Ayyappa Swamy: ಅಯ್ಯಪ್ಪ ಮಾಲಾಧಾರಿಗಳು ಕಪ್ಪು ಬಟ್ಟೆ ಧರಿಸೋದೇಕೆ? ಶನಿಗೂ ಇದಕ್ಕೂ ಇರೋ ಸಂಬಂಧವೇನು?
Ayyappa Devotees: ನೀವು ಸಾಮಾನ್ಯವಾಗಿ ಗಮನಿಸಿರಬಹುದು ಅಯ್ಯಪ್ಪ ಸ್ವಾಮಿಯ ಮಾಲೆ ಹಾಕುವ ಭಕ್ತಾಧಿಗಳು ಹೆಚ್ಚಾಗಿ ಕಪ್ಪು ಬಟ್ಟೆಯನ್ನು ಧರಿಸುತ್ತಾರೆ. ಮಾಲಾಧಾರಿಗಳು ಯಾತ್ರೆ ಮುಗಿಯುವ ತನಕ ಕಪ್ಪು ಬಣ್ಣದ ಬಟ್ಟೆಯಲ್ಲಿಯೇ ಇರುತ್ತಾರೆ. ಇದಕ್ಕೆ ಸಹ ಒಂದು ಕಾರಣವಿದೆ. ಅಯ್ಯಪ್ಪ ಸ್ವಾಮಿಯ ಭಕ್ತರು ಕಪ್ಪು ಬಟ್ಟೆ ಧರಿಸುವುದು ಏಕೆ ಎಂಬುದು ಇಲ್ಲಿದೆ.
ಡಿಸೆಂಬರ್ ಅಂತ್ಯ ಹಾಗೂ ಜನವರಿ ಆರಂಭ ಸಮಯದಲ್ಲಿ ಸಾವಿರಾರು ಭಕ್ತಾಧಿಗಳು ಅಯ್ಯಪ್ಪ ಮಾಲೆಯನ್ನು ಧರಿಸಿರುವುದನ್ನ ನಾವು ನೋಡುತ್ತೇವೆ. ಶಬರಿಮಲೆ ಯಾತ್ರೆ ಹೋಗುವ ಮೊದಲು ಸುಮಾರು 41 ದಿನಗಳ ಕಾಲ ಕಠಿಣ ವ್ರತ ಆಚರಣೆ ಮಾಡಿ, ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುತ್ತಾರೆ. ಹಾಗೆಯೇ ಈ ಸಮಯದಲ್ಲಿ ಕಡ್ಡಾಯವಾಗಿ ಕಪ್ಪು ಬಟ್ಟೆ ಧರಿಸುವುದು ಸಹ ಒಂದು.
2/ 8
ಹಿರಿಯರು ಕಪ್ಪು ಬಟ್ಟೆಯನ್ನು ಧರಿಸುವುದು ಅಶುಭ ಎನ್ನುತ್ತಾರೆ, ಆದರೆ ಅಯ್ಯಪ್ಪ ಮಾಲಾಧಾರಿಗಳು ಮಾತ್ರ ಕಡ್ಡಾಯವಾಗಿ ಕಪ್ಪು ಹಾಕಲೇ ಬೇಕು. ಇದಕ್ಕೆ ಕಾರಣ ಶನಿ. ಹೌದು, ಶನಿ ಹಾಗೂ ಅಯ್ಯಪ್ಪನಿಗೂ ಏನು ಎಂಬಂಧ ಎಂಬ ಅನುಮಾನ ಬರಬಹುದು. ಅದಕ್ಕೆ ಉತ್ತರ ಇಲ್ಲಿದೆ.
3/ 8
ನಂಬಿಕೆಗಳ ಪ್ರಕಾರ ಅಯ್ಯಪ್ಪನ ದೀಕ್ಷೆ ತೆಗೆದುಕೊಳ್ಳುವುದರಿಂದ ಶನಿಯ ಕಾಟ ಇರುವುದಿಲ್ಲ ಎನ್ನಲಾಗುತ್ತದೆ. ತನ್ನ ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆಗಳನ್ನು ಮಾಡಬಾರದು ಎಂದು ಶನಿಗೆ ಅಯ್ಯಪ್ಪ ಆಜ್ಞಾಪಿಸಿದ್ದಾನೆ ಎಂದು ಸಹ ಹೇಳಲಾಗುತ್ತದೆ.
