್ತಿದ್ದ. ಯುವತಿಗೆ 20 ಸಾವಿರ ಕೊಟ್ಟು ಲಕ್ಷ ಲಕ್ಷ ಸಂಪಾದನೆ ಮಾಡಿದ್ದ.
8/ 8
ಈ ಬಗ್ಗೆ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ಯುವತಿ ದೂರು ನೀಡಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.