Government Job: ಜಾತಕದಲ್ಲಿ ಈ ಯೋಗ ಇದ್ರೆ ಸರ್ಕಾರಿ ಕೆಲಸ ಫಿಕ್ಸ್ ಅಂತೆ
Government Job: ಸರ್ಕಾರಿ ಕೆಲಸ ಬೇಕು ಅಂತ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಕೆಲವರಂತೂ ವರ್ಷಗಳ ಕಾಲ ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಜಾತಕದಲ್ಲಿ ಈ ಯೋಗ ಇದ್ದರೆ ಸರ್ಕಾರಿ ಕೆಲಸ ಸಿಗುತ್ತಂತೆ. ಆ ಯೋಗ ಯಾವುದು ಎಂಬುದು ಇಲ್ಲಿದೆ.
ಸರ್ಕಾರಿ ಕೆಲಸ ಬೇಕು ಅಂತ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಕೆಲವರಂತೂ ವರ್ಷಗಳ ಕಾಲ ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಜಾತಕದಲ್ಲಿ ಈ ಯೋಗ ಇದ್ದರೆ ಸರ್ಕಾರಿ ಕೆಲಸ ಸಿಗುತ್ತಂತೆ.
2/ 8
ಹೌದು, ಜಾತಕ ಎನ್ನುವುದು ನಮ್ಮ ಜೀವನದ ಕನ್ನಡಿ ಎಂದರೆ ತಪ್ಪಲ್ಲ. ಇದರ ಮೂಲಕ ನಾವು ಆಗು-ಹೋಗುಗಳನ್ನು ತಿಳಿದುಕೊಳ್ಳಬಹುದು. ಈ ಜಾತಕ ಮನೆಗಳಲ್ಲಿ ಗ್ರಹಗಳ ಬಲ ಹೆಚ್ಚಿರಬೇಕು ಎನ್ನಲಾಗುತ್ತದೆ.
3/ 8
ಈ ಜಾತಕದಲ್ಲಿ ಒಂದೊಂದು ಮನೆಯನ್ನು ನಿರ್ದಿಷ್ಟವಾಗಿ ಒಂದೊಂದು ಗ್ರಹಗಳಿಗೆ ಹಾಗೂ ಒಂದೊಂದು ಕೆಲಸಕ್ಕೆ ಎಂದು ನಿಗಧಿಯಾಗಿರುತ್ತದೆ. ಆರನೇ ಮನೆಯನ್ನು ಸೇವೆ, ವೃತ್ತಿ ಮತ್ತು ಉದ್ಯೋಗಗಳ ಬಗ್ಗೆ ಮಾಹಿತಿ ನೀಡುವ ಮನೆ ಎನ್ನಲಾಗುತ್ತದೆ
4/ 8
ಇನ್ನು ಜಾತಕದ ಒಂಬತ್ತನೇ ಮನೆ ಅದೃಷ್ಟದ ಮನೆ ಎನ್ನುವ ನಂಬಿಕೆ ಇದ್ದು, ಹಾಗೆಯೇ 10ನೇ ಮನೆ ಸಹ ಉದ್ಯೋಗ ಮತ್ತು ವೃತ್ತಿಯ ಮನೆ ಎನ್ನಲಾಗುತ್ತದೆ. ಇನ್ನು ಹನ್ನೊಂದನೇ ಮನೆಯನ್ನು ಸಂಪತ್ತು ಮತ್ತು ಆದಾಯದ ಮನೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
5/ 8
ಇನ್ನು ಸರ್ಕಾರಿ ಕೆಲಸದ ಬಗ್ಗೆ ಮಾಹಿತಿ ನೀಡುವ ಮನೆ ಎಂದರೆ 10ನೇ ಮನೆ. ಈ ಮನೆಯಲ್ಲಿ ಗ್ರಹ-ಗತಿಗಳು ಬಲವಾಗಿದ್ದರೆ ಸರ್ಕಾರಿ ಕೆಲಸ ಸಿಗಲಿದೆ ಎನ್ನಬಹುದು. ಹಾಗೆಯೇ ಈ ಮನೆಯಲ್ಲಿ ತ್ರಿಕೋನ ಯೋಗ ರೂಪುಗೊಂಡಾಗ ಕೆಲಸ ಸಿಗುವುದು ಫಿಕ್ಸ್ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
6/ 8
10 ನೇ ಮನೆಯ ಅಧಿಪತಿ ಗಟ್ಟಿಯಾಗಿದ್ದಾಗ ಹಾಗೂ 9 ನೇ ಮನೆಯಲ್ಲಿ ಇರಬೇಕಿದ್ದ ಗ್ರಹ ಹತ್ತನೇ ಮನೆಯಲ್ಲಿ ಇದ್ದಾಗ ಸಹ ಈ ಯೋಗ ಉಂಟಾಗುತ್ತದೆ. ಇದರ ಜೊತೆಗೆ 9ನೇ ಮನೆ ಹಾಗೂ 10ನೇ ಮನೆ ಅಧಿಪತಿಗಳು ಸಂಯೋಗಗೊಂಡು ಸಹ ಈ ಯೋಗ ರಚನೆ ಮಾಡಬಹುದು.
7/ 8
ಮಂಗಳ, ಗುರು, ಚಂದ್ರ ಮತ್ತು ಸೂರ್ಯ 10 ನೇ ಮನೆಯಲ್ಲಿ ಬಲವಾಗಿದ್ದಾಗ ಹಾಗೂ 4ನೇ ಮನೆಯಲ್ಲಿ ಗುರು ಇದ್ದರೆ ಸರ್ಕಾರಿ ಕೆಲಸ ಸಿಗುವುದು ಗ್ಯಾರಂಟಿ. ಹಾಗೆಯೇ ಬುಧ ಗ್ರಹ ಜಾತಕದ 6ನೇ ಮನೆಯಲ್ಲಿ ಇದ್ದರೆ ಸಹ ಉತ್ತಮವಾದ ಹುದ್ದೆಯೇ ಸಿಗಲಿದೆ
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)