Sabarimala: ಅಯ್ಯಪ್ಪ ಶಬರಿಮಲೆಯಲ್ಲೇ ಯಾಕೆ ನೆಲೆಸಿದ? ಮಣಿಕಂಠನ ಕುರಿತು ಕುತೂಹಲಕಾರಿ ಕಹಾನಿ ಇಲ್ಲಿದೆ
Sabarimala: ಅಯ್ಯಪ್ಪ ಎಂದ ತಕ್ಷಣ ನೆನಪಿಗೆ ಬರುವುದು ಶಬರಿಮಲೆ, ಮಕರ ಸಂಕ್ರಾಂತಿಯ ಸಮಯದಲ್ಲಿ ಶಬರಿಮಲೆಗೆ ಹೋಗುವ ಭಕ್ತಾಧಿಗಳ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಅಯ್ಯಪ್ಪ ತಾನು ನೆಲೆಸಲು ಶಬರಿಮಲೆಯನ್ನು ಆಯ್ಕೆ ಮಾಡಿದ್ದು ಏಕೆ ಎಂದು ಹಲವಾರು ಜನರಿಗೆ ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಶಬರಿಮಲೆ ಈ ಪದದ ಅರ್ಥ ಶಬರಿಯ ಬೆಟ್ಟಗಳು ಎಂದು. ರಾಮಾಯಣದಲ್ಲಿ ಬರುವ ಶ್ರೀರಾಮನ ಭಕ್ತೆ ಶಬರಿಯ ಸ್ಥಾನ ಇದು ಎನ್ನಲಾಗುತ್ತದೆ. ಅಲ್ಲದೇ ಈ ಊರಿಗೆ ಹೆಸರು ಬರಲು ಸಹ ಒಂದು ಕಾರಣವಿದೆ. ಅಲ್ಲದೇ ಅಯ್ಯಪ್ಪ ಈ ಜಾಗವನ್ನು ನೆಲೆಸಲು ಆಯ್ಕೆ ಮಾಡಿದ್ದಕ್ಕೂ ಸಹ ಅರ್ಥವಿದೆ.
2/ 7
ಎಲ್ಲರಿಗೂ ಗೊತ್ತಿರುವಂತೆ ತಾಯಿಯ ಆರೋಗ್ಯದ ದೃಷ್ಟಿಯಿಂದ ಹುಲಿಯ ಹಾಲು ತರಲು ಹೋಗಿದ್ದ ಅಯ್ಯಪ್ಪ ಮರಳಿ ಬಂದ ನಂತರ ಅಯ್ಯಪ್ಪ ದೇವಾಂಶ ಸಂಭೂತ ಎಂದು ತಿಳಿಯುತ್ತದೆ. ಆದರೆ ಅಯ್ಯಪ್ಪ ತಾನೂ ಬಂದ ಕೆಲಸ ಮುಗಿಯಿತು ಮರಳಿ ಹೋಗುತ್ತೇನೆ ಎನ್ನುತ್ತಾನೆ.
3/ 7
ಇದನ್ನು ಕೇಳಿದ ತಂದೆ, ಮಗನಿಗಾಗಿ ಒಂದು ದೇವಸ್ಥಾನವನ್ನು ನಿರ್ಮಿಸಬೇಕೆಂದು ಬಯಸುತ್ತಾನೆ. ಅಲ್ಲದೇ ಇದಕ್ಕೆ ಸೂಕ್ತವಾದ ಜಾಗವನ್ನು ನೀನೇ ಹುಡುಕು ಎಂದು ಸಹ ಹೇಳುತ್ತಾನೆ. ಇದಕ್ಕೆ ಒಪ್ಪಿದ ಅಯ್ಯಪ್ಪ ಶಬರಿಮಲೆಯನ್ನು ಆಯ್ಕೆ ಮಾಡುತ್ತಾನೆ.
4/ 7
ಇನ್ನು ಬಾಣವನ್ನು ತೆಗೆದುಕೊಂಡು ದೂರಕ್ಕೆ ಎಸೆಯುತ್ತದೆ. ಆ ಬಾಣವು ಶ್ರೀರಾಮನ ಭಕ್ತೆ ಶಬರಿ ತಪಸ್ಸು ಮಾಡಿದ್ದ ಸ್ಥಳಕ್ಕೆ ಹೋಗಿ ಬೀಳುತ್ತದೆ. ಈ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡುವಂತೆ ಹೇಳಿ ಅಯ್ಯಪ್ಪ ಮಾಯವಾಗುತ್ತಾನೆ.
5/ 7
ಡಿಸೆಂಬರ್ ಅಂತ್ಯ ಹಾಗೂ ಜನವರಿ ಆರಂಭ ಸಮಯದಲ್ಲಿ ಸಾವಿರಾರು ಭಕ್ತಾಧಿಗಳು ಅಯ್ಯಪ್ಪ ಮಾಲೆಯನ್ನು ಧರಿಸಿರುವುದನ್ನ ನಾವು ನೋಡುತ್ತೇವೆ. ಶಬರಿಮಲೆ ಯಾತ್ರೆ ಹೋಗುವ ಮೊದಲು ಸುಮಾರು 41 ದಿನಗಳ ಕಾಲ ಕಠಿಣ ವ್ರತ ಆಚರಣೆ ಮಾಡಿ, ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುತ್ತಾರೆ.
6/ 7
ನಂಬಿಕೆಗಳ ಪ್ರಕಾರ ಅಯ್ಯಪ್ಪನ ದೀಕ್ಷೆ ತೆಗೆದುಕೊಳ್ಳುವುದರಿಂದ ಶನಿಯ ಕಾಟ ಇರುವುದಿಲ್ಲ ಎನ್ನಲಾಗುತ್ತದೆ. ತನ್ನ ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆಗಳನ್ನು ಮಾಡಬಾರದು ಎಂದು ಶನಿಗೆ ಅಯ್ಯಪ್ಪ ಆಜ್ಞಾಪಿಸಿದ್ದಾನೆ ಎಂದು ಸಹ ಹೇಳಲಾಗುತ್ತದೆ.
7/ 7
ಇನ್ನು ಈ 41 ದಿನಗಳ ವ್ರತ ಮಾಡಿದ ನಂತರ ಶಬರಿಮಲೆಗೆ ಯಾತ್ರೆ ಹೋಗಲಾಗುತ್ತದೆ. ಅಲ್ಲಿ ಮಕರ ಸಂಕ್ರಾಂತಿಯ ದಿನ ಮಕರ ಜ್ಯೋತಿಯನ್ನು ನೋಡಿ, ಅಯ್ಯಪ್ಪನ ದರ್ಶನ ಪಡೆದು ವ್ರತ ಪೂರ್ಣಗೊಳಿಸಲಾಗುತ್ತದೆ,.