Love Zodiac: ಪ್ರೀತಿ ವಿಚಾರದಲ್ಲಿ ಯಾವ ರಾಶಿಯವರು ಹೇಗಿರುತ್ತಾರೆ ಗೊತ್ತಾ?
ಚಂದ್ರನ (Moon) ಚಿಹ್ನೆಯ ಆಧಾರದ ಮೇಲೆ ನಿಮ್ಮ ದಿನದ 12ರಾಶಿಗಳ (Zodiac) ಪ್ರೇಮ ವಿಚಾರ ಕುರಿತು ವಿಶ್ಲೇಷಣೆ ಮಾಡಲಾಗುವುದು. ಪ್ರೀತಿ ಜಾತಕ ಮತ್ತು ಚಂದ್ರನ ಲೆಕ್ಕಾಚಾರದ ಮೇಲೆ ಪ್ರೇಮ ಜೀವನ ಕುರಿತು ಇಲ್ಲಿ ತಿಳಿಸಲಾಗಿದೆ
ಮೇಷ ರಾಶಿ: ಪ್ರೀತಿಯ ಜೀವನವು ಉತ್ತಮವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ವಿವಾಹಿತರ ಮನೆಯ ಜೀವನದಲ್ಲಿ ಹೆಚ್ಚಿನ ಹೊಂದಾಣಿಕೆ ಇರಲಿದೆ. ಸಂಗಾತಿಯು ನಿಮ್ಮ ಕೆಲಸಕ್ಕೆ ನೆರವಾಗಲಿದ್ದಾರೆ
2/ 8
ಮಿಥುನ ರಾಶಿ: ನಿಮ್ಮ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆಯ ನಡುವೆ, ಪ್ರೀತಿಯ ಸಿಹಿ ಮಾತುಕತೆ ಇರಲಿದೆ. ನಿಮ್ಮ ಸಂಬಂಧದಲ್ಲಿ ಅನ್ಯೋನ್ಯತೆ ಹೆಚ್ಚಾಗುತ್ತದೆ. ಪ್ರೀತಿಯ ಜೀವನಕ್ಕೆ ಇಂದು ಬಹಳ ಒಳ್ಳೆಯ ದಿನ.
3/ 8
ಕಟಕ ರಾಶಿ: ಪ್ರೀತಿಯ ಜೀವನಕ್ಕೆ ಈ ದಿನವು ದುರ್ಬಲವಾಗಿದೆ. ಆದ್ದರಿಂದ, ಪ್ರಿಯತಮೆ ಅಥವಾ ಪ್ರಿಯಕರನ ಜೊತೆ ಸಂಭಾಷಣೆಯ ವಿಚಾರದಲ್ಲಿ ಎಚ್ಚರವಹಿಸಿ. ವಿವಾಹಿತರಿಗೆ ದಿನವು ಸಾಮಾನ್ಯವಾಗಿರುತ್ತದೆ.
4/ 8
ಸಿಂಹ ರಾಶಿ: ನಿಮ್ಮ ಆತ್ಮೀಯ ಸಂಗಾತಿಯೊಂದಿಗೆ ಸಮಯ ಕಳೆಯಲು ಉತ್ತಮ ಅವಕಾಶವನ್ನು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲೂ ಶಾಂತಿ ನೆಲೆಸಲಿದೆ. ಆದಾಗ್ಯೂ, ನಿಮ್ಮ ಸಂಗಾತಿಯು ನಿಮ್ಮ ಯಾವುದೇ ಕೆಟ್ಟ ಅಭ್ಯಾಸದಿಂದ ಕಿರಿಕಿರಿಗೆ ಒಳಗಾಗುತ್ತಾರೆ
5/ 8
ತುಲಾ ರಾಶಿ: ಪ್ರೀತಿಯ ವಿಷಯದಲ್ಲಿ, ಈ ದಿನವು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ದೈಹಿಕ ಸಮಸ್ಯೆಗಳು ವೈವಾಹಿಕ ಜೀವನದಲ್ಲಿ ಜೀವನ ಸಂಗಾತಿಯನ್ನು ತೊಂದರೆಗೊಳಿಸಬಹುದು. ನಿಮ್ಮ ಜೀವನ ಸಂಗಾತಿಯ ಮೂಲಕ ನೀವು ಸ್ವಲ್ಪ ಲಾಭವನ್ನು ಪಡೆಯಬಹುದು.
6/ 8
ವೃಶ್ಚಿಕ ರಾಶಿ: ನಿಮ್ಮ ಅತ್ತೆ-ಮಾವಂದಿರಿಂದ ನೀವು ಕೆಲವು ಉತ್ತಮ ಮಾಹಿತಿ ಪಡೆಯುತ್ತೀರಿ, ಅದು ನಿಮ್ಮ ಮನಸ್ಸನ್ನು ಸಂತೋಷಪಡಿಸುತ್ತದೆ. ಇಂದು ವೈವಾಹಿಕ ಜೀವನದಲ್ಲಿ ಅನುಕೂಲಕರ ದಿನವಾಗಲಿದೆ. ಪ್ರೀತಿ ಅಭಿವ್ಯಕ್ತಿಗೆ ಈ ದಿನ ಉತ್ತಮ.
7/ 8
ಧನು ರಾಶಿ: ವೈವಾಹಿಕ ಜೀವನದಲ್ಲಿ ಪರಿಸ್ಥಿತಿಗಳು ಸುಧಾರಿಸುತ್ತವೆ. ದೂರದ ದಂಪತಿಗಳು ಪರಸ್ಪರ ಹತ್ತಿರವಾಗುತ್ತೀರಿ. ಪ್ರೇಮ ಜೀವನದಲ್ಲಿ ಕಹಿ ಇರಬಹುದು
8/ 8
ಮಕರ ರಾಶಿ: ವಿವಾಹಿತರು ಸಂಗಾತಿಯೊಡನೆ ಮಾತನಾಡುವುದರಿಂದ ಸಂಬಂಧದಲ್ಲಿ ಸುಧಾರಣೆ ಕಾಣಲಿದೆ. ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವ ಮೂಲಕ ಅವರ ಸಂತೋಷಗೊಳಿಸಬಹುದು. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)