Vaikunta Ekadashi: ಮೋಕ್ಷ ಸಂಪಾದಿಸಲು ವೈಕುಂಠ ಏಕಾದಶಿಯಂದು ತಪ್ಪದೇ ಈ ಕಾರ್ಯ ಮಾಡಿ
ಏಕಾದಶಿ ವಿಷ್ಣು ದೇವರಿಗೆ ಸಮರ್ಪಿತವಾಗಿದ್ದು, ಈ ದಿನದಂದು ಭಕ್ತರು ಉಪವಾಸ ಮಾಡುತ್ತಾರೆ. ಅದರಲ್ಲೂ ವೈಕುಂಠ ಏಕಾದಶಿ (Vaikunta Ekadashi) ಉಳಿದೆಲ್ಲ ಏಕಾದಶಿಗಿಂತ ವಿಶೇಷವಾಗಿದೆ. ವಿಷ್ಣುವಿನಿಂದ ಮೋಕ್ಷ ಸಂಪಾದಿಸುವ ಈ ಏಕಾದಶಿ ಆಚರಣೆಯಾಗಿದೆ, ಇದೇ ಕಾರಣಕ್ಕೆ ಧನುರ್ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವನ್ನು ಮೋಕ್ಷ ಏಕಾದಶಿ ಎಂದು ಕರೆಯಲಾಗುತ್ತದೆ
ಈ ಏಕಾದಶಿಯಂದು ಉಪವಾಸ ವ್ರತಮಾಡಿ ಹರಿ ನಾಮ ಸ್ಮರಣೆ ಮಾಡಿದರೆ, ಮನುಷ್ಯನ ಎಲ್ಲಾ ಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಅಷ್ಟಕ್ಕೂ ಈ ವೈಕುಂಠ ಏಕಾಶಿಗೆ ಯಾಕೆ ಇಷ್ಟು ಮಹತ್ವ ಎಂಬ ವಿಚಾರದ ಕುರಿತ ಕಥೆ ಇಲ್ಲಿದೆ.
2/ 6
ಜಗತ್ತಿನ ಸೃಷ್ಟಿಕರ್ತರಾದ ತ್ರಿಮೂರ್ತಿಗಳು ತಮ್ಮ ತಮ್ಮ ಲೋಕದಲ್ಲಿರುತ್ತಾರೆ. ಬ್ರಹ್ಮ ಲೋಕ, ಕೈಲಾಸಕ್ಕೆ ಹೋಲಿಕೆ ಮಾಡಿದರೆ, ವಿಷ್ಣುವಿನ ವೈಕುಂಠದಲ್ಲಿ ಕಷ್ಟದ ಬದಲು ಸುಖ ಹೆಚ್ಚಿರುತ್ತದೆ
3/ 6
ಈ ದಿನದಂದು ಉಪವಾಸ ವ್ರತ ಆಚರಿಸಿ ವೈಕುಂಠ ದ್ವಾರದ ಮೂಲಕ ದೇವರ ವಿಷ್ಣುವಿನ ದರ್ಶನ ಮಾಡಿದರೆ, ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ದಿನ ವಿಷ್ಣು ಗರುಡ ವಾಹನದ ಮೂಲಕ ಮೂರು ಕೋಟಿ ದೇವತೆಗಳೊಂದಿಗೆ ಭೂ ಲೋಕಕ್ಕೆ ಬರುತ್ತಾನೆ ಎಂಬ ನಂಬಿಕೆ ಇದೆ.
4/ 6
ಈ ದಿನದಂದು ವಿಷ್ಣುವಿನ ಗಿ ದರ್ಶನ ಮಾಡಿದರೆ ವಿಷ್ಣು ಸಮೇತ ಮುಕ್ಕೋಟಿ ದೇವತೆಗಳ ದರ್ಶನ ಮಾಡಿದ ಕಂಡ ಪುಣ್ಯಫಲ ಹಾಗೂ ಮೋಕ್ಷ ಪ್ರಾಪ್ತಿಯಾಗುತ್ತದೆ. ಮರುಜನ್ಮ ಎನ್ನುವುದು ಇರುವುದಿಲ್ಲ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ತಿಳಿಸಿವೆ
5/ 6
ಇದೇ ಕಾರಣದಿಂದ ವಿಷ್ಣವಿನ ಅವತಾರದ ದೇಗುಲಗಳಲ್ಲಿ ಉತ್ತರದ ದಿಕ್ಕಿನಲ್ಲಿ ಈ ದಿನ ವೈಕುಂಠ ದ್ವಾರ ನಿರ್ಮಾಣ ಮಾಡಿ, ಈ ದ್ವಾರದ ಮೂಲಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು
6/ 6
ಈ ದಿನ ಶ್ರದ್ಧಾ ಭಕ್ತಿಗಳಿಂದ ವಿಷ್ಣುವಿನ ಪೂಜೆ ಮಾಡಿ, ಹರಿನಾಮ ಸ್ಮರಣೆ ಮಾಡಿದರೂ ಕೂಡ ಎಲ್ಲಾ ಕಷ್ಟಗಳು ಪರಿಹಾರ ಆಗಲಿದೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)