Zodiac Sign: ಚಳಿಗಾಲ ಎಂದರೆ ಈ ರಾಶಿಯವರಿಗೆ ಬಲು ಪ್ರೀತಿ; ಕಾರಣ ಇದು!
ಚುಮ್ಮು ಚುಮ್ಮು ಚಳಿಗಾಲ (Winter) ಕೆಲವರಿಗೆ ಹಿತ ನೀಡಿದರೆ ಕೆಲವರಿಗೆ ಕೊಂಚ ಕಷ್ಟ ಎನ್ನಿಸುತ್ತದೆ. ಚಳಿಯಲ್ಲಿ ಬೆಚ್ಚಗೆ ಹೊದ್ದು, ಬಿಸಿ ಬಿಸಿ ಕಾಫಿ ಹೀರುವ ಮಜಾಕ್ಕೆ ಕೆಲವರು ಕಾಯುತ್ತಿರುತ್ತಾರೆ. ಇತಂಹ ಋತುವಿನ ತಂಪಾದ ಮತ್ತು ಶಾಂತ ವಾತವಾರಣ ಕೆಲವು ಜನರು ಬಹಳಷ್ಟು ಇಷ್ಟಪಡುವ ಸಂಗತಿಯಾಗಿದೆ. ಇಂತಹ ಚಳಿಗಾಲದ ಪ್ರಿಯರಾದ ಕೆಲವು ರಾಶಿಚಕ್ರ (Zodiac Sign) ಚಿಹ್ನೆಗಳ ಮಾಹಿತಿ ಇಲ್ಲಿದೆ.
ವೃಷಭ: ಶಾಂತ ಸ್ವಭಾವದ ಈ ರಾಶಿಯವರು ಚಳಿಯ ತಂಪು ವಾತಾವರಣವನ್ನು ಹೆಚ್ಚು ಆಹ್ಲಾದಿಸುತ್ತಾರೆ. ಇದನ್ನು ಎಲ್ಲಕ್ಕಿಂತ ಹೆಚ್ಚಾಗಿ ಆರಾಮವನ್ನು ಪ್ರೀತಿಸುತ್ತೀರಿ. ಬೆಚ್ಚಿನ ಕಂಬಳ ಹೊದ್ದ ಮಲಗುವ ಸೌಕರ್ಯವನ್ನು ಈ ರಾಶಿಯವರು ಹೆಚ್ಚು ಪ್ರೀತಿಸುತ್ತಾರೆ.
2/ 5
ಕಟಕ ರಾಶಿ: ಬಿಸಿ ಕಾಫಿ ಹೀರುತ್ತಾ ಮನೆಯೊಳಗೆ ಇರುವುದು ಇವರ ಬಲು ನೆಚ್ಚಿನ ಹವ್ಯಾಸ. ಚಳಿಗಾಲವನ್ನು ಸಂಪೂರ್ಣವಾಗಿ ಆನಂದಿಸುವ ಇವರು ಈ ಸಮಯದಲ್ಲಿ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು ಹೆಚ್ಚಿನ ಖುಷಿ ನೀಡುತ್ತದೆ.
3/ 5
ತುಲಾ ರಾಶಿ: ಚಳಿಗಾಲದಲ್ಲಿ ನಿಮ್ಮಲ್ಲಿನ ಅತ್ಯುತ್ತಮ ಸಂಗಾತಿ ಹೊರ ಬರುತ್ತಾನೆ. ಇತರರೊಂದಿಗೆ ಬೆರೆಯಲು ಇಷ್ಟಪಡದ ನೀವು ನಿಮಗಾಗಿ ಎಲ್ಲಾ ಸಮಯವನ್ನು ಮೀಸಲಿಡುತ್ತೀರಾ. ತಂಪಾದ ಗಾಳಿಯು ನಿಮ್ಮ ಭಾವನೆಗೆ ಹೆಚ್ಚು ಸೂಕ್ತವಾಗಿದೆ.
4/ 5
ವೃಶ್ಚಿಕ ರಾಶಿ: ಚಳಿಗಾಲದ ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯುವುದು ನಿಮ್ಮ ನೆಚ್ಚಿನ ಹವ್ಯಾಸವಾಗಿದೆ. ನೆನಪುಗಳು, ನಗು ಮತ್ತು ಉಲ್ಲಾಸದಿಂದ ತುಂಬಿರುವ ಬೆಚ್ಚಗಿನ ಸಂಜೆ ಇಷ್ಟಪಡುತ್ತೀರಿ. ಚಳಿಗಾಲವು ಹಲವು ನೆನಪುಗಳನ್ನು ನಿಮಗೆ ಹೊತ್ತು ತರುತ್ತದೆ.
5/ 5
ಮಕರ ರಾಶಿ: ಈ ಋತುವು ಸುಂದರ ನೆನಪನ್ನು ಮೆಲುಕು ಹಾಕಲು ಸಮಯ ನೀಡುತ್ತದೆ. ನಿಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಪ್ರಸ್ತುತ ವರ್ಷದ ತಪ್ಪುಗಳು, ಗುರಿಗಳು, ನಿರ್ಧಾರಗಳು ಮತ್ತು ಘಟನೆಗಳ ಬಗ್ಗೆ ನೀವು ಯೋಚಿಸಬಹುದು. ಜೀವನದಲ್ಲಿ ನೀವು ಮುಂದೆ ಏನು ಮಾಡಬಹುದು ಎಂಬುದರ ಕುರಿತು ಯೋಚಿಸಿ.