Palmistry: ಈ ಬೆರಳಿನ ಉಗುರಿನಲ್ಲಿ ಬಿಳಿ ಚುಕ್ಕೆ ಇದ್ರೆ ಜೀವನದಲ್ಲಿ ಯಶಸ್ಸು ಸಿಗುತ್ತೆ
White Mark On Nails: ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಪ್ರತಿಯೊಂದು ವಿಚಾರಕ್ಕೂ ಒಂದೊಂದು ಅರ್ಥವಿರುತ್ತದೆ. ನಿಮ್ಮ ಉಗುರುಗಳ ಮೇಲೆ ಕಾಣಿಸುವ ಬಿಳಿ ಚುಕ್ಕೆಗೆ ಸಹ ಅರ್ಥವಿದ್ದು, ಅದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಯಾವ ಉಗುರಿನ ಮೇಲೆ ಈ ಬಿಳಿ ಚುಕ್ಕೆ ಇದ್ದರೆ ಏನು ಅರ್ಥ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಜೀವನದ ಏಳು-ಬೀಳು ಹಾಗೂ ಭವಿಷ್ಯದ ಬಗ್ಗೆ ಜಾತಕವನ್ನು ನೋಡಿ ಹೇಳಲಾಗುತ್ತದೆ. ಹಾಗೆಯೇ, ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೈ ಬೆರಳು, ಅಂಗೈ ಹಾಗೂ ಉಗುರಿನ ಮೂಲಕ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ.
2/ 8
ಇದಿಷ್ಟೇ ಅಲ್ಲದೇ ಈ ಹಸ್ತಸಾಮುದ್ರಿಕ ಶಾಸ್ತ್ರವು, ಕೈಗಳ ಮೇಲಿನ ಗುರುತುಗಳು, ದೇಹದ ಮೇಲಿನ ಮಚ್ಚೆಗಳು, ಬೆರಳಿನ ಉಗುರುಗಳು, ಕಣ್ಣುಗಳನ್ನು ಸಹ ನೋಡಿ ನಿಮ್ಮ ಬದುಕಿನ ಬಗ್ಗೆ ನಿಮಗೆ ತಿಳಿಸುತ್ತದೆ.
3/ 8
ಹಾಗೆಯೇ ಈ ಶಾಸ್ತ್ರದ ಪ್ರಕಾರ ನಿಮ್ಮ ಕೈ ಉಗುರಿನ ಮೇಲೆ ಬಿಳಿ ಚುಕ್ಕೆ ಇದ್ದರೆ ಬಹಳ ಲಾಭವಂತೆ. ಯಾವ ಬೆರಳಿನ ಮೇಲೆ ಈ ಚುಕ್ಕೆ ಇದೆ ಎಂಬುದರ ಮೇಲೆ ನಿಮಗೆ ಯಾವ ರೀತಿ ಯಶಸ್ಸು ಸಿಗಲಿದೆ ಎಂಬುದನ್ನು ತಿಳಿದುಕೊಳ್ಳಬಹುದು.
4/ 8
ಎಡಗೈ ಹೆಬ್ಬೆರಳಿನ ಉಗುರಿನ ಮೇಲೆ ಬಿಳಿ ಚುಕ್ಕೆ ಇದ್ದರೆ ಅದು ನಿಮ್ಮ ಆಸೆ ಈಡೇರುವುದರ ಸಂಕೇತವಾಗಿದ್ದು, ಈ ಬಲಗೈ ಹೆಬ್ಬೆರಳಿನ ಉಗುರಿನ ಮೇಲಿನ ಚುಕ್ಕೆಯು ಹೊಸ ಸಂಬಂಧ ಸೂಚಿಸುತ್ತದೆ.
5/ 8
ಎಡಗೈ ತೋರು ಬೆರಳಿನ ಉಗುರಿನ ಮೇಲೆ ಬಿಳಿ ಚುಕ್ಕೆಯು ಅದೃಷ್ಟವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಈ ಬಲಗೈ ತೋರುಬೆರಳಿನ ಉಗುರು ಪ್ರಯಾಣದ ವಿಚಾರದಲ್ಲಿ ಯಶಸ್ಸು ನೀಡುತ್ತದೆ ಎನ್ನಲಾಗುತ್ತದೆ.
6/ 8
ಎಡಗೈ ಮಧ್ಯದ ಬೆರಳಿನ ಉಗುರಿನ ಮೇಲೆ ಬಿಳಿ ಚುಕ್ಕೆ ಇದ್ದರೆ ಹೊಸ ಬಟ್ಟೆಯನ್ನು ಖರೀದಿ ಮಾಡುವುದರ ಸಂಕೇತವಾಗಿದ್ದು, ಈ ಬಿಳಿ ಚುಕ್ಕಿ ಬಲಗೈ ಮಧ್ಯದ ಬೆರಳಿನ ಉಗುರಲ್ಲಿ ಇದ್ದರೆ ವಾಹನದ ಮೂಲಕ ಲಾಭ ಅಥವಾ ಹೊಸ ವಾಹನ ಖರೀದಿಸುವ ಸೂಚನೆಯಾಗಿದೆ.
7/ 8
ಎಡಗೈ ಉಂಗುರದ ಬೆರಳಿನ ಉಗುರಿನ ಮೇಲಿನ ಬಿಳಿ ಚುಕ್ಕೆಯು ಲಾಟರಿ ಅಥವಾ ಆರ್ಥಿಕ ಲಾಭವನ್ನು ನೀಡುತ್ತದೆ ಎನ್ನುವ ನಂಬಿಕೆ ಇದ್ದು, ಬಲಗೈ ಉಂಗುರದ ಬೆರಳಿನ ಉಗುರಿನ ಈ ಬಿಳಿ ಚುಕ್ಕೆಯು ಹೊಸ ಉದ್ಯೋಗ ಅಥವಾ ಪ್ರಶಸ್ತಿಯ ಸಂಕೇತವಾಗಿದೆ.
8/ 8
ಎಡಗೈ ಕಿರು ಬೆರಳಿನ ಉಗುರಿನ ಬಿಳಿ ಚುಕ್ಕಿಯು ಮದುವೆ ಅಥವಾ ಪ್ರೀತಿಯ ಸೂಚಕವಾಗಿದ್ದು, ಹೊಸ ವ್ಯಕ್ತಿ ಬದುಕಿಗೆ ಪ್ರವೇಶ ಮಾಡಬಹುದು. ಹಾಗೆಯೇ ಬಲಗೈ ಬೆರಳ ಉಗುರಿನ ಚುಕ್ಕೆಯು ಕನಸು ನನಸಾಗುವುದರ ಸಂಕೇತ ಎನ್ನಲಾಗುತ್ತದೆ.