Wife Murder: ವೋಟ್ ಮಾಡಲು ಬಂದಿದ್ದಾಕೆಯನ್ನು ಕೊಚ್ಚಿ ಕೊಲೆಗೈದ 2ನೇ ಗಂಡ.. ಕಾರಣವೇನು?
ಆನೇಕಲ್ (Crime News): ಜಿಗಣಿ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ವೋಟ್ ಮಾಡಿ ಹಿಂತಿರುಗುತ್ತಿದ್ದ ಮಹಿಳೆಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತ ಮಹಿಳೆಯನ್ನು ಅರ್ಚನಾ ರೆಡ್ಡಿ (32) ಎಂದು ಗುರುತಿಸಲಾಗಿದೆ.
ಜಿಗಣಿ ನಿವಾಸಿ ಅರ್ಚನಾ ರೆಡ್ಡಿಯನ್ನು 2ನೇ ಗಂಡ ನವೀನ್ ಕುಮಾರ್ ಹತ್ಯೆಗೈದಿದ್ದಾನೆ. ವೋಟ್ ಮಾಡಿ ಕಾರಿನಲ್ಲಿ ಹೋಗುತ್ತಿದ್ದ ಅರ್ಚನಾರನ್ನು ನವೀನ್ ತನ್ನ ಸಹಚರರೊಂದಿಗೆ ರಸ್ತೆ ಮಧ್ಯೆ ಅಡ್ಡಗಟ್ಟಿ ಕೊಲೆ ಮಾಡಿದ್ದಾನೆ.
2/ 5
ಅರ್ಚನಾಗೆ ಈಗಾಗಲೇ ಮದುವೆ ಆಗಿ ಒಂದು ಮಗು ಇತ್ತು. ಮೊದಲ ಗಂಡನಿಂದ ಡಿವೋರ್ಸ್ ಪಡೆದ ಬಳಿಕ 5 ವರ್ಷಗಳ ಹಿಂದೆ ಆರೋಪಿ ನವೀನ್ ಕುಮಾರನನ್ನು 2ನೇ ಮದುವೆಯಾಗಿದ್ದರು.
3/ 5
2ನೇ ಗಂಡನೊಂದಿಗೆ ಅನೋನ್ಯವಾಗೇ ಇದ್ದ ಅರ್ಚನಾ ಇತ್ತೀಚೆಗೆ ಆತನಿಂದಲೂ ದೂರವಾಗಿ ಮಗನೊಂದಿಗೆ ಬದುಕುತ್ತಿದ್ದರು. ಅರ್ಚನಾ-ನವೀನ್ ಮಧ್ಯೆ ಕೌಟುಂಬಿಕ ಜಗಳ ಹೆಚ್ಚಾಗಿದ್ದರಿಂದ ದೂರವಾಗಿದ್ದರು.
4/ 5
ಸಾಂಸಾರಿಕ ಜಗಳ ಮಾತ್ರವಲ್ಲದೇ ಆಸ್ತಿ ವಿವಾದವೂ ಅರ್ಚನಾ-ನವೀನ್ ವೈಮನಸ್ಸಿಗೆ ಕಾರಣವಾಗಿತ್ತು. ಆಸ್ತಿ ವಿಚಾರವಾಗಿ ಕಿತ್ತಾಡಿಕೊಂಡಿದ್ದ ಗಂಡ ನವೀನ್ ಹೆಂಡತಿಯ ಕೊಲೆಗೆ ಸ್ಕೆಚ್ ಹಾಕಿದ್ದ. (ಪ್ರಾತಿನಿಧಿಕ ಚಿತ್ರ)
5/ 5
ನಿನ್ನೆ ಮತದಾನ ಮಾಡಲು ಮನೆಯಿಂದ ಹೊರ ಬಂದ ಅರ್ಚನಾಗಾಗಿ ಹೊಂಚು ಹಾಕಿ, ಕಾರನ್ನು ಅಡ್ಡಗಟ್ಟಿ ಕೊಲೆ ಮಾಡಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಮರ್ಡರ್ ನಡೆದಿದೆ. (ಪ್ರಾತಿನಿಧಿಕ ಚಿತ್ರ)