ಭೂಮಿ ಮೇಲೆ ವಿಭಿನ್ನ ವ್ಯಕ್ತಿತ್ವದ ಜನರು ನಮಗೆ ನೋಡಲು ಸಿಗುತ್ತಾರೆ. ಒಬ್ಬೊಬ್ಬರ ಅಭಿರುಚಿ, ಆಸಕ್ತಿ, ಇಷ್ಟ-ಕಷ್ಟಗಳು ಬೇರೆ ಬೇರೆಯಾಗಿರುತ್ತವೆ. ಪ್ರೀತಿ ಹಾಗೂ ಮದುವೆಯ ವಿಷಯಕ್ಕೆ ಬಂದರೆ ತಮ್ಮಿಷ್ಟ ಬಂದ ಜನರ ಜೊತೆ ಬೆರೆಯಲು ಇಚ್ಛಿಸುತ್ತಾರೆ. ಜೊತೆಗೆ ಅವರೊಂದಿಗೆ ಬಾಳ್ವೆ ನಡೆಸಲು ಬಯಸುತ್ತಾರೆ. ಕೆಲವೊಮ್ಮೆ ಅವರ ಅಭಿರುಚಿಗಳು ತದ್ವಿರುದ್ಧವಾಗಿದ್ದರೂ ಸಹ ಸುಖ ಸಂಸಾರ ನಡೆಸುತ್ತಾರೆ.
ಮೇಷ ರಾಶಿ: ಮೇಷ ರಾಶಿಯವರು ತಾವು ಡೇಟಿಂಗ್ ಮಾಡಲು ಬಯಸುವ ಸಂಗಾತಿಯ ಬಗ್ಗೆ ಒಂದು ನಿರ್ದಿಷ್ಟ ಅಭಿಪ್ರಾಯ ಇಟ್ಟುಕೊಂಡಿರುತ್ತಾರೆ. ಅವರು ಈ ವಿಷಯಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿರುವುದಿಲ್ಲ. ತಾವು ಯಾವ ಗುಣಗಳನ್ನು ಹೊಂದಿದ್ದಾರೋ ಅದೇ ಗುಣಗಳನ್ನು ತಮ್ಮ ಸಂಗಾತಿ ಹೊಂದಿರಬೇಕೆಂದು ಬಯಸುತ್ತಾರೆ. ಇದರ ಜೊತೆಗೆ ತನ್ನ ಗೆಳೆಯ/ಗೆಳತಿ ಹೇಗಿರಬೇಕು ಎಂದು ಕೆಲವು ಪೂರ್ವಕಲ್ಪಿತ ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಂಡಿರುತ್ತಾರೆ. ಅದರಂತೆಯೇ ನಡೆದುಕೊಳ್ಳುತ್ತಾರೆ.
ವೃಷಭ ರಾಶಿ: ವೃಷಭ ರಾಶಿಯವರು ತಮ್ಮ ನಿರ್ಧಾರ ಹಾಗೂ ಸಂಗಾತಿಯ ಆದ್ಯತೆಗಳ ಬಗ್ಗೆ ಹೆಚ್ಚು ಹಠಮಾರಿಗಳಾಗಿರುತ್ತಾರೆ. ಡೇಟಿಂಗ್ ವಿಷಯಕ್ಕೆ ಬಂದರೆ, ಅವರು ಒಂದು ನಿರ್ದಿಷ್ಟ ಅಭಿಪ್ರಾಯ ಇಟ್ಟುಕೊಂಡಿರುತ್ತಾರೆ. ತಮ್ಮನ್ನು ತಾವು ತುಂಬಾ ಬಲಶಾಲಿಗಳೆಂದು ಅಂದುಕೊಳ್ಳುತ್ತಾರೆ. ಇವರಂತೆಯೇ ಇವರ ಸಂಗಾತಿಯ ವ್ಯಕ್ತಿತ್ವವೂ ಇರಬೇಕೆಂದು ಬಯಸುತ್ತಾರೆ. ಹೀಗಾಗಿ ಕೆಲವರು ಮಾತ್ರ ಇವರೊಂದಿಗೆ ಹೊಂದಿಕೊಳ್ಳುತ್ತಾರೆ.