Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

Lucky Color: ಪ್ರತಿಯೊಬ್ಬರಿಗೂ ಒಂದೊಂದು ಬಣ್ಣ ಇಷ್ಟವಾಗುತ್ತದೆ. ಆದರೆ ಈ ಇಷ್ಟದ ವಿಷಯದ ಹೊರತಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಗೂ ತನ್ನದೇ ಆದ ವಿಶೇಷ ಬಣ್ಣಗಳಿರುತ್ತವೆ. ರಾಶಿಯ ಪ್ರಕಾರ ಆ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಅದು ಅದೃಷ್ಟವನ್ನು ಹೆಚ್ಚಿಸುತ್ತದೆ ಮಾತ್ರವಲ್ಲದೇ ನಿಮ್ಮ ಜೀವನವನ್ನು ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾದ್ರೆ ಯಾವ ರಾಶಿಗೆ ಯಾವ ಬಣ್ಣ ಎಂಬುದು ಇಲ್ಲಿದೆ.

First published:

  • 112

    Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

    ಮೇಷ: ಈ ರಾಶಿಯವರಿಗೆ ಕೆಂಪು ಬಣ್ಣವು ಅದೃಷ್ಟದ ಬಣ್ಣ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಬಣ್ಣವು ಆಯಾ ರಾಶಿಗಳ ವ್ಯಕ್ತಿತ್ವವನ್ನು ತೋರಿಸುವ ಶಕ್ತಿ ಹೊಂದಿರುತ್ತದೆ. ಹಾಗೆಯೇ, ಈ ಕೆಂಪು ಬಣ್ಣವು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಈ ರಾಶಿಯವರಿಗೆ ಕೆಂಪು ಬಣ್ಣದ ಜೊತೆ, ಬಿಳಿ ಮತ್ತು ಹಳದಿ ಬಣ್ಣಗಳನ್ನು ಸಹ ಅದೃಷ್ಟವೆಂದು ಪರಿಗಣಿಸಲಾಗುತ್ತದೆ.

    MORE
    GALLERIES

  • 212

    Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

    ವೃಷಭ ರಾಶಿ: ಗುಲಾಬಿ ಮತ್ತು ಬಿಳಿ ಬಣ್ಣಗಳು ಜೀವನದ ಎಲ್ಲಾ ಅಂಶಗಳಲ್ಲಿ, ವಿಶೇಷವಾಗಿ ಹಣಕಾಸಿನ ವಿಚಾರವಾಗಿ ವೃಷಭ ರಾಶಿಯವರಿಗೆ ಲಾಭ ನೀಡಲಿದೆ. ಯಾವುದೇ ಹಣಕಾಸಿನ ವಹಿವಾಟಿನ ಸಮಯದಲ್ಲಿ ಈ ಬಣ್ಣವನ್ನು ಧರಿಸಿದರೆ ಯಶಸ್ಸು ಗ್ಯಾರಂಟಿ. ಇನ್ನು ಹಸಿರು ಬಣ್ಣ ಸಹ ಹಣವನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಇದು ಸಹ ನಿಮಗೆ ಅದೃಷ್ಟದ ಬಣ್ಣವಾಗಿದೆ.

    MORE
    GALLERIES

  • 312

    Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

    ಮಿಥುನ ರಾಶಿ: ಈ ರಾಶಿಯ ಜನರು ತಿಳಿ ಹಳದಿ, ಹಸಿರು ಬಣ್ಣಗಳನ್ನು ಅನುಕೂಲಕರ ಬಣ್ಣಗಳೆಂದು ಪರಿಗಣಿಸಬಹುದು. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಯಶಸ್ಸನ್ನು ತರುತ್ತದೆ. ಇದಲ್ಲದೇ, ನೀವು ಗುಲಾಬಿ, ಬಿಳಿಯಂತಹ ಬಣ್ಣಗಳನ್ನು ಸಹ ಆಯ್ಕೆ ಮಾಡಬಹುದು, ಏಕೆಂದರೆ ಇವುಗಳು ನಿಮಗೆ ಅದೃಷ್ಟವನ್ನು ತರುತ್ತವೆ.

