ಜ್ಯೋತಿಷ್ಯ ಶಾಸ್ತ್ರದಲ್ಲಿ ಕುಜದೋಷ ಬಹಳ ಮುಖ್ಯ. ಕಾಳಗ, ಯುದ್ಧ, ಕೋಪ, ಕ್ರೋಧ ಮತ್ತು ಆತುರಕ್ಕೆ ಮಂಗಳ ಕಾರಣ ಎನ್ನಲಾಗುತ್ತದೆ. ಆದ್ದರಿಂದ, ಜಾತಕದಲ್ಲಿ ಮಂಗಳನ ಸ್ಥಾನವು ಮುಖ್ಯವಾಗುತ್ತದೆ. ಮಂಗಳ ದುಷ್ಟ ಗ್ರಹ ಎನ್ನಲಾಗುತ್ತದೆ. ಹಠಾತ್ ಕೆಟ್ಟದ್ದನ್ನು ಮಾಡುವುದರಲ್ಲಿ ಮಂಗಳಕ್ಕಿಂತ ಬೇರೆ ಗ್ರಹವಿಲ್ಲ. ಕುಜ ಲಗ್ನದಿಂದ 1, 2, 4, 7, 8, 12 ನೇ ಸ್ಥಾನದಲ್ಲಿದ್ದಾಗ ಕುಜ ದೋಷ ಉಂಟಾಗುತ್ತದೆ. ವೈವಾಹಿಕ ಜೀವನದಲ್ಲಿ ಈ ಸ್ಥಾನಗಳು ಬಹಳ ಮುಖ್ಯ. ಆದ್ದರಿಂದ ಮಂಗಳದಂತಹ ದೋಷಪೂರಿತ ಗ್ರಹವು ಈ ಸ್ಥಾನದಲ್ಲಿದ್ದಾಗ, ವೈವಾಹಿಕ ಜೀವನವು ಹಾನಿಗೊಳಗಾಗುವ ಸಾಧ್ಯತೆಯಿದೆ.
ಮಾಂಗಲ್ಯಕ್ಕೆ ಅಪಾಯ: ವಧು-ವರರಿಬ್ಬರಿಗೂ ಕುಜದೋಷವಿದ್ದರೆ ಆ ದೋಷ ಪರಿಹಾರವಾಗುತ್ತದೆ. ಪತಿ ಪತ್ನಿಯರಲ್ಲಿ ಒಬ್ಬರಿಗೆ ಮಾತ್ರ ದೋಷ ಇರುವುದು ಒಳ್ಳೆಯದಲ್ಲ. ಸಾಮಾನ್ಯವಾಗಿ ಇದು ವೈವಾಹಿಕ ಜೀವನವನ್ನು ಹಾಳು ಮಾಡುತ್ತದೆ. ಕುಜ ದೋಷವನ್ನು ಅಂಗಾರಕ ದೋಷ ಮತ್ತು ಮಾಂಗಲ್ಯ ದೋಷ ಎಂದೂ ಕರೆಯುತ್ತಾರೆ. ಅಂದರೆ ಮಾಂಗಲ್ಯಕ್ಕೆ ಧಕ್ಕೆ ಬರುತ್ತದೆ. ಹಾಗಾಗಿ ಮದುವೆಗೂ ಮುನ್ನ ವಧು-ವರರ ಜಾತಕ ನೋಡಿ ದೋಷ ಇದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸಬೇಕು.
1 ನೇ ಸ್ಥಾನ: ಯಾವುದೇ ಜಾತಕದಲ್ಲಿ ಮಂಗಳ 1 ನೇ ಸ್ಥಾನದಲ್ಲಿದ್ದಾಗ ಪ್ರಧಾನ ಕುಜ ದೋಷ ಉಂಟಾಗುತ್ತದೆ. ಲಗ್ನದಲ್ಲಿ ಅಥವಾ 1ನೇ ಮನೆಯಲ್ಲಿ ಮಂಗಳ ಇರುವ ವ್ಯಕ್ತಿಗೆ ಕೋಪ ಜಾಸ್ತಿಯಂತೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರಂತೆ. ಇದಲ್ಲದೇ, ಲೈಂಗಿಕತೆಯಲ್ಲಿ ಸಹ ಸಮಸ್ಯೆ ಅವರನ್ನು ಕಾಡುತ್ತದೆ. ಸಾಮಾನ್ಯವಾಗಿ ಇಂತಹ ರೋಗಲಕ್ಷಣಗಳು ವೈವಾಹಿಕ ಜೀವನವನ್ನು ಹಾಳುಮಾಡುವ ಸಾಧ್ಯತೆಯಿದೆ.