Taurus 2023: ಹೊಸವರ್ಷದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಇರುತ್ತದೆ. ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ವೃಷಭ ರಾಶಿಯವರಿಗೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಈ ಹೊಸವರ್ಷದಲ್ಲಿ ವೃಷಭ ರಾಶಿಯವರಿಗೆ ಬಹಳ ಕಷ್ಟ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಜ್ಯೋತಿಷ್ಯದ ಪ್ರಕಾರ ಈ ರಾಶಿಯವರಿಗೆ 2023 ಅಶುಭ ಫಲವೇ ಜಾಸ್ತಿ. ಸ್ವಲ್ಪ ಎಚ್ಚರಿಕೆಯ ಅಗತ್ಯವಿದೆ.
2/ 8
ವ್ಯಯದ ಸ್ಥಾನದಲ್ಲಿರುವ ಗುರು ಪ್ರತಿ ವಿಭಾಗದಲ್ಲೂ ನಿಮಗೆ ಸವಾಲು ತಂದೊಡ್ಡುವ ಸಾಧ್ಯತೆ ಜಾಸ್ತಿ ಇದೆ. ದೊಡ್ಡ ಮಟ್ಟದ ಅಪವಾದ ನಮ್ಮನ್ನು ಹುಡುಕಿಕೊಂಡು ಬರಬಹುದು ಪ್ರತಿ ಕಡೆಯಲ್ಲೂ ಮೋಸ ಹೋಗುವ ಸಾಧ್ಯತೆ ಜಾಸ್ತಿ ಇರುತ್ತದೆ.
3/ 8
ಆದರೆ ಶುಭ ಕಾರ್ಯಗಳಿಗೆ ಸಂಪತ್ತು ಸ್ವಲ್ಪ ಮಟ್ಟಿಗೆ ವಿನಿಯೋಗವಾಗುತ್ತದೆ ಎನ್ನುವುದಷ್ಟೇ ಸಮಾಧಾನ. ನಿಮ್ಮ ಜೀವನದಲ್ಲಿ 2023 ಬಹಳಷ್ಟು ಬದಲಾವಣೆಗಳನ್ನು ತರಲಿದೆ. ಹಾಗಾಗಿ ಎಲ್ಲದಕ್ಕೂ ಸಿದ್ದವಾಗಿರುವುದು ಉತ್ತಮ.
4/ 8
ನಮ್ಮ ಮನಸ್ಸು ಕೂಡ ಚಂಚಲಮಯವಾಗಿರುತ್ತದೆ ಉದ್ಯೋಗ ರಂಗದಲ್ಲಿ ಅತ್ಯಂತ ನಿಧಾನವಾಗಿ ಪ್ರಗತಿ ಇದ್ದು ಎಷ್ಟು ದುಡಿದರು ಸಾಲದು ಎಂಬ ಸ್ಥಿತಿ ನಿರ್ಮಾಣವಾಗುತ್ತದೆ.
5/ 8
ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಕೋಲು ಕೊಟ್ಟು ಪೆಟ್ಟು ತಿನ್ನುವುದು ಎಂದಂತೆ ಎಲ್ಲರಿಗೂ ಸಹಾಯ ಮಾಡಲು ಹೋಗಿ ತಾವೇ ಹೊಂಡಕ್ಕೆ ಬೀಳಲಿದ್ದೀರಿ. ಎಚ್ಚರಿಕೆ ಇರಲಿ. ಯಾವುದೆ ಕಾರಣಕ್ಕೂ ಸಣ್ಣ ಸೂಚನೆಯನ್ನು ಸಹ ನೆಗ್ಲೆಟ್ ಮಾಡಬೇಡಿ.
6/ 8
ಪಿತ್ರಾರ್ಜಿತವಾದ ಸಂಪತ್ತು ಕಣ್ಣೆದುರಿಗೆ ಬೇರೆಯವರ ಪಾಲಾಗುವ ಸಾಧ್ಯತೆ ಇದೆ ಆದರೂ ವರ್ಷಾರ್ಧದ ನಂತರ ಇದ್ದುದರಲ್ಲಿ ಸ್ವಲ್ಪ ಧನಾಗಮನ ಯೋಗವಿದೆ. ಆದರೂ ಸಹ ಯಾರನ್ನೂ ನಂಬದೇ ಇರುವುದು ನಿಮಗೆ ಉತ್ತಮ.
7/ 8
ಹಾಗೆಯೇ, ಯಾರಿಂದಲೂ ಕಿಂಚಿತ್ ಸಹಕಾರವನ್ನು ನಾವು ನಿರೀಕ್ಷೆ ಮಾಡುವ ಹಾಗಿಲ್ಲ. ನಂಬಿದವರು ನಿಮ್ಮನ್ನ ನಡು ನೀರಿನಲ್ಲಿ ಕೈ ಬಿಡುವ ಸಾಧ್ಯತೆ ಇದ್ದು, ಮೋಸ ಹೋಗಿ ಪರಿತಪಿಸುವ ಬದಲು ನಂಬದಿರುವುದು ಉತ್ತಮ
8/ 8
ವಿದೇಶ ಪ್ರವಾಸದಿಗಳ ಸಾಧ್ಯತೆ ಇದೆ. ಬಹುತೇಕ ಸಮಸ್ಯೆಗಳೇ ಇರುವುದರಿಂದ ಈ ಸಮಯದಲ್ಲಿ ಗುರು ದಕ್ಷಿಣಾಮೂರ್ತಿಯನ್ನು ಆರಾಧನೆ ಮಾಡುವುದು ನಿಮಗೆ ಸ್ವಲ್ಪ ಮಟ್ಟಿನ ಸಹಾಯ ಮಾಡುತ್ತದೆ.