Yadadri Temple: ತೆಲಂಗಾಣದಲ್ಲಿ ನಿರ್ಮಾಣಗೊಳ್ಳುತ್ತಿದೆ ಮತ್ತೊಂದು ತಿರುಪತಿ; ಯಾದಾದ್ರಿ ದೇಗುಲದ ಭವ್ಯತೆ ಇದು
Yadadri: ಅಖಂಡ ಆಂಧ್ರ ಪ್ರದೇಶ ಎರಡು ರಾಜ್ಯವಾದ ಬಳಿಕ ದೇಶದ ಶ್ರೀಮಂತ ದೇಗುಲ ಆಂಧ್ರಪ್ರದೇಶ ಪಾಲಾಯಿತು. ತೆಲಂಗಾಣದಲ್ಲಿ ಅಷ್ಟು ಭವ್ಯವಾದ ದೇಗುಲ ಇಲ್ಲದಿದ್ದರೂ, ಐತಿಹಾಸಿಕ ದೇಗುಲಕ್ಕೆ ಕಡಿಮೆ ಇಲ್ಲ.
ಇಲ್ಲಿನ ಯಾದಾದ್ರಿ ದೇಗುಲ ಕೂಡ ಸಾಕಷ್ಟು ಐತಿಹಾಸಿ ಹಿನ್ನಲೆ ಹೊಂದಿದೆ. ಇದೀಗ ತೆಲಂಗಾಣ ಸರ್ಕಾರ ಈ ದೇಗುಲವನ್ನು ತಿರುಪತಿಗೆ ಸರಿಸಮವಾಗಿ ಅಭಿವೃದ್ಧಿ ಮಾಡಲು ಮುಂದಾಗಿದೆ.
2/ 10
ತಿರುಪತಿ ವೆಂಕಟೇಶ್ವರ ದೇವಸ್ಥಾನದ ಮಾದರಿಯಲ್ಲಿ ಯಾದಾದ್ರಿ ದೇಗುಲ ನಿರ್ಮಾಣ ಆಗುತ್ತಿದ್ದು, 1, 400 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.
3/ 10
ಯಾದಾದ್ರಿ ಜಿಲ್ಲೆಯಲ್ಲಿರುವ ಶತಮಾನಗಳಷ್ಟು ಹಳೆಯದಾಗಿರುವ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನ ಇದೆ. ಈ ದೇಗುಲಕ್ಕೆ ವಿಶ್ವದರ್ಜೆಯ ಸೌಲಭ್ಯ ಗಳನ್ನು ಒದಗಿಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರ ಪಣತೊಟ್ಟಿದೆ
4/ 10
ವಿಶೇಷ ಎಂದರೆ, ಯಾದಾದ್ರಿಯಲ್ಲಿ ನಿರ್ಮಾಣ ವಾಗುತ್ತಿರುವ ದೇಗುಲದ ಸುತ್ತ 9 ಬೆಟ್ಟಗಳಿವೆ. ಜತೆಗೆ ನಿತ್ಯಹರಿದ್ವರ್ಣಮಯ ಕಾಡಿನಿಂದ ಆವೃತ್ತಗೊಂಡಿದೆ
5/ 10
ಕಾಕತೀಯ ರಾಜವಂಶ ಕಾಲದ ದೇಗುಲ ಇದಾಗಿದೆ. ದೇಗುಲದ ನೂತನ ಪ್ರತಿಷ್ಠಾಪನೆಗಾಗಿ ದೇವಾಲಯದ ಆವರಣದಲ್ಲಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ
6/ 10
క్షేత్రాభివృద్ధిలో భాగంగా చేపట్టిన కట్టడాలు పూర్తికానందున మహా యాగం నిర్వహణ వాయిదా వేస్తున్నట్లు ఫోన్లో తెలిపారు. ఆలయ ఉద్ఘాటన తర్వాత నిర్వహించే అవకాశముంది.
7/ 10
ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಮತ್ತು ಶಿವ ದೇವಾಲಯವನ್ನು ಪುನರ್ನಿರ್ಮಿಸಲಾಗಿದೆ. ಜೊತೆಗೆ ವಿಷ್ಣು ಪುಷ್ಕರಿಣಿ, ಪ್ರಸಾದ ತಯಾರಿಕೆ, ಮಾರಾಟ ಸಂಕೀರ್ಣ, ಸರತಿ ಸಾಲು ಸಮುಚ್ಚಯ ಇವೆ.
8/ 10
ಜೊತೆಗೆ ಬ್ರಹ್ಮೋತ್ಸವ ಮಂಟಪ ನಿರ್ಮಿಸಲಾಗಿದೆ. ಬೆಟ್ಟದಲ್ಲಿ ಆಧ್ಯಾತ್ಮಿಕ ವಾತಾವರಣ ಮೂಡಿಸಲು ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದ ಸುತ್ತ ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ವಿನ್ಯಾಸ ಮಾಡಲಾಗಿದೆ.
9/ 10
ದೇಗುಲದ ಗೋಪುರಗಳ ಮೇಲೆ ಕಲಶಗಳ ಚಿನ್ನದ ಲೇಪನ ಮತ್ತು ದ್ವಜಸ್ತಂಭದ ತಾಮ್ರದ ಲೇಪನ ಮಾಡಲಾಗಿದೆ.
10/ 10
ಇದುವರೆಗೆ ಯಾದಾದ್ರಿ ಅಭಿವೃದ್ಧಿಗೆ ಸುಮಾರು 950 ಕೋಟಿ ರೂ. ಇವುಗಳಲ್ಲಿ 250 ರಿಂದ 280 ಕೋಟಿ ರೂ.ಗಳನ್ನು ಬೆಟ್ಟದ ಮೇಲಿರುವ ಮುಖ್ಯ ದೇವಾಲಯದ ಜೀರ್ಣೋದ್ಧಾರಕ್ಕೆ ಮತ್ತು ಉಳಿದ ಮೊತ್ತವನ್ನು ಭೂಸ್ವಾಧೀನ, ರಸ್ತೆ ಕಾಮಗಾರಿ ಮತ್ತು ವಿವಿಧ ಸೌಲಭ್ಯಗಳನ್ನು ಸ್ಥಾಪಿಸಲು ವ್ಯಯಿಸಲಾಗಿದೆ.