ಅಂದು ಪುಟಾಣಿಯಾಗಿದ್ದವರೆಲ್ಲ ಇಂದು ಭವ್ಯ ಭಾರತದ ಸಾರ್ವಜನಿಕರು. ತಮ್ಮ ಕಿವಿ ಹಿಂಡಿದ್ದ ಶಿಕ್ಷಕರಿಗೆ ವಿದ್ಯಾರ್ಥಿಗಳೇ ಸೇರಿ ಆಯೋಜಿಸಿದ್ರು ನೋಡಿ ಸನ್ಮಾನ ಕಾರ್ಯಕ್ರಮ! ರಾಮನಗರ ತಾಲೂಕಿನ ಸುಗ್ಗನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನಡೆದ ಸ್ನೇಹ ಸಂಗಮದ ಸಂಭ್ರಮವೇ ಈಭಾವುಕ ಕ್ಷಣ. ಸುಗ್ಗನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ 1998ನೇ ಸಾಲಿನ ಹೈಸ್ಕೂಲ್ ವಿದ್ಯಾರ್ಥಿಗಳ ಸಮಾಗಮ ಆಗಿತ್ತು.
ಸುಗ್ಗನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯ ಹಿಂದಿ ಶಿಕ್ಷಕರಾಗಿದ್ದ ವೇಣುಗೋಪಾಲ್, ಸಮಾಜ ಶಿಕ್ಷಕರಾಗಿದ್ದ ವೆಂಕಟಪ್ಪ, ಗಣಿತ ಶಿಕ್ಷಕಿ ಶಾರದಾ ಅವರನ್ನು ಸನ್ಮಾನಿಸಲಾಯಿತು. ಸುಗ್ಗನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯ ಪ್ರಸ್ತುತ ಶಿಕ್ಷಕರ ಪರವಾಗಿ ಗಣಿತ ಶಿಕ್ಷಕ ಮುತ್ತುರಾಜ್, ನಿಂಗರಾಜು ಸರ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ, 1998ರ ಈ ಬ್ಯಾಚ್ನಲ್ಲಿ ಕಲಿತು ಕಳೆದ 20 ವರ್ಷಗಳಿಂದಲೂ CRPF ಯೋಧನಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾಂತರಾಜು ಅವರನ್ನೂ ಗೌರವಿಸಲಾಯಿತು.