    MORE
    GALLERIES

  • 412

    Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

    ಕಟಕ: ಈ ರಾಶಿಯ ಜನರು ಬಿಳಿ, ಬೂದು ಮತ್ತು ಬೆಳ್ಳಿಯಂತಹ ಬೆಚ್ಚಗಿನ ಬಣ್ಣಗಳನ್ನು ಆಯ್ಕೆ ಮಾಡಿಕೊಂಡರೆ ಬಹಳ ಉತ್ತಮ ಎನ್ನಲಾಗುತ್ತದೆ. ಇವು ನಿಮ್ಮ ಸೂಕ್ಷ್ಮ ಹಾಗೂ ಪ್ರೀತಿಯ ವ್ಯಕ್ತಿತ್ವವನ್ನು ಪ್ರತಿಧ್ವನಿಸುತ್ತವೆ. ಇದು ನಿಮ್ಮನ್ನು ಎಲ್ಲರಿಗೂ ಪ್ರೀತಿಯ ಮತ್ತು ಸುರಕ್ಷಿತ ವ್ಯಕ್ತಿಯಂತೆ ಕಾಣುವಂತೆ ಮಾಡುತ್ತದೆ. ಇದು ನಿಮ್ಮ ಅದೃಷ್ಟವನ್ನೂ ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ.

    MORE
    GALLERIES

  • 512

    Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

    ಸಿಂಹ: ಈ ರಾಶಿಯವರಿಗೆ ಗೋಲ್ಡನ್, ನೇರಳೆ, ಕಿತ್ತಳೆ ಬಣ್ಣಗಳು ಲಾಭ ನೀಡಲಿದೆ. ಇದು ದಿಟ್ಟ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ, ಏಕೆಂದರೆ ನಿಮ್ಮ ರಾಶಿಯ ಅಧಿಪತಿ ಸೂರ್ಯ, ಹಾಗಾಗಿ ಈ ಬಣ್ಣಗಳು ನಿಮಗೆ ಉತ್ತಮ.

    MORE
    GALLERIES

  • 612

    Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

    ಕನ್ಯಾ ರಾಶಿ: ಈ ರಾಶಿಯು ಭೂಮಿಯ ಅಂಶ ಹಾಗೂ ದ್ವಂದ್ವ ಸ್ವಭಾವವನ್ನು ಹೊಂದಿದೆ. ಅದಕ್ಕಾಗಿಯೇ ನೀಲಿ, ಹಸಿರು, ಹಳದಿ ಮತ್ತು ಬಿಳಿ ಬಣ್ಣಗಳು ನಿಮಗೆ ಅದೃಷ್ಟದ ಬಣ್ಣಗಳಾಗಿವೆ. ನಿಮ್ಮ ಶಾಂತ ಸ್ವಭಾವವನ್ನು ಈ ಬಣ್ಣಗಳಿಂದ ಮತ್ತಷ್ಟು ಹೆಚ್ಚಿಸಬಹುದು. ಇದು ನಿಮ್ಮ ವೈಯಕ್ತಿಕ ಸಂಬಂಧಗಳ ವಿಚಾರವಾಗಿ ಅದೃಷ್ಟವನ್ನು ತರುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 712

    Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

    ತುಲಾ: ನೀವು ತುಂಬಾ ಅದೃಷ್ಟಶಾಲಿ ಆಗಬೇಕು ಎಂದರೆ ಗಾಢ ಬಣ್ಣಗಳನ್ನು ಆಯ್ಕೆ ಮಾಡುವುದು ಉತ್ತಮ. ಬಿಳಿ ಮತ್ತು ತಿಳಿ ನೀಲಿ ಬಣ್ಣಗಳು ಈ ರಾಶಿಯವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ, ಆದ್ದರಿಂದ ಈ ರಾಶಿಯವರು ಅಂತಹ ಬಣ್ಣಗಳನ್ನು ಆಯ್ಕೆ ಮಾಡಬಹುದು. ಇದರಿಂದ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ.

