Makara Sankranti 2023: ಸಂಕ್ರಾಂತಿ ಹಬ್ಬದ ದಿನ ರಾಶಿ ಪ್ರಕಾರ ಈ ವಸ್ತುಗಳನ್ನು ದಾನ ಮಾಡಿದ್ರೆ ಶನಿ ಕಾಟ ಇರಲ್ಲ
Makara Sankranti 2023: ಮಕರ ಸಂಕ್ರಾಂತಿಯ ದಿನ ದಾನ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಈ ದಿನ ದಾನ ಮಾಡುವುದರಿಂದ ಅನೇಕ ಬಾರಿ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಮಕರ ಸಂಕ್ರಾಂತಿಯಂದು ದಾನ ಮಾಡುವುದರಿಂದ ಸೂರ್ಯ, ಶನಿ ಸೇರಿದಂತೆ 6 ಗ್ರಹಗಳಿಗೆ ಸಂಬಂಧಿಸಿದ ದೋಷಗಳು ನಿವಾರಣೆಯಾಗುತ್ತದೆ ಎನ್ನುತ್ತಾರೆ. ಸಂಕ್ರಾಂತಿಯಂದು ಯಾವ ವಸ್ತುಗಳನ್ನು ದಾನ ಮಾಡಬೇಕು ಎಂಬುದು ಇಲ್ಲಿದೆ.
ಮೇಷ ರಾಶಿಯವರು ಮಕರ ಸಂಕ್ರಾಂತಿಯ ದಿನದಂದು ಬಡವರಿಗೆ ಎಳ್ಳನ್ನು ದಾನ ಮಾಡಿ ಅವರ ಇಷ್ಟಾರ್ಥಗಳನ್ನು ಪೂರೈಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ ಎನ್ನಲಾಗುತ್ತದೆ.
2/ 12
ಮಕರ ಸಂಕ್ರಾಂತಿಯ ದಿನವು ವೃಷಭ ರಾಶಿಯವರಿಗೆ ಅತ್ಯಂತ ಮಂಗಳಕರ ದಿನ ಎನ್ನಬಹುದು. ಈ ದಿನ ನೀವು ಉಣ್ಣೆಯ ಬಟ್ಟೆಗಳನ್ನು ದಾನ ಮಾಡಬೇಕು. ಆಗ ಶನಿಯ ಕಾಟದಿಂದ ಮುಕ್ತಿ ಸಿಗುತ್ತದೆ,
3/ 12
ಮಕರ ಸಂಕ್ರಾಂತಿಯ ದಿನ ಮಿಥುನ ರಾಶಿಯವರು ಬಡವರಿಗೆ ಅನ್ನದಾನ ಮಾಡಬೇಕು. ಮಿಥುನ ರಾಶಿಯವರು ಈ ದಾನ ಮಾಡುವುದರಿಂದ ಜೀವನದಲ್ಲಿರುವ ಸಮಸ್ಯೆಗಳು ನಿವಾರಣೆಯಾಗುತ್ತದೆ.
4/ 12
ಮಕರ ಸಂಕ್ರಾಂತಿಯ ದಿನದಂದು ಕರ್ಕಾಟಕ ರಾಶಿಯವರು ಉಣ್ಣೆಯ ಬಟ್ಟೆ, ಎಳ್ಳು ಮತ್ತು ಸಾಬೂನು ಇತ್ಯಾದಿಗಳನ್ನು ದಾನ ಮಾಡಬೇಕು. ಇದರಿಂದ ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸ ಪೂರ್ಣವಾಗುತ್ತದೆ.
5/ 12
ಈ ದಿನ ಸಿಂಹ ರಾಶಿಯವರು ಬಡವರಿಗೆ ಎಳ್ಳು ಮತ್ತು ಹೊದಿಕೆಗಳನ್ನು ದಾನ ಮಾಡಬೇಕು. ಇದರಿಂದ ಸಿಂಹ ರಾಶಿಯವರ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ.
6/ 12
ಮಕರ ಸಂಕ್ರಾಂತಿಯ ದಿನದಂದು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಕನ್ಯಾ ರಾಶಿಯವರು ಉದ್ದಿನಬೇಳೆ, ಎಳ್ಳು ಅಥವಾ ನವಧಾನ್ಯಗಳನ್ನು ದಾನ ಮಾಡಬೇಕು.
7/ 12
ತುಲಾ ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು ತಮ್ಮ ಇಚ್ಛೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವಸ್ತುಗಳನ್ನು ದಾನ ಮಾಡಬೇಕು. ತುಲಾ ರಾಶಿಯವರು ಈ ದಿನ ಎಣ್ಣೆ ಮತ್ತು ಹತ್ತಿಯನ್ನು ದಾನ ಮಾಡಬಹುದು
8/ 12
ಮಕರ ಸಂಕ್ರಾಂತಿಯ ದಿನದಂದು ವೃಶ್ಚಿಕ ರಾಶಿಯವರಿಗೆ ಹೊಸ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ಮಾಡಿದ ಖಿಚಡಿಯನ್ನು ದಾನ ಮಾಡುವುದು ಸವರ ಜೀವನದ ಸಮಸ್ಯೆಗೆ ಮುಕ್ತಿ ನೀಡುತ್ತದೆ.
9/ 12
ಮಕರ ಸಂಕ್ರಾಂತಿಯ ದಿನವು ಧನು ರಾಶಿಯ ಜನರಿಗೆ ಬಹಳ ಮುಖ್ಯ. ಅವರ ಸಾಡೇಸಾತಿ ಮುಗಿಯಲಿದೆ, ಹಾಗಾಗಿ ಈ ದಿನ ಧನು ರಾಶಿಯವರು ಬೇಳೆಕಾಳು ಮತ್ತು ಖಿಚಡಿಯನ್ನು ದಾನ ಮಾಡಬೇಕು.
10/ 12
ಮಕರ ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಉಣ್ಣೆಯ ಬಟ್ಟೆಗಳು, ಹೊದಿಕೆಗಳು ಮತ್ತು ಪುಸ್ತಕಗಳನ್ನು ದಾನ ಮಾಡಬೇಕು. ಇದರೊಂದಿಗೆ ನೀವು ಬಡವರಿಗೆ ಹೊಸ ಧಾನ್ಯಗಳಿಂದ ಖಿಚಡಿಯನ್ನು ಸಹ ದಾನ ಮಾಡಬಹುದು.
11/ 12
ಮಕರ ಸಂಕ್ರಾಂತಿಯ ದಿನದಂದು, ಕುಂಭ ರಾಶಿಯವರು ತಮ್ಮ ಅದೃಷ್ಟವನ್ನು ಹೆಚ್ಚಿಸಿಕೊಳ್ಳಲು ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಇಷ್ಟದ ವಸ್ತುಗಳನ್ನು ದಾನ ಮಾಡಬೇಕು.
12/ 12
ಮಕರ ಸಂಕ್ರಾಂತಿಯ ದಿನದಂದು ಬೇಳೆಕಾಳು ಮತ್ತು ಧಾನ್ಯಗಳನ್ನು ದಾನ ಮಾಡಬೇಕು. ಇದು ಪಾಪಗಳಿಂದ ಮುಕ್ತಿಯನ್ನು ನೀಡುತ್ತದೆ ಮತ್ತು ಅದೇ ಸಮಯದಲ್ಲಿ ಶನಿಯ ಕಾಟದಿಂದ ಮುಕ್ತಿ ನೀಡುತ್ತದೆ.