ವರ್ಷದಲ್ಲಿ ಬರುವ ಪ್ರತಿ ಅಮವಾಸ್ಯೆಗಳು ಒಂದೊಂದು ಪ್ರಾಮುಖ್ಯತೆ ಹೊಂದಿದ್ದು ಇದರ ಆಚರಣೆಗಳು ಮಹತ್ವ ಪಡೆದಿವೆ. ಆಷಾಢ ಮಾಸದಲ್ಲಿ ಬರುವ ಅಮವಾಸ್ಯೆಯನ್ನು ಹಲಹರಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ.
ವರ್ಷದಲ್ಲಿ ಬರುವ ಪ್ರತಿ ಅಮವಾಸ್ಯೆಗಳು ಒಂದೊಂದು ಪ್ರಾಮುಖ್ಯತೆ ಹೊಂದಿದ್ದು ಇದರ ಆಚರಣೆಗಳು ಮಹತ್ವ ಪಡೆದಿವೆ. ಇನ್ನುಆಷಾಢ ಮಾಸವನ್ನು ಪೂಜೆಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆಷಾಢ ಮಾಸದಲ್ಲಿ ಬರುವ ಅಮವಾಸ್ಯೆಯನ್ನು ಹಲಹರಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ.
2/ 8
ಅಮಾವಾಸ್ಯೆ ಎಂದರೆ ಸೂರ್ಯ (Sun) ಮತ್ತು ಚಂದ್ರರ ಸಂಯೋಗದ ಸಮಯ. ಈ ದಿನ ಇಬ್ಬರೂ ಒಂದೇ ರಾಶಿಯಲ್ಲಿ ಇರುತ್ತಾರೆ. ಹೀಗಾಗಿ ಅಮವಾಸ್ಯೆ ಎಂದು ಪಿತೃ ಪೂಜೆ ಮಾಡುವುದು ಪಿಂಡಪ್ರದಾನ ಮಾಡುವುದು ಶುಭ ಎಂದು ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖ ಮಾಡಲಾಗಿದೆ
3/ 8
ವಾಸ್ತವವಾಗಿ, ಈ ಅಮಾವಾಸ್ಯೆಯಂದು, ಪೂರ್ವಜರನ್ನು ನದಿಯಲ್ಲಿ ಸ್ನಾನ ಮಾಡುವ ಮೂಲಕ ಪೂಜಿಸಲಾಗುತ್ತದೆ. ಇದಲ್ಲದೇ ನೇಗಿಲು, ಹೊಲಗಳಲ್ಲಿ ಬಳಸುವ ಪರಿಕರಗಳಿಗೂ ಪೂಜೆ ಸಲ್ಲಿಸುತ್ತಾರೆ. ರೈತರಿಗೆ ಈ ದಿನ ಬಹಳ ಮುಖ್ಯ. ರೈತರು ನೇಗಿಲ ಪೂಜೆಯನ್ನು ಸಂಪೂರ್ಣ ವಿಧಿ ವಿಧಾನಗಳೊಂದಿಗೆ ಮಾಡುತ್ತಾರೆ
4/ 8
ಈ ಬಾರಿಯ ಆಷಾಢ ಅಮಾವಾಸ್ಯೆಯು ಜೂನ್ 28 ರಂದು ಮಂಗಳವಾರದಂದು ಬಂದಿದೆ. ಆಷಾಢ ಅಮಾವಾಸ್ಯೆಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸೂರ್ಯ ದೇವರಿಗೆ ನೀರಿನ ಅರ್ಘ್ಯ ಕೊಡುವುದು ಅತ್ಯಂತ ಮಹತ್ವದ್ದು. ಈ ದಿನ ಜನರು ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಾರೆ. ಪೂರ್ವಜರ ಶಾಂತಿಗಾಗಿ ದಾನ ಮಾಡುತ್ತಾರೆ.
5/ 8
ಈ ದಿನ ಯಾಗವನ್ನು ಮಾಡುವುದರಿಂದ ಅನಂತ ಫಲ ಸಿಗುತ್ತದೆ. ಪೂರ್ವಜರ ಶಾಂತಿಗಾಗಿ ಬಡವರ ಸೇವೆ ಮಾಡಬೇಕು ಮತ್ತು ನಿರ್ಗತಿಕರಿಗೆ ಆಹಾರ ಮತ್ತು ಉಣಬಡಿಸಬೇಕು ಜೊತೆಗೆ ಅವರ ಸ್ಥಾನಮಾನಕ್ಕೆ ಅನುಗುಣವಾಗಿ ದಾನ ಮತ್ತು ದಕ್ಷಿಣೆಯನ್ನು ನೀಡಬೇಕು.
6/ 8
ಈ ದಿನದಂದು ಉಪವಾಸವನ್ನು ಮಾಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಶಾಂತಿಗಾಗಿ ನೆಲೆಸುತ್ತದೆ ಎಂದು ನಂಬಲಾಗಿದೆ. ಈ ದಿನ, ಪೂರ್ವಜರ ಶಾಂತಿಗಾಗಿ ತರ್ಪಣ ಮತ್ತು ಶ್ರದ್ಧಾವನ್ನು ಸಹ ನಡೆಸಲಾಗುತ್ತದೆ.
7/ 8
ಅಮಾವಾಸ್ಯೆ ಯ ದಿನದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಬಳಸಬಾರದು. ತಿಳಿ ಬಣ್ಣದ ಶುಭ್ರವಾದ ಬಟ್ಟೆಗಳನ್ನೇ ಧರಿಸಬೇಕು. ಇದಲ್ಲದೇ ಅಮವಾಸ್ಯೆಯ ದಿನ ಕೋಪಗೊಳ್ಳುವುದನ್ನು ತಪ್ಪಿಸಬೇಕು. ಅಲ್ಲದೆ ಬ್ರಹ್ಮಚರ್ಯವನ್ನು ಅನುಸರಿಸಬೇಕು
8/ 8
ಅಮವಾಸ್ಯೆಯ ದಿನದಂದು ಉಪವಾಸ ಮಾಡುವವರು ಉಪ್ಪನ್ನು ಸೇವಿಸಬಾರದು. ಸಾಧ್ಯವಾದರೆ ಈ ದಿನ ಉಪವಾಸ ಮಾಡುವುದು ಒಳಿತು. ಇದರೊಂದಿಗೆ ಮನೆಯಲ್ಲಿ ಕತ್ತಲೆ ಇರಬಾರದು. ವಿಶೇಷವಾಗಿ ಸಂಜೆ ಮನೆಯಲ್ಲಿ ದೀಪ ಬೆಳಗಿಸಲು ಮರೆಯದಿರಿ