ಮಕರ ಸಂಕ್ರಾಂತಿಯ ರಾಶಿ ಬದಲಾವಣೆ ರಾತ್ರಿಯಲ್ಲಿ ಆಗುತ್ತಿರುವುದು ಈ ಗೊಂದಲಕ್ಕೆ ಮುಖ್ಯ ಕಾರಣ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವುದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಆ ದಿನವೇ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ಈ ಬಾರಿ ರಾತ್ರಿ ವೇಳೆಯಲ್ಲಿ ಸೂರ್ಯನ ರಾಶಿಯ ಬದಲಾವಣೆ ಆಗುತ್ತಿರುವುದರಿಂದ ಹಬ್ಬವನ್ನು ಯಾವಾಗ ಆಚರಿಸಬೇಕು ಎಂಬ ಬಗ್ಗೆ ಹಲವು ಅನುಮಾನಗಳು ಮೂಡಿವೆ.