ಯಾರೀ Santa Claus; ಕ್ರಿಸ್ಮಸ್ ಸಮಯದಲ್ಲಿ ಉಡುಗೊರೆ ನೀಡುವುದು ಯಾಕೆ?
ಜನಪ್ರಿಯ ಕಥೆಗಳ ಪ್ರಕಾರ, ನಾಲ್ಕನೇ ಶತಮಾನದಲ್ಲಿ, ಸೇಂಟ್ ನಿಕೋಲಸ್ (Saint Nicholas) ಎಂಬ ವ್ಯಕ್ತಿ ಮೈರಾದಲ್ಲಿ (ಈಗಿನ ಟರ್ಕಿ) ವಾಸಿಸುತ್ತಿದ್ದರು. ಆತ ತುಂಬಾ ಶ್ರೀಮಂತ. ಸುಖವಾಗಿದ್ದ ನಿಕೋಲಸ್ ತನ್ನ ಪೋಷಕರನ್ನು ಕಳೆದುಕೊಳ್ಳುತ್ತಾನೆ. ಇದಾದ ಬಳಿಕ ಅನಾಥನಾಗಿದ್ದ ನಿಕೋಲಸ್ ಯಾವಾಗಲೂ ಬಡವರಿಗೆ ರಹಸ್ಯವಾಗಿ ಸಹಾಯ ಮಾಡುತ್ತಿದ್ದ. ಆತ ರಹಸ್ಯ ಉಡುಗೊರೆಗಳನ್ನು ನೀಡುವ ಮೂಲಕ ಜನರನ್ನು ಸಂತೋಷಪಡಿಸುವ ಪ್ರಯತ್ನಿಸುವ ಮೂಲಕ ದುಃಖ ಮರೆಯುತ್ತಿದ್ದ.
ಮೈರಾದಲ್ಲಿ ವಾಸಿಸುತ್ತಿದ್ದ ಒಬ್ಬ ಬಡವನಿಗೆ ಮೂರು ಹೆಣ್ಣು ಮಕ್ಕಳಿದ್ದಾರೆ, ಅವರ ಮದುವೆ ಮಾಡು ಹಣವಿಲ್ಲದೇ ಆತ ಸಂಕಷ್ಟಕ್ಕೆ ಒಳಗಾಗಿದ್ದ. ಈ ವಿಷಯ ನಿಕೋಲಸ್ಗೆ ತಿಳಿಯಿತು. ಇದನ್ನು ತಿಳಿದ ನಿಕೋಲಸ್ ಈ ವ್ಯಕ್ತಿಗೆ ಸಹಾಯ ಮಾಡಲು ಬಂದನು.
2/ 7
ಆಗ ಪ್ರಪಂಚದಾದ್ಯಂತ ಕ್ರಿಸ್ಮಸ್ ದಿನದಂದು ಸಾಕ್ಸ್ನಲ್ಲಿ ಉಡುಗೊರೆಗಳನ್ನು ನೀಡುವುದು ವಾಡಿಕೆಯಾಗಿದೆ. ಆಗ ನಿಕೋಲಸ್ ಇಂತಹ ಸಾಕ್ಸ್ಗಳಲ್ಲಿ ಚಿನ್ನಹಾಕಿ ಈ ಚೀಲವನ್ನು ಮನೆಯ ಚಿಮಣಿಯಲ್ಲಿ ಬಿಸಾಕಿದನು.
3/ 7
ಒಂದಲ್ಲ ಇದೇ ಮೂರು ಬಾರಿ ಚಿನ್ನ ತುಂಬಿದ ಸಾಕ್ಸ್ ಬಡ ಹೆಣ್ಣು ಮಕ್ಕಳ ಕುಟುಂಬದ ಮನೆ ಮೇಲೆ ಬಿದ್ದಿತು. ಕೊನೆಗೆ ಈ ಮನುಷ್ಯನನ್ನು ನಿಕೋಲಸ್ ನೋಡಿದನು. ಇದನ್ನು ಯಾರಿಗೂ ಹೇಳಬಾರದೆಂದು ನಿಕೋಲಸ್ ಕೇಳಿಕೊಂಡನು.
4/ 7
ಆದರೆ ಶೀಘ್ರದಲ್ಲೇ ಈ ವಿಷಯದ ಊರು ತುಂಬ ಹಬ್ಬಿತು. ಆ ದಿನದಿಂದ ಯಾರಿಗಾದರೂ ರಹಸ್ಯ ಉಡುಗೊರೆ ಸಿಕ್ಕರೆ, ಅದು ನಿಕೋಲಸ್ ಕೊಟ್ಟದ್ದು ಎಂದು ಎಲ್ಲರೂ ಭಾವಿಸುತ್ತಾರೆ. ಕ್ರಮೇಣ ನಿಕೋಲಸ್ನ ಈ ಕಥೆ ಜನಪ್ರಿಯವಾಯಿತು.
5/ 7
ನಿಕೋಲಸ್ನ ಕಥೆಯು ಮೊದಲು ಯುಕೆಯಲ್ಲಿ ಜನಪ್ರಿಯವಾಯಿತು. ಅವನಿಗೆ ಫಾದರ್ ಕ್ರಿಸ್ಮಸ್ ಮತ್ತು ಓಲ್ಡ್ ಮ್ಯಾನ್ ಕ್ರಿಸ್ಮಸ್ ಎಂದು ಹೆಸರಿಸಲಾಯಿತು. ಬಳಿಕ ಕ್ರಿಸ್ಮಸ್ ದಿನದಂದು ಮಕ್ಕಳಿಗೆ ಉಡುಗೊರೆಗಳನ್ನು ನೀಡುವುದು ವಾಡಿಕೆ ಆಯಿತು.
6/ 7
ಇದಾದ ನಂತರ ಕ್ರಿಸ್ಮಸ್ ದಿನದಂದು ಸಾಕ್ಸ್ನಲ್ಲಿ ಉಡುಗೊರೆಗಳನ್ನು ನೀಡುವ ಪದ್ಧತಿ, ಅಂದರೆ ಸೀಕ್ರೆಟ್ ಸಾಂಟಾ ಆಗುವುದು ಪ್ರಪಂಚದಾದ್ಯಂತ ಮುಂದುವರಿಯಿತು. ಸೀಕ್ರೆಟ್ ಸಾಂಟಾ ಆಗುವ ಮೂಲಕ ಇಂದಿಗೂ ಅನೇಕರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಈ ಪದ್ಧತಿ ಮುಂದುವರೆಸಿದ್ದಾರೆ.
7/ 7
ಮೂಲಗಳ ಪ್ರಕಾರ ಈಗ ಜನಪ್ರಿಯವಾಗಿರುವ ಡೊಳ್ಳುಹೊಟ್ಟೆಯಂತೆ, ನಗುವಿನ ಸಾಂಟಾ ನಿಕೋಲಸ್ ಆಗಿರಲಿಲ್ಲವಂತೆ. ಸದಾ ಬಾಯಲ್ಲಿ ಪೈಪ್ ಹಿಡಿದು, ಓಡಾಡುತ್ತಿದ್ದನಂತೆ. ಈಗ ಎಲ್ಲೆಡೆ ಜನಪ್ರಿಯವಾಗಿರುವ ಕೆಂಪು ಬಟ್ಟೆಯ, ದಪ್ಪ ಸಾಂಟಾ ಸುಖ ಸಂತೋಷದ ಸಮೃದ್ದಿ ಸಾಂಟಾ ಜನ ಮೆಚ್ಚುಗೆ ಪಡೆದಿದ್ದಾನೆ.