    MORE
    GALLERIES

  • 812

    Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

    ವೃಶ್ಚಿಕ: ಬಿಳಿ, ಕೆಂಪು ಮತ್ತು ಕಂದು ಬಣ್ಣಗಳು ಈ ರಾಶಿಯವರಿಗೆ ಅದೃಷ್ಟವನ್ನು ಹೆಚ್ಚಿಸುತ್ತದೆ. ಇದು ಜೀವನದಲ್ಲಿ ಗುರಿ ಮತ್ತು ಉದ್ದೇಶವನ್ನು ತಲುಪಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೇ, ಕಿತ್ತಳೆ ಮತ್ತು ಹಳದಿ ಜೀವನದಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳಲ್ಲಿ ತುಂಬಾ ಉಪಯುಕ್ತವಾಗಿರಲಿದೆ.

    MORE
    GALLERIES

  • 912

    Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

    ಧನು ರಾಶಿ: ಗಾಢ ಹಳದಿ ಮತ್ತು ಕಿತ್ತಳೆ ಬಣ್ಣವು ನಿಮಗೆ ಅದೃಷ್ಟದ ಬಣ್ಣಗಳು, ಏಕೆಂದರೆ ಇದು ನಿಮ್ಮ ಚಮತ್ಕಾರಿ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ. ನೀಲಿ ಬಣ್ಣವು ಅದೃಷ್ಟದ ಬಣ್ಣವು ನಿಮ್ಮ ಸುತ್ತಲಿನ ಕೆಟ್ಟ ಜನರಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ.

    MORE
    GALLERIES

  • 1012

    Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

    ಮಕರ: ಈ ರಾಶಿಯವರು ಕಪ್ಪು, ನೇರಳೆ, ಕಡು ಕಂದು ಹಸಿರು ಬಣ್ಣಗಳನ್ನು ಅದೃಷ್ಟದ ಬಣ್ಣಗಳಾಗಿ ಆಯ್ಕೆ ಮಾಡಿಕೊಳ್ಳಬೇಕು. ಏಕೆಂದರೆ ಇವು ನಿಮ್ಮ ವ್ಯಾಪಾರ ಹಾಗೂ ವೈಯಕ್ತಿಕ ಜೀವನಕ್ಕೆ ಹೆಚ್ಚು ಪ್ರಯೋಜನಕಾರಿ ಎನ್ನಲಾಗುತ್ತದೆ. ಈ ಬಣ್ಣಗಳು ನಿಮಗೆ ಆರ್ಥಿಕ ಯಶಸ್ಸನ್ನು ತರುತ್ತವೆ ಮತ್ತು ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ.

    MORE
    GALLERIES

  • 1112

    Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

    ಕುಂಭ: ತಿಳಿ ನೀಲಿ, ನೇರಳೆ ಮತ್ತು ಬಿಳಿಯಂತಹ ಗಾಢವಾದ ಬಣ್ಣಗಳು ನಿಮಗೆ ಉತ್ತಮ ಪ್ರಯೋಜನ ನೀಡಲಿದೆ. ಇವುಗಳು ಪ್ರಯೋಜನಕಾರಿ ಮಾತ್ರವಲ್ಲ, ನೀವು ಯಾವಾಗಲೂ ಹುಡುಕುತ್ತಿರುವ ಸೃಜನಶೀಲ ಕಲ್ಪನೆಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಬಣ್ಣಗಳು ಖಂಡಿತವಾಗಿಯೂ ನಿಮ್ಮನ್ನು ಉತ್ತಮ ಸ್ಥಾನಕ್ಕೆ ಏರಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 1212

    Lucky Color: ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಕೈ ಹಿಡಿಯೋದ್ರಲ್ಲಿ ಡೌಟೇ ಇಲ್ಲ!

    ಮೀನ: ಹಳದಿ ಕಿತ್ತಳೆ ಬಣ್ಣಗಳು ನಿಮಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಕೆಲಸದ ವಿಚಾರವಾಗಿ ನಿಮಗೆ ಬೇಕಾದ ಸ್ಫೂರ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಹಾಗೆಯೇ ಗುಲಾಬಿ ಸಹ ನಿಮಗೆ ತುಂಬಾ ಅದೃಷ್ಟಶಾಲಿ ಬಣ್ಣ ಎನ್ನಬಹುದು. ಪ್ರಮುಖ ಕೆಲಸ ಮಾಡುವಾಗ ಈ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ.

    MORE
    GALLERIES