Vastu Tips: ಈ 5 ಮರಗಳನ್ನು ಪೂಜೆ ಮಾಡಿದ್ರೆ ಸಾಕು ಕಷ್ಟಗಳೇ ಬರಲ್ಲ

Vastu Tips: ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಕೆಲವು ಮರಗಳನ್ನು ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ, ಇದು ನಿಮ್ಮ ಕಷ್ಟಗಳನ್ನು ನಿವಾರಿಸುತ್ತದೆ ಎನ್ನುವ ನಂಬಿಕೆ ಸಹ ಇದೆ, ಹಾಗಾದ್ರೆ ಯಾವ ಮರಗಳನ್ನು ಪೂಜಿಸುವುದರಿಂದ ನೆಮ್ಮದಿಯ ಜೀವನ ನಡೆಸಬಹುದು ಎಂಬುದು ಇಲ್ಲಿದೆ.

First published:

  • 19

    Vastu Tips: ಈ 5 ಮರಗಳನ್ನು ಪೂಜೆ ಮಾಡಿದ್ರೆ ಸಾಕು ಕಷ್ಟಗಳೇ ಬರಲ್ಲ

    ನಮ್ಮ ಜೀವನದಲ್ಲಿ ಮರಗಳು ಪ್ರಮುಖ ಪಾತ್ರವಹಿಸುತ್ತವೆ. ಮರಗಳಿಂದ ಆಮ್ಲಜನಕವು ಉತ್ಪತ್ತಿಯಾಗುವುದು ಮಾತ್ರವಲ್ಲದೇಭೂಮಿಯ ಮಾಲಿನ್ಯವನ್ನು ತೆಗೆದುಹಾಕುವಲ್ಲಿ ಮರಗಳು ಪ್ರಮುಖ ಪಾತ್ರವಹಿಸುತ್ತವೆ. ಸುತ್ತಲೂ ಮರಗಳಿದ್ದರೆ ಮಾನಸಿಕ ತೃಪ್ತಿ ಮತ್ತು ಜೀವನದಲ್ಲಿ ಸಮತೋಲನ ಇರುತ್ತದೆ ಎಂದು ಹೇಳಲಾಗುತ್ತದೆ.

    MORE
    GALLERIES

  • 29

    Vastu Tips: ಈ 5 ಮರಗಳನ್ನು ಪೂಜೆ ಮಾಡಿದ್ರೆ ಸಾಕು ಕಷ್ಟಗಳೇ ಬರಲ್ಲ

    ಹಿಂದೂ ಧರ್ಮದಲ್ಲಿ, ಮರವನ್ನು ದೇವರ ವಾಸಸ್ಥಾನವೆಂದು ಹೇಳಲಾಗುತ್ತದೆ. ಕೆಲವು ಮರಗಳನ್ನು ಪೂಜೆಗೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ಮರಗಳನ್ನು ಪೂಜಿಸುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ.

    MORE
    GALLERIES

  • 39

    Vastu Tips: ಈ 5 ಮರಗಳನ್ನು ಪೂಜೆ ಮಾಡಿದ್ರೆ ಸಾಕು ಕಷ್ಟಗಳೇ ಬರಲ್ಲ

    ತುಳಸಿ: ಪ್ರತಿದಿನ ತುಳಸಿಯ ಕೆಳಗೆ ತುಪ್ಪದ ದೀಪವನ್ನು ಹಚ್ಚಬೇಕು. ತುಳಸಿ ಪೂಜೆಯನ್ನು ಮಾಡುವುದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು. ಅಲ್ಲದೇ ಇದು ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಹೆಚ್ಚಿಸುತ್ತದೆ. ತುಳಸಿ ಗಿಡವು ವಿಷ್ಣುವಿಗೆ ತುಂಬಾ ಇಷ್ಟ, ಹಾಗಾಗಿ ತುಳಸಿಯನ್ನು ಪೂಜಿಸದೇ ವಿಷ್ಣುವಿನ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗಿದೆ.

    MORE
    GALLERIES

  • 49

    Vastu Tips: ಈ 5 ಮರಗಳನ್ನು ಪೂಜೆ ಮಾಡಿದ್ರೆ ಸಾಕು ಕಷ್ಟಗಳೇ ಬರಲ್ಲ

    ಆಲದ ಮರ: ಈ ಮರವನ್ನು ಬ್ರಹ್ಮ, ವಿಷ್ಣು ಮತ್ತು ಶಿವನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಮರದ ತೊಗಟೆಯಲ್ಲಿ ವಿಷ್ಣು, ಬೇರುಗಳಲ್ಲಿ ಬ್ರಹ್ಮ ಮತ್ತು ಕೊಂಬೆಗಳಲ್ಲಿ ಶಿವನಿದ್ದಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಮರಕ್ಕೆ ನಿತ್ಯವೂ ಪೂಜೆಯನ್ನು ಮಾಡಿದರೆ ಜೀವನದಲ್ಲಿನ ಅಡೆತಡೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಅಲ್ಲದೇ, ಈ ಮರವನ್ನು ಪೂಜಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

