Puja Vidhi: ಯಾವ ದಿನ, ಯಾವ ದೇವರಿಗೆ ಪೂಜೆ ಸಲ್ಲಿಸಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ

God For The Day: ನೀವು ಗಮನಿಸಿರಬಹುದು, ನಾವು ವಾರದ ಒಂದೊಂದು ದಿನವನ್ನು ಒಂದೊಂದು ದೇವರಿಗೆ ಎಂದು ಅರ್ಪಿಸಿ ಪೂಜೆ ಮಾಡುತ್ತೇವೆ. ಈ ರೀತಿ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಮುಖ್ಯವಾಗಿ ಯಾವ ದಿನ, ಯಾವ ದೇವರ ಪೂಜೆ ಮಾಡಬೇಕು ಎನ್ನುವ ಗೊಂದಲ ಇದೆ. ಅದಕ್ಕೆ ಉತ್ತರ ಇಲ್ಲಿದೆ. ಅಲ್ಲದೇ ಆ ದಿನ ಹೇಗೆ ಪೂಜೆ ಮಾಡಬೇಕು ಎಂಬುದು ಸಹ ಇಲ್ಲಿದೆ.

First published:

  • 18

    Puja Vidhi: ಯಾವ ದಿನ, ಯಾವ ದೇವರಿಗೆ ಪೂಜೆ ಸಲ್ಲಿಸಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ

    ಸೋಮವಾರ- ಶಿವನಿಗೆ ಅರ್ಪಿತ: ಸೋಮವಾರ ಶಿವನಿಗೆ ಅರ್ಪಿಸಿರುವ ದಿನ ಎನ್ನಲಾಗುತ್ತದೆ, ಈ ದಿನ ಉಪವಾಸ ಮಾಡುವುದರಿಂದ ಶಿವನ ಆಶೀರ್ವಾದ ಸಿಗುತ್ತದೆ. ಅಲ್ಲದೇ ಈ ದಿನ ಶಿವಲಿಂಗಕ್ಕೆ ಶ್ರೀಗಂಧ, ಬಿಳಿ ಹೂವು ಮತ್ತು ಬಿಲ್ವಪತ್ರೆ ಎಲೆಗಳನ್ನು ಅರ್ಪಿಸಿ.

    MORE
    GALLERIES

  • 28

    Puja Vidhi: ಯಾವ ದಿನ, ಯಾವ ದೇವರಿಗೆ ಪೂಜೆ ಸಲ್ಲಿಸಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ

    ಮಂಗಳವಾರ- ಹನುಮಂತನಿಗೆ: ಮಂಗಳವಾರ ಹನುಮಂತ ಆರಾಧನೆ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನಲಾಗುತ್ತದೆ. ಈ ದಿನ ಹನುಮಾನ್ ಚಾಲೀಸ್ ಪಠಣೆ ಮಾಡಿ, ದೇವರಿಗೆ ಕೆಂಪು ಮತ್ತು ಕಿತ್ತಳೆ ಬಣ್ಣದ ಹೂವುಗಳನ್ನು ಅರ್ಪಿಸಿ ದೀಪ ಹಚ್ಚಿದರೆ ಒಳ್ಳೆಯದಾಗುತ್ತದೆ.

    MORE
    GALLERIES

  • 38

    Puja Vidhi: ಯಾವ ದಿನ, ಯಾವ ದೇವರಿಗೆ ಪೂಜೆ ಸಲ್ಲಿಸಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ

    ಬುಧವಾರ- ಗಣೇಶನಿಗೆ: ಬುಧವಾರ ಗಣೇಶನ ಪೂಜೆ ಮಾಡಿದರೆ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ. ಬುಧವಾರ ಗಣೇಶನಿಗೆ ಗರಿಕೆ, ಹಳದಿ ಮತ್ತು ಬಿಳಿ ಹೂವುಗಳು, ಬಾಳೆಹಣ್ಣು, ಮೋದಕ ಅರ್ಪಿಸುವುದರಿಂದ ನಿಮ್ಮ ಕೆಲಸಕ್ಕೆ ಇದ್ದ ವಿಘ್ನಗಳು ನಿವಾರಣೆಯಾಗುತ್ತದೆ.

