ಮಂತ್ರಾಲಯ ಭಕ್ತರಿಗೆ ಒಂದೊಳ್ಳೆ ಸುದ್ದಿಯೊಂದು ಹೊರಬಿದ್ದಿದೆ. ಕರ್ನಾಟಕದಿಂದ ಮಂತ್ರಾಲಯ ದರ್ಶನಕ್ಕೆ ಪ್ರಯಾಣಿಸುವವರಿಗೆ ಪ್ರಯಾಣ ಇನ್ನಷ್ಟು ಸಲೀಸಾಗಲಿದೆ. (ಸಾಂದರ್ಭಿಕ ಚಿತ್ರ)
2/ 8
ಬೆಳಗಾವಿ-ಸಿಕಂದರಾಬಾದ್-ಬೆಳಗಾವಿ ವಿಶೇಷ ರೈಲನ್ನು ಘೋಷಣೆ ಮಾಡಲಾಗಿದೆ. ಈ ರೈಲು ಮಂತ್ರಾಲಯಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ. (ಸಾಂದರ್ಭಿಕ ಚಿತ್ರ)
3/ 8
ಜನವರಿ 17ರಿಂದಲೇ ಈ ವಿಶೇಷ ರೈಲು ತನ್ನ ಸೇವೆಯನ್ನು ಆರಂಭಿಸಲಿದೆ. ಈ ರೈಲು, ಖಾನಾಪುರ, ಧಾರವಾಡ, ಹುಬ್ಬಳ್ಳಿ, ಮಂತ್ರಾಲಯ ರೋಡ್, ರಾಯಚೂರು ಹಾಗೂ ಯಾದಗಿರಿ ಮಾರ್ಗವಾಗಿ ಸಿಕಂದರಾಬಾದ್ ತಲುಪಲಿದೆ. (ಸಾಂದರ್ಭಿಕ ಚಿತ್ರ)
4/ 8
ವಿಶೇಷ ರೈಲು ಸಂಖ್ಯೆ 07335 ಬೆಳಗಾವಿಯಿಂದ ಜನವರಿ 17ರಂದು ಮಧ್ಯಾಹ್ನ 1:10ಕ್ಕೆ ಹೊರಡಲಿದೆ. ಜನವರಿ 18ರ ಬೆಳಗ್ಗೆ 5:50ಕ್ಕೆ ಸಿಕಂದರಾಬಾದ್ ತಲುಪಲಿದೆ. (ಸಾಂದರ್ಭಿಕ ಚಿತ್ರ)
5/ 8
ಸಿಕಂದರಾಬಾದ್ನಿಂದ ಜನವರಿ 18ರ ರಾತ್ರಿ 10:20ಕ್ಕೆ ರೈಲು ಹೊರಡಲಿದ್ದು ಜನವರಿ 19ರ ಮಧ್ಯಾಹ್ನ 3:35ಕ್ಕೆ ಬೆಳಗಾವಿಯನ್ನು ತಲುಪಲಿದೆ. (ಸಾಂದರ್ಭಿಕ ಚಿತ್ರ)
6/ 8
ಈ ರೈಲು ಮಾರ್ಗಮಧ್ಯದಲ್ಲಿ ಮಂತ್ರಾಲಯಕ್ಕೂ ಸಂಪರ್ಕ ಕಲ್ಪಿಸಲಿದೆ. ಹೀಗಾಗಿ ಶ್ರೀ ಗುರು ರಾಘವೇಂದ್ರ ರಾಯರ ದರ್ಶನಕ್ಕೆ ತೆರಳುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ. (ಸಾಂದರ್ಭಿಕ ಚಿತ್ರ)
7/ 8
ಒಟ್ಟಾರೆ ಭಾರತೀಯ ರೈಲ್ವೆ ಮಂತ್ರಾಲಯ ದರ್ಶನ ಮಾಡುವವರಿಗೆ ಗುಡ್ ನ್ಯೂಸ್ ನೀಡಿದೆ. (ಸಾಂದರ್ಭಿಕ ಚಿತ್ರ)
8/ 8
ಈ ರೈಲು ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ನೈಋತ್ಯ ರೈಲ್ವೆ ಪ್ರಯಾಣಿಕರಿಗೆ ಮನವಿ ಮಾಡಿದೆ. (ಸಾಂದರ್ಭಿಕ ಚಿತ್ರ)