ಲಲಿತಾಸಹಸ್ರನಾಮಕ್ಕೂ ಮುನ್ನ ಬರುವ ಲಲಿತಾಂಬೆಯ ಕಥೆ ಈ ರೀತಿ ಇದೆ : ಶಿವನು ಮನ್ಮಥನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದನು, ಚಿತ್ರಕರ್ಮನು ಮನ್ಮಥನ ಬೂದಿಯನ್ನ ಒಟ್ಟುಗೂಡಿಸಿ ಪುರುಷಾಕೃತಿಯನ್ನ ನಿರ್ಮಾಣ ಮಾಡಿದನು, ಶಿವನ ದೃಷ್ಟಿ ಬಿದ್ದಕೂಡಲೆ ಆಕೃತಿಗೆ ಜೀವ ಬರುತ್ಚಿತದೆ. ಚಿತ್ರಕರ್ಮನಿಂದ ಶತರುದ್ರ ಮಂತ್ರಾನುಷ್ಠಾನದ ಉಪದೇಶಪಡೆದು ರುದ್ರನನ್ನು ಪೂಜಿಸಿ ಅರವತ್ತು ಸಾವಿರ ವರ್ಷಗಳವರೆಗೆ ಚಕ್ರವರ್ತಿಯಾಗುವಂತೆ ವರಪಡೆದು ಭಂಡ ಎಂದು ಪ್ರಸಿದ್ದನಾದನು.
ಆ ಯಜ್ಞ ಕುಂಡದಿಂದ ಅನುಪಮ ತೇಜದಿಂದ ಕೂಡಿದ ಒಂದು ಚಕ್ರಾಕಾರವು ಉದ್ಭವಿಸಿತು, ಆ ಚಕ್ರದ ಮಧ್ಯದಲ್ಲಿ ಸೂರ್ಯ ಪ್ರಭೆಯುಳ್ಳವಳು, ಬ್ರಹ್ಮ ವಿಷ್ಣು ಶಿವ ಸ್ವರೂಪಳೂ, ಸೌಂದರ್ಯಸಾರ ಸೀಮಾಂತಳೂ, ಆನಂದ ರಸ ಸಾಗರಳೂ, ಜಪಾ ಕುಸುಮದ ಕಾಂತಿಯುಳ್ಳವಳೂ, ದಾಳಿಂಬೆ ಹೂ ಬಣ್ಣದ ಸೀರೆಯನ್ನು ಉಟ್ಟಿರುವವಳೂ, ಸರ್ವಾಭರಣ ಭೂಷಿತಳೂ, ಶೃಂಗಾರರಸಕ್ಕೆ ಆಲಯದಂತಿರು ವವಳೂ, ಪಾಶ-ಕುಶ-ಇಕ್ಷು-ಕೋದಂಡ-ಪಂಚ ಬಾಣಗಳಿಂದ ಶೋಭಿಸುತ್ತಿರುವ ಕರಗಳುಳ್ಳವಳೂ ಆದ ಶ್ರೀ ಲಲಿತಾಂಬೆಯು ಅವತರಿಸಿದಳು.
ಯದಕ್ಷರ ಪದ ಭ್ರಷ್ಟಂ ಮಾತ್ರಾಹೀನಂ ತು ಯದ್ ಭವೇತ್ ತತ್ ಸರ್ವಂ ಕ್ಷ್ಮಯತಾಂ ದೇವೀಂ ಪ್ರಸೀದಾ ಪರಮೇಶ್ವರಿ ಈ ಮಂತ್ರದ ಮೂಲಕ ನೀವು ನಿಮ್ಮ ತಪ್ಪನ್ನು ದೇವರ ಮುಂದೆ ಇಟ್ಟು ಕ್ಷಮೆ ಕೇಳಬಹುದು. ನಿಮ್ಮ ಅನನ್ಯ ಭಕ್ತಿಗೆ, ಶ್ರದ್ಧೆಗೆ ಖಂಡಿತಾ ದೇವರ ಆಶೀರ್ವಾದ ಕ್ಷಮೆ ಇರುತ್ತದೆ. ಆದರೆ, ಅದಕ್ಕಿಂತ ಮುಂಚೆ ತಪ್ಪೇ ಆಗದಂತೆ ನೋಡಿಕೊಳ್ಳುವುದು ಕೂಡಾ ಉತ್ತಮವೇ. ಬೆಳಗ್ಗೆ ಮತ್ತು ಸಂಜೆಯ ದೀಪಾರಾಧನೆಯ ನಂತರ ಲಲಿತಾ ಸಹಸ್ರನಾಮವನ್ನು ಪಠಿಸಬೇಕು.