Vaikunta Ekadashi 2023: ವೈಕುಂಠ ಏಕಾದಶಿ ದಿನ ಬ್ರಾಹ್ಮಿ ಮುಹೂರ್ತದಲ್ಲಿ ದೇವರ ದರ್ಶನ ಮಾಡಿದ್ರೆ ಒಳ್ಳೆಯದಂತೆ
Vaikunta Ekadashi 2023: ವೈಕುಂಠ ಏಕಾದಶಿಗೆ ಈಗಾಗಲೇ ಭಕ್ತಾಧಿಗಳು ಸಿದ್ಧತೆ ಆರಂಭ ಮಾಡಿಕೊಂಡಿದ್ದಾರೆ. ವೈಕುಂಠ ಏಕಾದಶಿಯು ಹಿಂದೂ ಸಂಪ್ರದಾಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಈ ದಿನ ಭಕ್ತರು ಬೆಳಂ ಬೆಳಗ್ಗೆ ವೈಕುಂಠ ದ್ವಾರ ದರ್ಶನಕ್ಕೆ ಹೋಗುತ್ತಾರೆ. ಬ್ರಾಹ್ಮಿ ಮುಹೂರ್ತದಲ್ಲಿ ದರ್ಶನ ಮಾಡಲು ಕಾಯುತ್ತಾರೆ. ಆದರೆ ಇದರ ಹಿಂದಿನ ಕಾರಣ ಹಲವಾರು ಜನರಿಗೆ ಗೊತ್ತಿಲ್ಲ.
ಇಂದು ರಾಜ್ಯದೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದ್ದು, ಭಕ್ತಾಧಿಗಳು ಈಗಾಗಲೇ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರೆ. ಭಗವಾನ್ ವಿಷ್ಣುವಿನ ದರ್ಶನ ಮಾಡಲು ಬೆಳಗಿನ ಜಾವದಿಂದಲೇ ದೇವಸ್ಥಾನಗಳ ಮುಂದೆ ನಿಂತಿದ್ದಾರೆ.
2/ 8
ಮಾರ್ಗಶಿರ್ಷ ತಿಂಗಳ ಶುಕ್ಲ ಪಕ್ಷದ ಏಕಾದಶಿಯನ್ನು ಮೋಕ್ಷದ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ವಿಷ್ಣುವನ್ನು ಭಕ್ತಿಯಿಂದ ಆರಾಧಿಸಿದರೆ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ.
3/ 8
ಏಕಾದಶಿಯಂದು ಉಪವಾಸವನ್ನು ಮಾಡಿ, ದೇವರನ್ನು ಪೂಜಿಸುವುದರಿಂದ ಅನೇಕ ಜನ್ಮಗಳ ಪಾಪಕ್ಕೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ. ಹಾಗೆಯೇ ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ದೇವರ ದರ್ಶನ ಮಾಡಿದರೆ ಜೀವನದ ಕಷ್ಟಗಳು ಮಾಯವಾಗುತ್ತದೆ ಎನ್ನುವ ನಂಬಿಕೆ ಇದೆ.
4/ 8
ವೈಕುಂಠ ಏಕಾದಶಿಯ ದಿನ ಬೆಳಗ್ಗೆ ದೇವರ ದರ್ಶನ ಮಾಡುವುದರಿಂದ ವಿಷ್ಣು ಎಲ್ಲರ ಕಷ್ಟಗಳನ್ನು ಆಲಿಸಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಭಕ್ತಾಧಿಗಳು ಈ ದಿನ ಬೆಳಗ್ಗೆಯಿಂದಲೇ ದೇವರ ದರ್ಶನಕ್ಕೆ ಕಾಯುತ್ತಿರುತ್ತಾರೆ.
5/ 8
ಇನ್ನು ವೈಕುಂಠ ಏಕಾದಶಿಯ ದಿನ ಉಪವಾಸ ಮಾಡುವುದರಿಂದ ಸಹ ಮೋಕ್ಷ ಸಿಗುತ್ತದೆ ಎನ್ನಲಾಗುತ್ತದೆ. ಈ ದಿನ ಉಪವಾಸ ಮಾಡುವುದು ಎಂದರೆ ದೇವರ ಹತ್ತಿರವಿರುವುದು ಎಂದರ್ಥ. ಹಾಗಾಗಿ ಏಕಾದಶಿಯ ದಿನ ಉಪವಾಸವನ್ನು ತಪ್ಪದೇ ಮಾಡಲಾಗುತ್ತದೆ.
6/ 8
ನಂಬಿಕೆಯ ಪ್ರಕಾರ ವೈಕುಂಠ ಏಕಾದಶಿಯ ದಿ ನ ವಿಷ್ಣುವಿನ ದರ್ಶನ ಮಾಡಿ, ವೈಕುಂಠ ದ್ವಾರದ ಮೂಲಕ ಹೊರ ಬರುವುದರಿಂದ ಏಳು ಜನ್ಮದಲ್ಲಿ ಮಾಡಿದ ಪಾಪಗಳೂ ಪರಿಹಾರವಾಗುತ್ತದೆ. ಅಲ್ಲದೇ, ಈ ದಿನ ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ಬಂದರೆ ಇನ್ನೂ ಹೆಚ್ಚಿನ ಪ್ರಯೋಜನ ಜಾಸ್ತಿ ಎನ್ನುತ್ತಾರೆ ಹಿರಿಯರು.
7/ 8
ಅಲ್ಲದೇ ಈ ಬೆಳಗ್ಗೆ ಭಕ್ತರು ದರ್ಶನ ಮಾಡಲು ಕಾಯುವುದರ ಹಿಂದೆ ಇನ್ನೂ ಒಂದು ಕಾರಣ ಸಹ ಇದೆ, ಆ ಸಮಯದಲ್ಲಿ ಮಹಾವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದುಬಂದು ಭಕ್ತರಿಗೆ ದರ್ಶನ ನೀಡುತ್ತಾನೆ ಎನ್ನುವ ನಂಬಿಕೆ ಎಂದರೆ ತಪ್ಪಲ್ಲ.
8/ 8
ಈ ದಿನ ವೈಕುಂಠದ ದ್ವಾರ ತೆಗೆದಿರುತ್ತದೆ ಎನ್ನುವ ನಂಬಿಕೆ ಇದ್ದು, ಭಕ್ತಾದಿಗಳು ನೆಚ್ಚಿನ ಭಗವಂತನ ದರ್ಶನ ಮಾಡಿಕೊಂಡು ಕಣ್ತುಂಬಿಕೊಳ್ಳುತ್ತಾರೆ.