4/ 8
ಅಲ್ಲದೇ ಅಯ್ಯಪ್ಪನ ಈ ಮಾತಿಗೆ ಒಪ್ಪಿಕೊಂಡ ಶನಿ ಸಹ ವ್ರತ ಮಾಡುವಾಗ ಕಪ್ಪು ಬಟ್ಟೆ ಧರಿಸಬೇಕು ಎಂಬ ಶರತ್ತು ಹಾಕಿದ್ದ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಮಾಲಾಧಾರಿಗಳು ಕಪ್ಪು ಬಟ್ಟೆ ಧರಿಸುತ್ತಾರೆ .
5/ 8
ಸಾಮಾನ್ಯವಾಗಿ ಸಾಡೇಸಾತಿ ಆರಂಭವಾದರೆ 7 ವರ್ಷಗಳ ಕಾಲ ಹಿಂಸೆ ಅನುಭವಿಸಬೇಕಾಗುತ್ತದೆ. ಜೀವನದಲ್ಲಿ ಕಷ್ಟಗಳು ಸಾಲು ಸಾಲಾಗಿ ಬರುತ್ತದೆ. ಆದರೆ ಅಯ್ಯಪ್ಪನ ಮಾಲೆ ಹಾಕುವುದರಿಂದ ಶನಿಯ ಪ್ರಭಾವ ಕಡಿಮೆ ಆಗುತ್ತದೆ ಹಾಗೂ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನಲಾಗುತ್ತದೆ.
6/ 8
ಅಲ್ಲದೇ ಈ ಕಪ್ಪು ಬಟ್ಟೆಯೂ ಎಲ್ಲಾ ಲೌಕಿಕ ಆಸೆಗಳನ್ನು ಮರೆತು, ಅಯ್ಯಪ್ಪನ ಧ್ಯಾನದಲ್ಲಿ ಮಗ್ನರಾಗುವುದರ ಸಂಕೇತ ಸಹ ಎಂದು ಹೇಳಲಾಗುತ್ತದೆ. ಹಾಗೆಯೇ ಚಳಿಗಾಲದಲ್ಲಿ ವ್ರತ ಮಾಡುವುದರಿಂದ ದೇಹದ ಉಷ್ಣಾಂಶ ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
7/ 8
ಇನ್ನು ಈ 41 ದಿನಗಳ ವ್ರತ ಮಾಡಿದ ನಂತರ ಶಬರಿಮಲೆಗೆ ಯಾತ್ರೆ ಹೋಗಲಾಗುತ್ತದೆ. ಅಲ್ಲಿ ಮಕರ ಸಂಕ್ರಾಂತಿಯ ದಿನ ಮಕರ ಜ್ಯೋತಿಯನ್ನು ನೋಡಿ, ಅಯ್ಯಪ್ಪನ ದರ್ಶನ ಪಡೆದು ವ್ರತ ಪೂರ್ಣಗೊಳಿಸಲಾಗುತ್ತದೆ,.
8/ 8
ಮಕರ ಸಂಕ್ರಾಂತಿಯ ರಾತ್ರಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಬಳಿ ಆಕಾಶದಲ್ಲಿ ಒಂದು ಬೆಳಕು ಅದ್ಭುತವಾಗಿ ಗೋಚರಿಸುತ್ತದೆ. ದಟ್ಟ ಕತ್ತಲೆಯಲ್ಲೂ ಬೆಳಕು ಪ್ರಕಾಶಮಾನವಾಗಿ ಬೆಳಗುತ್ತಿರುತ್ತದೆ. ಈ ಬೆಳಕನ್ನು ನೋಡಿದಾಗಲೆಲ್ಲಾ ಅದರ ಜೊತೆಯಲ್ಲಿ ಶಬ್ದವೂ ಕೇಳಿಸುತ್ತದೆ ಎಂದು ಹೇಳಲಾಗುತ್ತದೆ.