ಬುಧವಾರ ಗಣೇಶನ ಪೂಜೆಗೆ ವಿಶೇಷವಾದ ದಿನವಾಗಿದೆ. ವಿಘ್ನ ವಿನಾಶಕ ಗಣೇಶನ ಪೂಜೆ ಮಾಡುವುದರಿಮದ ಅನೇಕ ತೊಂದರೆಗಳು ಪರಿಹಾರ ಆಗುತ್ತದೆ. ಗಣೇಶನ ಪೂಜೆ ಮಾಡುವಾಗ ತಪ್ಪದೇ ಗರಿಕೆಯನ್ನು ಅರ್ಪಿಸಿ. ಇದರಿಂದ ಗಣೇಶ ಪ್ರಸನ್ನಗೊಳ್ಳುತ್ತಾನೆ.
2/ 8
ಬುಧವಾರ ಗಣೇಶನಿಗೆ ಸಮರ್ಪಿತವಾದ ದಿನ. ಗಣೇಶನಿಗೆ ಗರಿಕೆ ಎಂದರೆ ಬಲು ಪ್ರಿಯ. ಈ ಹಿನ್ನಲೆ ಹಸಿರು ಬಣ್ಣ ಅಥವಾ ಸಂಬಂಧಿತ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜೆ ಮಾಡಬಹುದು.
3/ 8
ಗರಿಕೆ ಇಲ್ಲದೆ ಗಣಪತಿಯ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಬುಧವಾರದಂದು ಗಣೇಶನಿಗೆ ಗರಿಕೆಯನ್ನು ಅರ್ಪಿಸುವುದರಿಂದ ಪುಣ್ಯ ಫಲಿತಾಂಶಗಳನ್ನು ನೀಡುತ್ತದೆ. ಅಂತಹ ಕೆಲವು ಪರಿಹಾರಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ, ಅದನ್ನು ಅಳವಡಿಸಿಕೊಂಡರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಾಣಬಹುದಾಗಿದೆ.
4/ 8
ನೀವು ಉದ್ಯೋಗಕ್ಕಾಗಿ ಸಂದರ್ಶನ ನೀಡಲು ಹೋದರೆ, ಖಂಡಿತವಾಗಿಯೂ ಗಣಪತಿಯ ಪೂಜೆ ಮಾಡಿ. ಅವರಿಗೆ ವೀಳ್ಯದೆಲೆಯನ್ನು ಅರ್ಪಿಸಿ. ಆ ವೀಳ್ಯದೆಲೆಯನ್ನು ಪ್ರಸಾದವಾಗಿ ತೆಗೆದುಕೊಳ್ಳಿ. ಅಲ್ಲದೆ, ಮನೆಯಿಂದ ಹೊರಡುವಾಗ ಬಲಗಾಲನ್ನು ಮುಂದೆ ಇಟ್ಟು ಹೋಗಿ.
5/ 8
ಕಷ್ಟಪಟ್ಟು ದುಡಿದ ಹಣವು ಕೈಯಲ್ಲಿ ನಿಲ್ಲದಿದ್ದರೆ, ಗರಿಕೆಯ ಪರಿಹಾರವು ಆರ್ಥಿಕ ಬಿಕ್ಕಟ್ಟಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಅಥವಾ ಗಣೇಶ ಚತುರ್ಥಿಯ ದಿನದಂದು ಐದು ಗರಿಕೆಯನ್ನು ಗಣಪತಿ ಮತ್ತು ಲಕ್ಷ್ಮಿ ದೇವಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಬೇಗನೆ ಪರಿಹಾರವಾಗುತ್ತವೆ ಎಂದು ನಂಬಲಾಗಿದೆ.
6/ 8
ಯಾವುದೇ ಕೆಲಸವು ಬಹಳ ದಿನಗಳಿಂದ ಪೂರ್ಣಗೊಳ್ಳದಿದ್ದರೆ, ಹಸುವಿನ ಹಾಲಿನಲ್ಲಿ ಗರಿಕೆ ರಸ ಹಿಂಡಿ ಅದನ್ನು ಹಣೆಗೆ ತಿಲಕವಾಗಿ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಆಸೆಯನ್ನು ಶೀಘ್ರದಲ್ಲೇ ಈಡೇರಿಸಬಹುದು.
7/ 8
ಬುಧವಾರದಂದು ಹಸುವಿಗೆ ಗರಿಕೆಯನ್ನು ತಿನ್ನಿಸುವುದರಿಂದ ಕುಟುಂಬದಲ್ಲಿ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳ ಬಹುದು. ಮನೆಯ ಶಾಂತಿ ಮತ್ತು ಸಂತೋಷ ಹೆಚ್ಚಲಿದೆ.
8/ 8
ಬುಧವಾರದಂದು ಗಣಪತಿಗೆ 11 ಅಥವಾ 21 ಗರಿಕೆಯನ್ನು ಅರ್ಪಿಸುವುದರಿಂದ ಸಂಪತ್ತು ಬರುತ್ತದೆ. ಗರಿಕೆಯನ್ನು ಯಾವಾಗಲೂ ಜೋಡಿಯಾಗಿ ಅರ್ಪಿಸಬೇಕು