ಸಂಕ್ರಾಂತಿ ಎಂದರೆ ಸೂರ್ಯನ ರಾಶಿಯ ಬದಲಾವಣೆ. ಸೂರ್ಯನು ಮಿಥುನ ರಾಶಿಯಿಂದ ಕಟಕ ರಾಶಿಗೆ ಸಾಗುವಾಗ ಅದನ್ನು ಕರ್ಕ ಸಂಕ್ರಾಂತಿ ಎಂದು ಕರೆಯುತ್ತಾರೆ. ಹಿಂದೂ ಧರ್ಮದ ಪ್ರಕಾರ, ಸೂರ್ಯನ ದಕ್ಷಿಣ ಪ್ರಯಾಣವು ಕರ್ಕ ಸಂಕ್ರಾಂತಿಯಿಂದ ಪ್ರಾರಂಭವಾಗುತ್ತದೆ, ಅಂದರೆ ಸೂರ್ಯ ದೇವರು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಚಲಿಸುತ್ತಾನೆ. ಕರ್ಕ ಸಂಕ್ರಾಂತಿಯನ್ನು ಶ್ರಾವಣ ಸಂಕ್ರಾಂತಿ ಎಂದೂ ಕರೆಯುತ್ತಾರೆ.