ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು-ಶನಿ, ಗುರು-ರಾಹು ಅಥವಾ ಗುರು-ಕೇತುಗಳು ಜಾತಕ ಚಕ್ರದಲ್ಲಿ ಒಟ್ಟಿಗೆ ಭೇಟಿಯಾದಾಗ, ಗುರು ಚಾಂಡಾಲ ಯೋಗವು ರೂಪುಗೊಳ್ಳುತ್ತದೆ. ಜ್ಯೋತಿಷ ಶಾಸ್ತ್ರದಲ್ಲಿ ಗುರು ಬಹಳ ಒಳ್ಳೆಯ ಗ್ರಹ ಎನ್ನಲಾಗುತ್ತದೆ. ಆದರೆ ಶನಿ ಹಾಗೂ ಕೇತು ಬಹಳ ಅಪಾಯದ ಗ್ರಹಗಳು. ಈ ಎರಡು ಗುರು ಗ್ರಹವನ್ನು ಸೇರಿದಾಗ ಅದು ಗುರು ಚಾಂಡಾಲ ಯೋಗವಾಗುತ್ತದೆ. ಈ ಕಾರಣದಿಂದಾಗಿ ಗುರುವಿನ ಗುಣಲಕ್ಷಣಗಳು ಪರಿಣಾಮ ಬೀರುತ್ತವೆ. ಇದರಿಂದ ಗುರು ಕಟ್ಟ ಪರಿಣಾಮ ಬೀರುತ್ತಾನೆ.
ಜಾತಕ ಚಕ್ರವನ್ನು ಅವಲಂಬಿಸಿ ಗುರು ದಶಾ ಅಥವಾ ಅಂತರದಶಾ ನಡೆಯುತ್ತಿರುವಾಗ ಇಂತಹ ಸಮಸ್ಯೆ ಆಗುತ್ತದೆ., ಜಾತಕ ಚಕ್ರದ ಪ್ರಕಾರ, ಗುರುವು ದಶಾ ಅಧಿಪತಿಯಾಗಿದ್ದರೆ, ಅಂದರೆ ಉದ್ಯೋಗ ಸ್ಥಾನದ ಅಧಿಪತಿಯಾಗಿದ್ದರೆ, ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆ ಇರುತ್ತದೆ. ಈ ಗುರು ಚಂಡಾಲ ಯೋಗದ ಫಲಿತಾಂಶಗಳು ಯಾವ ರಾಶಿ, ಯಾವ ಸ್ಥಳದಲ್ಲಿ ನಡೆಯುತ್ತವೆ ಎನ್ನುವುದನ್ನೂ ಅವಲಂಬಿಸಿ ಬದಲಾಗುತ್ತದೆ.