    MORE
    GALLERIES

  • 48

    Puja Vidhi: ಯಾವ ದಿನ, ಯಾವ ದೇವರಿಗೆ ಪೂಜೆ ಸಲ್ಲಿಸಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ

    ಗುರುವಾರ- ವಿಷ್ಣು ಪೂಜೆ ಮಾಡಿ: ಗುರುವಾರ ಸಾಮಾನ್ಯವಾಗಿ ಗುರುವಿನ ಪೂಜೆ ಮಾಡಲಾಗುತ್ತದೆ, ಹಾಗೆಯೇ ಈ ದಿನ ವಿಷ್ಣುವಿನ ಪೂಜೆ ಸಹ ಮಾಡಬೇಕು. ಈ ದಿನ ವಿಷ್ಣುವಿನ ಆರಾಧನೆ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬರುವುದಿಲ್ಲ. ಈ ದಿನ ದೇವರಿಗೆ ತುಪ್ಪ, ಹಾಲು, ಹಳದಿ ಹೂವು ಮತ್ತು ಬೆಲ್ಲವನ್ನು ಅರ್ಪಿಸಿ.

    MORE
    GALLERIES

  • 58

    Puja Vidhi: ಯಾವ ದಿನ, ಯಾವ ದೇವರಿಗೆ ಪೂಜೆ ಸಲ್ಲಿಸಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ

    ಶುಕ್ರವಾರ- ಲಕ್ಷ್ಮೀ ಆರಾಧನೆ ಮಾಡಿ: ಶುಕ್ರವಾರ ಲಕ್ಷ್ಮೀಯನ್ನು ಆರಾಧಿಸುವುದರಿಂದ ಜೀವನದಲ್ಲಿ ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಈ ದಿನ ದೇವರಿಗೆ ಬೆಲ್ಲ, ಕಡಲೆ, ತುಪ್ಪ ಮತ್ತು ಹಾಲಿನ ಉತ್ಪನ್ನಗಳನ್ನು ಅರ್ಪಿಸಿದ್ರೆ ನಿಮ್ಮ ಜೀವನದ ಹಣದ ಸಮಸ್ಯೆಗಳು ನಿವಾರಣೆಯಾಗುತ್ತದೆ.

    MORE
    GALLERIES

  • 68

    Puja Vidhi: ಯಾವ ದಿನ, ಯಾವ ದೇವರಿಗೆ ಪೂಜೆ ಸಲ್ಲಿಸಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ

    ಶನಿವಾರ- ಶನಿ ದೇವರಿಗೆ ಮೀಸಲು: ಶನಿವಾರ ಶನಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಈ ದಿನ ಶನಿ ದೇವರಿಗೆ ಎಳ್ಳಿನ ದೀಪ, ಎಳ್ಳು, ಎಳ್ಳೆಣ್ಣೆ ಅರ್ಪಿಸುವುದರಿಂದ ಶನಿ ಕಾಟದಿಂದ ಮುಕ್ತಿ ಸಿಗುತ್ತದೆ.

    MORE
    GALLERIES

  • 78

    Puja Vidhi: ಯಾವ ದಿನ, ಯಾವ ದೇವರಿಗೆ ಪೂಜೆ ಸಲ್ಲಿಸಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ

    ಭಾನುವಾರ- ಸೂರ್ಯ ದೇವರಿಗೆ: ನಂಬಿಕೆಗಳ ಪ್ರಕಾರ ಭಾನುವಾರ ಸೂರ್ಯ ದೇವರ ಆರಾಧನೆ ಮಾಡುವುದು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಬೆಳಗ್ಗೆ ಬೇಗ ಎದ್ದು ಸೂರ್ಯನಿಗೆ ಅರ್ಘ್ಯ ಅರ್ಪಿಸಿ, ಉಪವಾಸ ಮಾಡಿದರೆ ಉತ್ತಮ.

    MORE
    GALLERIES

  • 88

    Puja Vidhi: ಯಾವ ದಿನ, ಯಾವ ದೇವರಿಗೆ ಪೂಜೆ ಸಲ್ಲಿಸಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES