Women Mistakes: ಬೆಳಗ್ಗೆ ಮಹಿಳೆಯರು ಈ ತಪ್ಪು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟ ಬುತ್ತಿ
Women Mistakes: ಮಹಿಳೆಯರನ್ನು ಮನೆಯ ಮಹಾಲಕ್ಷ್ಮೀ ಎನ್ನಲಾಗುತ್ತದೆ. ಮನೆಯನ್ನು ನಿಭಾಯಿಸಿಕೊಂಡು ಹೋಗುವ ಶಕ್ತಿ ಆಕೆಗಿದೆ. ಮಹಿಳೆಯಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ. ಹಾಗೆಯೇ ಮಹಿಳೆ ಮಾಡುವ ಕೆಲ ತಪ್ಪುಗಳು ಸಹ ಮನೆಯನ್ನು ಹಾಳು ಮಾಡುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಮಹಿಳೆಯರು ಯಾವ ತಪ್ಪು ಮಾಡಬಾರದು ಎಂಬುದು ಇಲ್ಲಿದೆ.
ಮಹಿಳೆಯರು ಸೂರ್ಯೋದಯಕ್ಕೂ ಮೊದಲು ಎದ್ದು, ಮನೆಯ ಮುಂದೆ ನೀರು ಹಾಕಿ ರಂಗೋಲಿ ಹಾಕಬೇಕು ಎಂದು ಹಿರಿಯರು ಹೇಳುತ್ತಾರೆ. ಈ ರೀತಿ ಮಾಡುವುದರಿಂದ ಲಕ್ಷ್ಮೀ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ ಎನ್ನಲಾಗುತ್ತದೆ. ಆದರೆ ಲೇಟ್ ಆಗಿ ಏಳುವುದರಿಂದ ದರಿದ್ರ ಅಂಟಿಕೊಳ್ಳುತ್ತದೆಯಂತೆ.
2/ 7
ಅದೃಷ್ಟ ಹಳೆಯಬೇಡಿ: ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಎಂದರೆ ನನ್ನ ಅದೃಷ್ಟವೇ ಸರಿಯಿಲ್ಲ ಎಂದು ಬೈದುಕೊಳ್ಳುವುದು. ನಮ್ಮ ಬಳಿ ಎಷ್ಟೇ ಸೌಕರ್ಯವಿದ್ದರೂ ಸಹ ಏನೂ ಇಲ್ಲ ಎಂದು ಪದೇ ಪದೇ ಹೇಳುವುದು ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟು ಮಾಡುತ್ತದೆ.
3/ 7
ಮನೆಯ ಸ್ವಚ್ಛತೆ: ಮಹಿಳೆಯರು ಬೆಳಗ್ಗೆ ಎದ್ದ ತಕ್ಷಣ ಮನೆಯ ಸ್ವಚ್ಛತೆ ಮಾಡುವುದು ಬಹಳ ಮುಖ್ಯ. ನಮ್ಮ ಮನೆ ಎಷ್ಟು ಸ್ವಚ್ಛವಾಗಿರುತ್ತದೆಯೋ ಅಷ್ಟೇ ಉತ್ತಮ. ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.
4/ 7
ಗಲಾಟೆ ಮಾಡಬೇಡಿ: ಬೆಳಗ್ಗೆ ಎದ್ದ ತಕ್ಷಣ ಮಹಿಳೆಯರು ಜಗಳ ಮಾಡಬಾರದು. ಯಾವುದೇ ದೊಡ್ಡ ಸಮಸ್ಯೆ ಇದ್ದರೂ ಸಹ ನಿಧಾನವಾಗಿ ಯೋಚನೆ ಮಾಡಿ ಮಾತನಾಡುವುದು ಬಹಳ ಅಗತ್ಯ, ಮಹಿಳೆಯ ಮಾತಿನಿಂದ ಮನೆಯ ಸಮಸ್ಯೆ ಕಡಿಮೆಯಾಗಬೇಕು ಹೊರತು ಹೆಚ್ಚಾಗಬಾರದು.
5/ 7
ಸ್ನಾನ ಮಾಡದೇ ಆಹಾರ ಸೇವನೆ: ಬೆಳಗ್ಗೆ ಕೆಲಸದ ಕಾರಣ ತಿಂಡಿ ತಿಂದು ಸ್ನಾನ ಮಾಡುವ ಅಭ್ಯಾಸ ಕೆಲಸವರಿಗೆ ಇರುತ್ತದೆ. ಆದರೆ ಮಹಿಳೆಯರು ಸ್ನಾನ ಮಾಡಿದ ನಂತರ ಆಹಾರ ಸೇವನೆ ಮಾಡುವುದು ಉತ್ತಮ. ಇದರಿಂದ ಮನೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
6/ 7
ಹೊಸ್ತಿಲನ್ನು ತುಳಿಯಬೇಡಿ: ಬೆಳಗ್ಗೆ ಎದ್ದು ಮನೆಯ ಹೊರಗೆ ಸ್ವಚ್ಛ ಮಾಡುವಾಗ ಅಪ್ಪಿ-ತಪ್ಪಿ ಹೊಸಿಲನ್ನು ತುಳಿಯಬೇಡಿ. ಹೊಸಿಲಿನಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ ಎನ್ನುವ ನಂಬಿಕೆ ಇದ್ದು, ಆಕೆಯನ್ನು ಅಗೌರವಿಸುವುದು ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)