Vastu Tips: ಯಾವುದೇ ಕಾರಣಕ್ಕೂ ಈ ಫೋಟೋಗಳನ್ನು ನಿಮ್ಮ ಮನೆಯಲ್ಲಿ ಹಾಕಬೇಡಿ!
ನಿಮಗೆ ಮನಸ್ಸಿಗೆ ನೆಮ್ಮದಿ ಬೇಕು ಅಂದ್ರೆ ಏನು ಮಾಡ್ತೀರಾ? ಮನೆಯಲ್ಲಿ ವಾಸ್ತು ದೋಷ ಇದ್ರೆ ಏನೇ ಪ್ರಯತ್ನ ಪಟ್ಟರೂ ನೆಮ್ಮದಿ ಬರೋಲ್ಲ. ಹೀಗಾಗಿ ಇಷ್ಟು ಫೋಟೋಗಳನ್ನು ಇರಿಸಿ, ನಿಮ್ಮ ಲಕ್ ಚೇಂಜ್ ಆಗುತ್ತೆ.
ಮನೆಯಲ್ಲಿ ಸಾಕಷ್ಟು ನಷ್ಟಗಳನ್ನು ಅನುಭವಿಸುತ್ತಾ ಇದ್ದೀರಾ? ವಾಸ್ತು ದೋಷ ಇದ್ಯಾ ಎಂಬುದು ಹೇಗೆ ತಿಳಿದುಕೊಳ್ಳೋದು ಅಂತ ಯೋಚನೆ ಮಾಡ್ತಾ ಇದ್ದೀರಾ? ಹಾಗಾದ್ರೆ ಎಲ್ಲೆಲ್ಲಿ ಯಾವ ಫೋಟೋಗಳನ್ನು ಇರಿಸಬೇಕು ಮತ್ತು ಇರಿಸಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.
2/ 8
ಯುದ್ಧದ ಚಿತ್ರ ಅಸುರರನ್ನು ಕೊಲ್ಲುವ ದೇವ-ದೇವತೆಗಳ ಚಿತ್ರಗಳನ್ನು ಅಥವಾ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು. ಎಲ್ಲಕ್ಕಿಂತ ಉತ್ತಮವಾದದ್ದು, ಯಾವುದೇ ದೇವಾನುದೇವತೆಯ ಚಿತ್ರ ವರದ ಮುದ್ರೆಯಲ್ಲಿರುವುದು, ಅಂದರೆ ವರವನ್ನು ನೀಡುವಂತ ಭಂಗಿಯಲ್ಲಿರುವ ಫೋಟೋ ಉತ್ತಮ. ಯುದ್ಧ ಅಶಾಂತಿಯನ್ನು ಸೂಚಿಸುತ್ತದೆ.
3/ 8
ವೈದ್ಯರು ಹನುಮಾನ್ ಚಿತ್ರವನ್ನು ಹಾಕಬೇಕು ತಮ್ಮ ಮನೆ ಮತ್ತು ಸಂಸ್ಥೆಗಳಲ್ಲಿ ಸಂಜೀವನಿ ಪರ್ವತವನ್ನು ಹೊತ್ತ ಹನುಮಾನ್ ಚಿತ್ರವನ್ನು ಅಥವಾ ಹನುಮಂತನ ಚಿತ್ರವನ್ನು ವೈದ್ಯರು ಹಾಕಬೇಕು. ಇಂತಹ ಚಿತ್ರ ಹಾಕುವುದರಿಂದ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ಮೂಡುತ್ತವೆ. ಸೇವಾ ಭಾವನೆ ಜಾಗೃತವಾಗುತ್ತದೆ. ಹನುಮಂತನ ಕೃಪೆ ಉಳಿಯಲಿದ್ದು, ಚಿಕಿತ್ಸೆ ಹೆಚ್ಚು ಫಲ ಕೊಡುತ್ತದೆ.
4/ 8
ಕೋಪಗೊಂಡ ಹನುಮಂತನ ಮೂರ್ತಿಯನ್ನು ಮನೆಯಲ್ಲಿ ಇಡಬಾರದು. ಈ ಕಾರಣದಿಂದಾಗಿ, ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಅಲ್ಲದೆ, ಹನುಮಂತನು ಶ್ರೀರಾಮನ ಭುಜದ ಮೇಲೆ ಕುಳಿತಿರುವಂಥ ಚಿತ್ರವನ್ನು ಮನೆಯಲ್ಲಿ ಇಡಬಾರದು. ಏಕೆಂದರೆ ಹನುಮಂತನು ಅಸ್ಥಿರ ಭಂಗಿಯಲ್ಲಿದ್ದಾನೆ.
5/ 8
ಮನೆಯಲ್ಲಿ ಎಂದಿಗೂ ನಟರಾಜ ರೂಪದಲ್ಲಿ ಶಿವನ ಚಿತ್ರ ಅಥವಾ ವಿಗ್ರಹವನ್ನು ಇಡಬೇಡಿ. ಏಕೆಂದರೆ ಈ ರೂಪದಲ್ಲಿ ಶಿವನನ್ನು ತುಂಬಾ ಕೋಪಗೊಂಡವನು ಎಂದು ಪರಿಗಣಿಸಲಾಗುತ್ತದೆ. ಮನೆಯ ದೇವರ ಕೋಣೆಯಲ್ಲಿ ಶಿವಲಿಂಗವನ್ನು ಎಂದಿಗೂ ಸ್ಥಾಪಿಸಬಾರದು. ಬೇರೆ ಕಡೆಗೆ ಇಡಬಹುದು.
6/ 8
ಶಾಂತಿಯುತವಾದಂತಹ ಚಿತ್ರಗಳು, ಮೂರ್ತಿಗಳನ್ನು ನೀವು ಮನೆಯಲ್ಲಿ ಇರಿಸಿ. ಸಕಾರಾತ್ಮಕ ಭಾವನೆಯು ಬೆಳೆಯುತ್ತದೆ.
7/ 8
ಮನೆಯಲ್ಲಿ ಶ್ರೀಕೃಷ್ಣನ ಬಾಲರೂಪವನ್ನು ಇಟ್ಟುಕೊಳ್ಳುವುದು ಮಂಗಳಕರವಾಗಿದ್ದು, ಆತನ ಸೇವೆ ಮಾಡುವುದರಿಂದ ಮುಕ್ತಿ ದೊರೆಯುತ್ತದೆ. ರಾಧಾ-ಕೃಷ್ಣರ ಚಿತ್ರವನ್ನು ಹಾಕಬೇಕಾದರೆ ಅದನ್ನು ನಿಂತಿರುವ ಭಂಗಿಯಲ್ಲಿ ಇಡಬೇಕು.
8/ 8
ಸಂಪತ್ತಿನ ದೇವತೆಯಾದ ಕುಬೇರ ಮತ್ತು ಲಕ್ಷ್ಮಿಯ ಚಿತ್ರವು ವರದ ಮುದ್ರೆಯಲ್ಲಿ ಕುಳಿತುಕೊಂಡಿರಬೇಕು. ಅಂತಹ ಚಿತ್ರವನ್ನು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತಿನ ದೇವತೆ ನೆಲೆಸುತ್ತಾಳೆ. ನಾವು ಭಗವಾನ್ ವಿಷ್ಣುವಿನ ಚಿತ್ರದ ಬಗ್ಗೆ ಮಾತನಾಡುವುದಾದರೆ, ಮನೆಯಲ್ಲಿ ಲಕ್ಷ್ಮಿಯ ಜೊತೆಗೆ ಅದನ್ನು ಪೂಜಿಸುವುದು ಉತ್ತಮ.