ಪ್ರತಿಯೊಂದು ರಾಶಿಯನ್ನು ಒಂದು ಗ್ರಹ ಆಳುತ್ತದೆ. ಆದ್ದರಿಂದ ರಾಶಿ ಸ್ವಭಾವಗಳು ಭಿನ್ನವಾಗಿರುರತ್ತವೆ. ಜ್ಯೋತಿಷ್ಯ ಅಥವಾ ಫೆಂಗ್ ಶೂಯಿ ಅಥವಾ ವಾಸ್ತುಶೈಲಿ ಪ್ರತಿಯೊಂದು ವಿಭಾಗವೂ ಸ್ನೇಹವನ್ನು ಒಂದು ಪ್ರಮುಖ ಸಂಬಂಧವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದಲ್ಲಿಯೂ ಸಹ ಪ್ರತಿಯೊಂದು ರಾಶಿಚಕ್ರವನ್ನು ಕೆಲವು ಅಥವಾ ಇನ್ನೊಂದು ಗ್ರಹವು ಆಳುತ್ತದೆ ಎಂದು ಹೇಳಲಾಗುತ್ತದೆ. ಇದು ಅದರ ರಾಶಿಚಕ್ರದ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. (ಸಾಂದರ್ಭಿಕ ಚಿತ್ರ)
ಸಿಂಹ
ಈ ರಾಶಿಯವರು ಸ್ನೇಹವನ್ನ ಜೀವನದ ಪ್ರಮುಖ ಭಾಗವೆಂದು ನಂಬುತ್ತಾರೆ. ಅದಕ್ಕಾಗಿ ಸ್ನೇಹಿತರೊಂದಿಗೆನ ಹೆಚ್ಚು ಹರಠೆ ಹೊಡೆಯಲು ಇಷ್ಟಪಡುತ್ತಾರೆ. ಕನ್ಯಾ ರಾಶಿ- ಇವರು ಉತ್ತಮ ಗುಣ ಹೊಂದಿರುವರನ್ನು ಗೆಳೆಯರನ್ನಾಗಿ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಇವರು ಸ್ನೇಹವಿಲ್ಲದ ಜೀವನ ಅಸ್ತಿತ್ವದಲ್ಲಿಲ್ಲ ಎಂದು ನಂಬುವಂತಹ ಜನರು. ಕೆಲ ರಹಸ್ಯಗಳನ್ನು ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ಳುತ್ತಾರೆ.
ಕುಂಭ
ಇವರು ಸ್ನೇಹಕ್ಕೆ ಹೆಚ್ಚ ಪ್ರಾಮುಖ್ಯತೆ ನೀಡುತ್ತಾರೆ. ಯೋಚಿಸಿ ಸ್ನೇಹವನ್ನು ಸಂಪಾದಿಸುತ್ತಾರೆ. ಒಮ್ಮೆ ಸ್ನೇಹಿತರಾದ ಬಳಿಕ ಅವರ ಗೆಳೆತನವನ್ನು ಎಂದಿಗೂ ಕಳೆದುಕೊಳ್ಳಲ್ಲ. ಮೀನ - ಈ ರಾಶಿಯ ಜನರು ತುಂಬಾ ಬುದ್ಧಿವಂತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸುತ್ತಾರೆ. ಸೈದ್ಧಾಂತಿಕವಾಗಿ ಪ್ರಬುದ್ಧ ವ್ಯಕ್ತಿ ಸ್ನೇಹಿತನಾಗಿದ್ದರೆ, ಅವರು ಕಾಲಕಾಲಕ್ಕೆ ಸಲಹೆಯನ್ನು ನೀಡಬೇಕೆಂದು ಅವರು ಬಯಸುತ್ತಾರೆ.