ಅದರಲ್ಲಿ ಮುಖ್ಯವಾದುದು ಸಂಗಾತಿಗಳ ಭಾವನೆಗಳಿಗೆ ಬೆಲೆ ನೀಡುವಂತಹದ್ದು. ನಿಮ್ಮ ಪಾರ್ಟನರ್ ಒಮ್ಮೊಮ್ಮೆ ತುಂಬಾ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ ಅಂತೆಯೇ ಅತಿಯಾಗಿ ಪ್ರೀತಿಸುವವರು, ಹೆಚ್ಚು ಭಾವನಾತ್ಮಕವಾಗಿ ಹಚ್ಚಿಕೊಂಡ ವ್ಯಕ್ತಿತ್ವದವರೂ ಆಗಿರುತ್ತಾರೆ. ಅವರವರ ರಾಶಿಗೆ ಅನುಗುಣವಾಗಿ ಈ ಸ್ವಭಾವ ಅವರಲ್ಲಿ ಒಳಗೊಂಡಿರುತ್ತದೆ. ನಿಮ್ಮ ಪಾರ್ಟನರ್ ಭಾವನಾತ್ಮಕವಾಗಿ ಸಂವೇದನಾಶೀಲರು ಎಂದಾದರೆ ಅದನ್ನು ಅರಿತುಕೊಂಡು ಮುನ್ನಡೆಯಬೇಕು ಆಗ ಮಾತ್ರವೇ ಪ್ರೀತಿ ಸಫಲವಾಗುತ್ತದೆ.
ನೀವು ಏನನ್ನು ಹೇಳದೆಯೇ ನಿಮ್ಮ ಮನದಲ್ಲಿರುವುದನ್ನು ನಿಮ್ಮ ಸಂಗಾತಿ ತಿಳಿದುಕೊಳ್ಳುತ್ತಿದ್ದಾರೆ ಎಂದರೆ ನೀವು ಅದೃಷ್ಟವಂತರೇ ಸರಿ. ಸಂಬಂಧದಲ್ಲಿ ಭಾವನಾತ್ಮಕವಾಗಿ ಸುರಕ್ಷಿತವಾಗಿರುವ ಭಾವನೆ ಉಂಟಾಗುವುದು ತುಂಬಾ ಅಪರೂಪವಾಗಿದೆ. ಆದರೆ ಈ ರಾಶಿಯವರು ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹಾಗಿದ್ರೆ ಆ ರಾಶಿಗಳು ಯಾವುದೆಲ್ಲಾ ಎಂಬುದನ್ನು ಈ ಲೇಖನದಲ್ಲಿದೆ ಓದಿ.
ತುಲಾ ರಾಶಿ: ಭಾವನಾತ್ಮಕತೆಗೆ ಬೆಲೆ ಕೊಡುವ ತುಲಾ ರಾಶಿಯವರು ಶಾಂತಿ ಮತ್ತು ಶಾಂತತೆಯ ಭಾವವನ್ನು ತರುವ ಸಂಬಂಧಗಳಿಗೆ ಆಕರ್ಷಿತರಾಗುತ್ತಾರೆ. ಸಂವಹನದಲ್ಲಿ ನುರಿತರಾಗಿರುವ ಈ ರಾಶಿಯವರು ಯಾವುದೇ ಭಯವಿಲ್ಲದೆ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ ಹಾಗೂ ತಮ್ಮ ಸಂಗಾತಿ ಕೂಡ ಇದೇ ರೀತಿ ಇರಬೇಕೆಂದು ಬಯಸುತ್ತಾರೆ. ಸಂಬಂಧಕ್ಕೆ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