Religious Beliefs: ಬಾಳೆ ಎಲೆ ಸುತ್ತ ನೀರು ಸಿಂಪಡಿಸುವುದರ ಹಿಂದಿದೆ ವೈಜ್ಞಾನಿಕ, ಧಾರ್ಮಿಕ ಕಾರಣ
ಈ ರೀತಿ ಆಚರಣೆಗಳ ಹಿಂದೆ ಅನೇಕ ಪುರಾಣದ ಕಥೆಗಳು ಕೂಡ ಇದೆ. ಇದೇ ಕಾರಣಕ್ಕೆ ತಲೆತಲಾಂತರದಿಂದ ಈ ಸಂಪ್ರದಾಯ ಆಚರಣೆಯಲ್ಲಿದೆ. ಅದರಲ್ಲಿ ಒಂದು ಊಟದ ಎಲೆ ಅಥವಾ ತಟ್ಟೆ ಸುತ್ತ ನೀರು ಹಾಕಿ ತಿನ್ನುವುದು.
ಅನ್ನ ಪರಬ್ರಹ್ಮ ಸ್ವರೂಪ. ಇದೇ ಕಾರಣಕ್ಕೆ ಅನ್ನವನ್ನು ಅನೇಕರು ಕಣ್ಣಿಗೆ ಮುಟ್ಟಿ ನಮಸ್ಕರಿಸುವ ಮೂಲಕ ತಿನ್ನುವುದನ್ನು ಕಾಣುತ್ತೇವೆ. ಊಟದ ಪದ್ಧತಿಯಲ್ಲಿ ಅನೇಕ ಆಚರಣೆಗಳನ್ನು ಬಹು ಹಿಂದಿನಿಂದ ಆಚರಿಸಕೊಂಡು ಬರಲಾಗಿದೆ.
2/ 8
ಊಟಕ್ಕೆ ಕುಳಿತಾಗ ಅದರಲ್ಲಿ ಒಂದು ತುತ್ತನ್ನು ಭೂಮಿಗೆ ಅರ್ಪಿಸುವುದು. ಹಸುವಿಗೆ ನೀಡುವುದು ಈ ರೀತಿ ಅನೇಕ ಪದ್ದತಿಗಳನ್ನು ಆಚರಿಸುತ್ತಾರೆ.
3/ 8
ಈ ರೀತಿ ಆಚರಣೆಗಳ ಹಿಂದೆ ಅನೇಕ ಪುರಾಣದ ಕಥೆಗಳು ಕೂಡ ಇದೆ. ಇದೇ ಕಾರಣಕ್ಕೆ ತಲೆತಲಾಂತರದಿಂದ ಈ ಸಂಪ್ರದಾಯ ಆಚರಣೆಯಲ್ಲಿದೆ. ಅದರಲ್ಲಿ ಒಂದು ಊಟದ ಎಲೆ ಅಥವಾ ತಟ್ಟೆ ಸುತ್ತ ನೀರು ಹಾಕಿ ತಿನ್ನುವುದು.
4/ 8
ಇಂದಿಗೂ ಅನೇಕ ಮಂದಿ ಊಟಕ್ಕೆ ಕುಳಿತಾಗ ಅದರ ಸುತ್ತ ನೀರು ಹಾಕುವುದನನು ಕಾಣಬಹುದು. ಈ ಅಚರಣೆಯನ್ನು ಚಿತ್ರಾಹುತಿ ಎನ್ನುತ್ತಾರೆ. ಈ ಕ್ರಮವನ್ನು ಅನೇಕ ಕಡೆ ಆಚರಿಸುವುದು ನೋಡಿರುತ್ತಾರೆ.
5/ 8
ಈ ರೀತಿ ಮಾಡುವ ಉದ್ದೇಶ ಎಂದರೆ, ದೈವ ಸ್ವರೂಪಿ ಅನ್ನವನ್ನು ನಾವು ಸೇವಿಸುವ ಮೊದಲು ದೇವರಿಗೆ ಅರ್ಪಿಸುವುದಾಗಿದೆ. ಈ ಆಹಾರ ನೀಡಿದ್ದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸುವ ಪರಿ ಇದಾಗಿದೆ
6/ 8
ಇನ್ನು ಇದರ ಹಿಂದಿನ ವೈಜ್ಞಾನಿಕ ಕಾರಣ ಎಂದರೆ, ಹಿಂದಿನ ಕಾಲದಲ್ಲಿ ಮಣ್ಣಿನ ನೆಲದ ಮೇಲೆ ಊಟಕ್ಕೆ ಕುಳಿತಾಗ ಬಾಳೆ ಎಲೆ ಮೇಲೆ ಧೂಳಿನ ಕಣಗಳು ಹಾರಿ ಬರಬಾರದು ಎಂಬುದರ ಹಿನ್ನಲೆ ಬಾಳೆ ಎಲೆ ಸುತ್ತ ನೀರು ಚಿಮುಕಿಸಲಾಗುತ್ತಿತ್ತು.
7/ 8
ಮಣ್ಣಿನಲ್ಲಿನ ಕೆಟ್ಟ ಬ್ಯಾಕ್ಟೀರಿಯಾ, ಕೀಟಗಳು ಎಲೆ ಬಳಿ ಸುಳಿದಯದೇ ಇರಲಿ ಎಂಬ ಕಾರಣಕ್ಕೆ ಇದನ್ನು ಅನಾದಿ ಕಾಲದ ಹಿಂದೆ ಪ್ರಾರಂಭ ಮಾಡಲಾಗಿದೆ.
8/ 8
ಇಂತಹ ಎಷ್ಟೋ ಆಚರಣೆಗಳು ತಲೆ ತಲಾಂತರಗಳಿಂದ ಆಚರಣೆ ನಡೆಸಲಾಗಿದ್ದು, ಇದರ ಹಿಂದಿನ ವೈಜ್ಞಾನಿಕ ಮತ್ತು ಧಾರ್ಮಿಕ ಮಹತ್ವಗಳು ಕೆಲವರು ತಿಳಿಯದೇ ಆಚರಿಸುತ್ತಾರೆ.