    MORE
    GALLERIES

  • 59

    Vastu Tips: ಈ 5 ಮರಗಳನ್ನು ಪೂಜೆ ಮಾಡಿದ್ರೆ ಸಾಕು ಕಷ್ಟಗಳೇ ಬರಲ್ಲ

    ಶಮಿ ವೃಕ್ಷ: ಪ್ರತಿ ದಿನ ಸಂಜೆ ಮನೆಯಲ್ಲಿ ಪೂಜೆ ಸಲ್ಲಿಸಿದ ನಂತರ ಶಮಿ ವೃಕ್ಷದ ಕೆಳಗೆ ದೀಪವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ ಮತ್ತು ವ್ಯಾಪಾರದಲ್ಲಿ ಪ್ರಗತಿಯಾಗುತ್ತದೆ ಎನ್ನಲಾಗುತ್ತದೆ. ಪ್ರತಿ ಶನಿವಾರದಂದು ಆಲದ ಎಣ್ಣೆಯ ದೀಪವನ್ನು ಈ ಮರಕ್ಕೆ ಶನಿಗ್ರಹ ದೋಷವೂ ಪರಿಹಾರವಾಗುತ್ತದೆ .

    MORE
    GALLERIES

  • 69

    Vastu Tips: ಈ 5 ಮರಗಳನ್ನು ಪೂಜೆ ಮಾಡಿದ್ರೆ ಸಾಕು ಕಷ್ಟಗಳೇ ಬರಲ್ಲ

    ಅರಳಿ: ಪ್ರತಿ ಶನಿವಾರ ಅರಳಿ ಮರದ ಕೆಳಗೆ ದೀಪವನ್ನು ಹಚ್ಚುವುದು ಶನಿಯ ಕೋಪ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅರಳಿ ಮರದಲ್ಲಿ ನಮ್ಮ ಪೂರ್ಜಜರು ಇರುತ್ತಾರೆ ಎನ್ನುವ ನಂಬಿಕೆ ಇದೆ. ಹಾಗಾಗಿ ಅಶ್ವಥ್ ವೃಕ್ಷವನ್ನು ಪೂಜಿಸುವುದರಿಂದ ನಮ್ಮ ಪ್ರಾರ್ಥನೆಗಳು ನೇರವಾಗಿ ಅವರನ್ನು ತಲುಪುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ.

    MORE
    GALLERIES

  • 79

    Vastu Tips: ಈ 5 ಮರಗಳನ್ನು ಪೂಜೆ ಮಾಡಿದ್ರೆ ಸಾಕು ಕಷ್ಟಗಳೇ ಬರಲ್ಲ

    ಬಾಳೆ ಮರ: ಗುರುವಾರ ಬಾಳೆ ಮರವನ್ನು ಪೂಜಿಸುವುದು ತುಂಬಾ ಪ್ರಯೋಜನ ಇದೆ ಎನ್ನಲಾಗುತ್ತದೆ. ಗುರುವಾರದಂದು ವ್ರತವನ್ನು ಆಚರಿಸಿ ಬಾಳೆಗಿಡವನ್ನು ಪೂಜಿಸಿ ನೀರನ್ನು ಅರ್ಪಿಸಬೇಕು. ಬಾಳೆ ಮರವನ್ನು ಪೂಜಿಸುವುದರಿಂದ ಜಾತಕದಲ್ಲಿ ಗುರುವಿನ ಸ್ಥಾನವನ್ನು ಬಲಪಡಿಸುತ್ತದೆ.

    MORE
    GALLERIES

  • 89

    Vastu Tips: ಈ 5 ಮರಗಳನ್ನು ಪೂಜೆ ಮಾಡಿದ್ರೆ ಸಾಕು ಕಷ್ಟಗಳೇ ಬರಲ್ಲ

    ದಾಳಿಂಬೆ ಮರ: ಯಾವುದೇ ದೇವರ ಯಂತ್ರ ತಯಾರಿಸಲು ದಾಳಿಂಬೆ ಮರದ ತೊಗಟೆ ಅಗತ್ಯವಿದೆ ಎಂಬ ವಿಚಾರ ಹಲವಾರು ಜನರಿಗೆ ಗೊತ್ತಿಲ್ಲ. ಈ ಮರವನ್ನು ಪೂಜಿಸುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಕಡಿಮೆಯಾಗಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 99

    Vastu Tips: ಈ 5 ಮರಗಳನ್ನು ಪೂಜೆ ಮಾಡಿದ್ರೆ ಸಾಕು ಕಷ್ಟಗಳೇ ಬರಲ್ಲ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES